IND vs ENG: ಮ್ಯಾಂಚೆಸ್ಟರ್​ನಲ್ಲಿ ಇಮ್ರಾನ್ ಖಾನ್​ ದಾಖಲೆಯನ್ನು ಮುರಿಯುತ್ತಾರಾ ಬುಮ್ರಾ?

Updated on: Jul 21, 2025 | 8:47 PM

Jasprit Bumrah Record: ಜಸ್ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎರಡು ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ನಾಲ್ಕನೇ ಪಂದ್ಯದಲ್ಲಿ ಐದು ವಿಕೆಟ್ ಪಡೆದರೆ, ಅವರು ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಬುಮ್ರಾ ಅವರಿಗೆ ಇತಿಹಾಸ ನಿರ್ಮಿಸುವ ಅವಕಾಶವಿದೆ.

1 / 6
ಇಂಗ್ಲೆಂಡ್ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಪ್ರದರ್ಶನ ಇದುವರೆಗೆ ಅದ್ಭುತವಾಗಿದೆ. ಈವರೆಗೆ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ ಎರಡೂ ಪಂದ್ಯಗಳ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಆದಾಗ್ಯೂ ಭಾರತ ತಂಡ ನಾನಾ ಕಾರಣಗಳಿಂದಾಗಿ ಬುಮ್ರಾ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ.

2 / 6

3 / 6
ಜಸ್ಪ್ರೀತ್ ಬುಮ್ರಾ ಅವರ ಪ್ರಸ್ತುತ ಫಾರ್ಮ್ ನೋಡಿದರೆ, ಅವರು ಮ್ಯಾಂಚೆಸ್ಟರ್‌ನಲ್ಲೂ ಐದು ವಿಕೆಟ್ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅದರಂತೆ ಮ್ಯಾಂಚೆಸ್ಟರ್ ಟೆಸ್ಟ್​ನ ಒಂದು ಇನ್ನಿಂಗ್ಸ್‌ನಲ್ಲಿ ಬುಮ್ರಾ ಐದು ವಿಕೆಟ್‌ಗಳನ್ನು ಪಡೆದರೆ, ಅದು ಅವರ ಐದು ವಿಕೆಟ್ ಗೊಂಚಲುಗಳ ಹ್ಯಾಟ್ರಿಕ್ ಆಗುವುದಲ್ಲದೆ, ಇಮ್ರಾನ್ ಖಾನ್ ಅವರ ದೊಡ್ಡ ದಾಖಲೆಯನ್ನೂ ಮುರಿಯುತ್ತದೆ.

4 / 6
ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಗೊಂಚಲು ಪಡೆದ ಏಷ್ಯಾದ ವೇಗದ ಬೌಲರ್ ಆಗುವ ಅವಕಾಶ ಬುಮ್ರಾ ಅವರಿಗಿದೆ. ಬುಮ್ರಾ ಇದುವರೆಗೆ ಈ ದೇಶದಲ್ಲಿ ನಾಲ್ಕು ಬಾರಿ ಐದು ವಿಕೆಟ್ ಗೊಂಚಲುಗಳನ್ನು ಪಡೆದಿದ್ದಾರೆ. ಇತ್ತ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಕೂಡ ಇಂಗ್ಲೆಂಡ್‌ನಲ್ಲಿ ಅಷ್ಟೇ ಸಂಖ್ಯೆಯ ಐದು ವಿಕೆಟ್ ಗೊಂಚಲುಗಳನ್ನು ಹೊಂದಿದ್ದಾರೆ.

5 / 6
ಈಗ ಬುಮ್ರಾ ಮತ್ತೊಮ್ಮೆ ಈ ಸಾಧನೆ ಮಾಡಿದರೆ, ಅವರು ಈ ವಿಷಯದಲ್ಲಿ ಇಮ್ರಾನ್ ಖಾನ್ ಅವರನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಇದಲ್ಲದೇ, ಬುಮ್ರಾ ಮ್ಯಾಂಚೆಸ್ಟರ್ ಮೈದಾನದಲ್ಲಿ ಐದು ವಿಕೆಟ್‌ಗಳನ್ನು ಪಡೆದರೆ, 1982 ರ ನಂತರ ಮೊದಲ ಬಾರಿಗೆ, ಭಾರತೀಯ ಬೌಲರ್ ಈ ಸಾಧನೆ ಮಾಡಿದಂತ್ತಾಗುತ್ತದೆ.

6 / 6
ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-2 ಅಂತರದಲ್ಲಿ ಹಿನ್ನಡೆಯಲ್ಲಿದೆ. ಮ್ಯಾಂಚೆಸ್ಟರ್‌ನಲ್ಲಿ ಗೆಲ್ಲಲು ಬುಮ್ರಾ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಬುಮ್ರಾ ಇದುವರೆಗೆ ಈ ಟೆಸ್ಟ್ ಸರಣಿಯಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂದಹಾಗೆ, ಮ್ಯಾಂಚೆಸ್ಟರ್ ಟೆಸ್ಟ್ ಬುಮ್ರಾಗೆ ತುಂಬಾ ವಿಶೇಷವಾಗಿರುತ್ತದೆ ಏಕೆಂದರೆ ಅವರು ಮೊದಲ ಬಾರಿಗೆ ಈ ಮೈದಾನದಲ್ಲಿ ಆಡಲಿದ್ದಾರೆ.