- Kannada News Photo gallery Cricket photos Record-Breaking IPL Innings: Highest Runs via Boundaries and Sixes
IPL 2025: ಕೇವಲ ಬೌಂಡರಿ, ಸಿಕ್ಸರ್‌ಗಳಿಂದಲೇ ಶತಕ ಪೂರೈಸಿದ 8 ಬ್ಯಾಟರ್ಸ್ ಯಾರ್ಯಾರು ಗೊತ್ತಾ?
Record-Breaking IPL Innings: ಐಪಿಎಲ್‌ನಲ್ಲಿ ಅನೇಕ ಶತಕಗಳು ಸಿಡಿದಿವೆ, ಆದರೆ ಬೌಂಡರಿ ಮತ್ತು ಸಿಕ್ಸರ್‌ಗಳಿಂದ ಮಾತ್ರ ಶತಕ ಸಾಧಿಸಿದ್ದು ವಿರಳ. ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಅಭಿಷೇಕ್ ಶರ್ಮಾ, ಎಬಿ ಡಿವಿಲಿಯರ್ಸ್, ಯಶಸ್ವಿ ಜೈಸ್ವಾಲ್, ಸನತ್ ಜಯಸೂರ್ಯ, ರಿಷಭ್ ಪಂತ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ಈ ಸಾಧನೆಯನ್ನು ಮಾಡಿದ ಟಾಪ್ ಪ್ಲೇಯರ್ಸ್ ಆಗಿದ್ದಾರೆ.
Updated on: Apr 13, 2025 | 4:40 PM

ಐಪಿಎಲ್‌ನಲ್ಲಿ ಅನೇಕ ಬ್ಯಾಟ್ಸ್‌ಮನ್‌ಗಳು ಶತಕಗಳನ್ನು ಬಾರಿಸುವುದನ್ನು ನೋಡಿದ್ದೇವೆ. ಆದರೆ, ತಮ್ಮ ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ಶತಕ ಪೂರೈಸಿದ ಬ್ಯಾಟ್ಸ್‌ಮನ್‌ಗಳು ಸಿಗುವುದು ವಿರಳ. ಐಪಿಎಲ್ 2008 ರಲ್ಲಿ ಪ್ರಾರಂಭವಾದರೂ, 2025 ರ ಹೊತ್ತಿಗೆ ಇಲ್ಲಿಯವರೆಗೆ ಕೇವಲ 8 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಸಿಕ್ಸರ್ ಮತ್ತು ಬೌಂಡರಿಗಳಿಂದ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ, ಅವರು ಐಪಿಎಲ್ 2013 ರಲ್ಲಿ ಆಡಿದ 175 ರನ್ ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳಿಂದ 156 ರನ್ ಗಳಿಸಿದ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 13 ಬೌಂಡರಿ ಮತ್ತು 17 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇದಲ್ಲದೆ ಕ್ರಿಸ್ ಗೇಲ್ ಈ ಹಿಂದೆ 2012 ರ ಐಪಿಎಲ್‌ನಲ್ಲಿಯೂ 128 ರನ್ಗಳ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳ ಮೂಲಕ 106 ರನ್ ಗಳಿಸಿದ್ದರು. ಅವರು 7 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಬಾರಿಸಿದ್ದರು. ಹಾಗೆಯೇ 2015 ರ ಐಪಿಎಲ್‌ನಲ್ಲಿಯೂ 115 ರನ್ಗಳ ಇನ್ನಿಂಗ್ಸ್ ಆಡಿದ್ದ ಕ್ರಿಸ್ ಗೇಲ್ ಬೌಂಡರಿಗಳಿಂದಲೇ 100 ರನ್ ಗಳಿಸಿದ್ದರು. ಈ ವೇಳೆ ಅವರು 7 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಂಡನ್ ಮೆಕಲಮ್ 2008 ರ ಐಪಿಎಲ್‌ನಲ್ಲಿ 158 ರನ್ಗಳ ಇನ್ನಿಂಗ್ಸ್ ಆಡಿದ್ದರು. ಅದರಲ್ಲಿ ಬೌಂಡರಿಗಳಿಂದ 118 ರನ್ ಗಳಿಸಿದ್ದರು. ಮೆಕಲಮ್ ಆರ್‌ಸಿಬಿ ವಿರುದ್ಧದ ಆ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬಿರುಗಾಳಿಯ ಇನ್ನಿಂಗ್ಸ್ ಆಡಿದ ಅಭಿಷೇಕ್ ಶರ್ಮಾ, ಸಿಕ್ಸರ್ ಮತ್ತು ಬೌಂಡರಿಗಳಿಂದ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ 141 ರನ್ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳಿಂದ 116 ರನ್ ಗಳಿಸಿದರು. ಈ ವೇಳೆ ಅಭಿಷೇಕ್ ಶರ್ಮಾ 14 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿದರು.

ಎಬಿ ಡಿವಿಲಿಯರ್ಸ್ 2016 ರಲ್ಲಿ 129 ರನ್ಗಳ ಇನ್ನಿಂಗ್ಸ್ ಆಡಿದ್ದ ಡಿವಿಲಿಯರ್ಸ್ 10 ಬೌಂಡರಿ ಮತ್ತು 12 ಸಿಕ್ಸರ್‌ಗಳ ಮೂಲಕ 112 ರನ್ ಕಲೆಹಾಕಿದ್ದರು. ಹಾಗೆಯೇ 2015 ರ ಐಪಿಎಲ್‌ನಲ್ಲಿಯೂ ಎಬಿ ಡಿವಿಲಿಯರ್ಸ್ 133 ರನ್ ಗಳಿಸಿದ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳ ಮೂಲಕ 100 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಅವರು 19 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಯಶಸ್ವಿ ಜೈಸ್ವಾಲ್ ಕೂಡ ಐಪಿಎಲ್ 2023 ರಲ್ಲಿ 124 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ 16 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ 112 ರನ್ ಕಲೆಹಾಕಿದ್ದರು.

2008 ರ ಐಪಿಎಲ್‌ನಲ್ಲಿ ಸನತ್ ಜಯಸೂರ್ಯ 114 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಬೌಂಡರಿಗಳ ಮೂಲಕ 102 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಜಯಸೂರ್ಯ 9 ಬೌಂಡರಿ ಮತ್ತು 11 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಐಪಿಎಲ್ 2018 ರಲ್ಲಿ ಸನ್‌ರೈಸರ್ಸ್ ವಿರುದ್ಧ ರಿಷಭ್ ಪಂತ್ 128 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಕೇವಲ ಬೌಂಡರಿಗಳಿಂದಲೇ 102 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಪಂತ್ 15 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಐಪಿಎಲ್ 2022 ರಲ್ಲಿ, ಕ್ವಿಂಟನ್ ಡಿ ಕಾಕ್ 140 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಬೌಂಡರಿಗಳಿಂದ 100 ರನ್ ಕಲೆಹಾಕಿದ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದ್ದರು.
























