IND vs IRE 1st T20I: ಪಂದ್ಯ ಮುಗಿದ ಬಳಿಕ ಭಾವುಕರಾದ ಜಸ್​ಪ್ರಿತ್ ಬುಮ್ರಾ: ಆಡಿದ ಮಾತುಗಳೇನು ಕೇಳಿ

jasprit bumrah post match presentation: ಐರ್ಲೆಂಡ್ ವಿರುದ್ಧದ ಮೊದಲ ಟಿ20 ಮೂಲಕ ಸುಮಾರು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ಜಸ್​ಪ್ರಿತ್ ಬುಮ್ರಾ ತಮ್ಮ ಮಾರಕ ಬೌಲಿಂಗ್​ನಿಂದ ಗಮನ ಸೆಳೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಬುಮ್ರಾ ಏನು ಹೇಳಿದ್ದಾರೆ ಕೇಳಿ.

Vinay Bhat
|

Updated on: Aug 19, 2023 | 7:52 AM

ಐರ್ಲೆಂಡ್ ವಿರುದ್ಧದ ಪ್ರವಾಸವನ್ನು ಭಾರತ ಭರ್ಜರಿ ಆಗಿ ಆರಂಭಿಸಿದೆ. ಡಬ್ಲಿನ್​ನ ದಿ ವಿಲೇಜ್​ನಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಮ್ ಇಂಡಿಯಾ 2 ರನ್​ಗಳಿಂದ ಗೆದ್ದು ಬೀಗಿತು. ಈ ಮೂಲಕ ನಾಯಕನಾಗಿ ಜಸ್​ಪ್ರಿತ್ ಬುಮ್ರಾ ಜಯದ ಖಾತೆ ತೆರೆದಿದ್ದಾರೆ.

1 / 8
ಸುಮಾರು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ಬುಮ್ರಾ ತಮ್ಮ ಮಾರಕ ಬೌಲಿಂಗ್​ನಿಂದ ಗಮನ ಸೆಳೆದರು. 4 ಓವರ್​ಗೆ 24 ರನ್ ನೀಡಿ 2 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಬುಮ್ರಾ ಏನು ಹೇಳಿದ್ದಾರೆ ಕೇಳಿ.

2 / 8
ತುಂಬಾ ಖುಷಿ ಆಗುತ್ತಿದೆ. ನಾನು ಎನ್​ಸಿಎ ನಲ್ಲಿ ಸಾಕಷ್ಟು ಸಮಯ ಅಭ್ಯಾಸ ನಡೆಸಿದ್ದೇನೆ. ಅಲ್ಲಿ ಅನೇಕ ಸೆಷನ್​ಗಳಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿ ನನಗೆ ಏನಾದರು ಕಳೆದುಕೊಂಡಿದ್ದೆ ಎಂಬ ಭಾವನೆ ಬರಲಿಲ್ಲ. ಜೊತೆಗೆ ಏನೋ ಹೊಸದು ಮಾಡುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಎಲ್ಲ ಕ್ರೆಡಿಟ್ ಸ್ಟಾಫ್​ಗೆ ಸಲ್ಲಬೇಕು. ಅವರು ನನ್ನನ್ನು ತಯಾರು ಮಾಡಿದರು ಎಂಬು ಬುಮ್ರ ಭಾವುಕರಾದರು.

3 / 8
ಉತ್ತಮವಾಗಿ ಕಮ್​ಬ್ಯಾಕ್ ಮಾಡಿದ್ದೇನೆ. ನರ್ವಸ್ ಆಗುತ್ತಿಲ್ಲ ಬದಲಾಗಿ ಖುಷಿ ಆಗುತ್ತಿದೆ ಎಂದು ಜಸ್​ಪ್ರಿತ್ ಬುಮ್ರಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ. ಹೀಗೆ ತನ್ನ ಚೇತರಿಕೆಗೆ ಕಾರಣವಾದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯ ಸಿಬ್ಬಂದಿಗೆ ಬುಮ್ರಾ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

4 / 8
ಮಾತು ಮುಂದುವರೆಸಿದ ಬುಮ್ರಾ, ಪಂದ್ಯ ಆರಂಭವಾದಾಗ ಸ್ವಲ್ಪ ಸ್ವಿಂಗ್ ಇತ್ತು. ಇದನ್ನು ನಾವು ಚೆನ್ನಾಗಿ ಉಪಯೋಗಿಸಿಕೊಂಡೆವು. ಅದೃಷ್ಟವಶಾತ್, ನಾವು ಅಂದುಕೊಂಡಂತೆ ಟಾಸ್ ಗೆದ್ದೆವು. ಹವಾಮಾನದಿಂದಾಗಿ ನಮಗೆ ಸ್ವಲ್ಪ ಸಹಾಯವಾಯಿತು ಎಂಬುದು ನಿಜ. ಇದರಿಂದ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

5 / 8
ನಾವು ಜಯ ಸಾಧಿಸಿದ್ದೇವೆ ನಿಜ. ಆದರೆ, ಇನ್ನೂ ಕೆಲವೊಂದು ವಿಭಾಗಗಳಲ್ಲಿ ಸುಧಾರಿಸಬೇಕಿದೆ. ಪ್ರತಿಯೊಬ್ಬ ಆಟಗಾರ ಆತ್ಮವಿಶ್ವಾಸದಿಂದ ಇದ್ದಾರೆ. ಅವರು ಎಲ್ಲದಕ್ಕೂ ಸಿದ್ಧವಾಗಿದ್ದಾರೆ. ನನಗನಿಸುವ ಪ್ರಕಾರ ಐಪಿಎಲ್ ಇವರಿಗೆ ತುಂಬಾ ಸಹಾಯ ಆಗಿದೆ. ಇದು ಯಾವಾಗಲೂ ಒಳ್ಳೆಯದು ಎಂಬುದು ಜಸ್​ಪ್ರಿತ್ ಬುಮ್ರಾ ಮಾತಾಗಿತ್ತು.

6 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿತು. ಆರಂಭದಲ್ಲಿ ಸತತ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾರಿ ಮೆಕಾರ್ಥಿ (ಅಜೇಯ 51) ಹಾಗೂ ಕರ್ಟಿಸ್ ಕ್ಯಾಂಫರ್ (39) ತಂಡಕ್ಕೆ ನೆರವಾಗಿ ಆಕರ್ಷಕ ಬ್ಯಾಟಿಂಗ್ ನಡೆಸಿದರು.

7 / 8
ಭಾರತ ಪರ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ರವಿ ಬಿಷ್ಟೋಯಿ ತಲಾ 2 ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನಟ್ಟಿದ ಭಾರತ 6.5 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದಾಗ ವರುಣ ಅಡ್ಡಿ ಪಡಿಸಿದ. ನಂತರ ಮಳೆ ನಿಲ್ಲದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ 2 ವಿಕೆಟ್​ಗಳಿಂದ ಗೆದ್ದಿತು. ಜೈಸ್ವಾಲ್ 24 ರನ್ ಗಳಿಸಿದರೆ, ಗಾಯಕ್ವಾಡ್ ಅಜೇಯ 19ರನ್ ಚಚ್ಚಿದರು.

8 / 8
Follow us
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ

ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು