- Kannada News Photo gallery Cricket photos Jos Buttler IPL 2025 Auction gujarat titans buys the england player for the auction price of 15.75 cr Rupees details in kannada
Jos Buttler IPL Auction 2025: ಉತ್ತಮ ಬೆಲೆಗೆ ಗುಜರಾತ್ ಸೇರಿಕೊಂಡ ಶತಕ ವೀರ ಜೋಸ್ ಬಟ್ಲರ್
Jos Buttler Auction Price: 7 ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಬ್ಬರ ಸೃಷ್ಟಿಸಿದ್ದ ಜೋಸ್ ಬಟ್ಲರ್ ಇದೀಗ ಗುಜರಾತ್ ಟೈಟಾನ್ಸ್ ತಂಡಕ್ಕೆ ತೆರಳಿದ್ದಾರೆ. ಬಟ್ಲರ್ ತಮ್ಮ ವೃತ್ತಿಜೀವನಕ್ಕೆ ದಾಖಲೆಯ ಬೆಲೆಯನ್ನು ಪಡೆದಿದ್ದಾರೆ. ಬಟ್ಲರ್ 15 ಕೋಟಿ, 75 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.
Updated on: Nov 24, 2024 | 4:44 PM

7 ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಬ್ಬರ ಸೃಷ್ಟಿಸಿದ್ದ ಜೋಸ್ ಬಟ್ಲರ್ ಇದೀಗ ಗುಜರಾತ್ ಟೈಟಾನ್ಸ್ ತಂಡಕ್ಕೆ ತೆರಳಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದ ದಾಖಲೆಯ ಬೆಲೆ ಪಡೆದಿರುವ ಬಟ್ಲರ್ 15 ಕೋಟಿ, 75 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.

ಮೂಲ ಬೆಲೆ 2 ಕೋಟಿ ರೂ.ಗಳೊಂದಿಗೆ ಬಿಡ್ಗೆ ಬಂದಿದ್ದ ಜೋಸ್ ಬಟ್ಲರ್ ಅವರನ್ನು ಖರೀದಿಸಲು ಮೊದಲು ರಾಜಸ್ಥಾನ್ ರಾಯಲ್ಸ್ ಬಿಡ್ ಮಾಡಿತು. ಇದರ ನಂತರ ಗುಜರಾತ್ ಟೈಟಾನ್ಸ್ ಅಖಾಡಕ್ಕಿಳಿಯಿತು. 13 ಕೋಟಿ, 50 ಲಕ್ಷಕ್ಕೆ ಬಟ್ಲರ್ ಅವರನ್ನು ಖರೀದಿಸಲು ಬೇರೆ ಯಾವುದೇ ತಂಡ ಆಸಕ್ತಿ ತೋರಲಿಲ್ಲ.

ಆದರೆ ಇದರ ನಂತರ ಲಕ್ನೋ ಸೂಪರ್‌ಜೈಂಟ್ಸ್ ಮುಂದೆ ಬಂದಿತು. ಆ ನಂತರ ಲಕ್ನೋ ಮತ್ತು ಗುಜರಾತ್ ನಡುವಿನ ಈ ಹೋರಾಟ 15 ಕೋಟಿ 75 ಲಕ್ಷಕ್ಕೆ ಏರಿತು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ಬಟ್ಲರ್ ಅವರನ್ನು ತಮ್ಮ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

10 ಕೋಟಿ ರೂ. ವೇತನದೊಂದಿಗೆ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದ ಜೋಸ್ ಬಟ್ಲರ್, 2024 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 40 ರ ಸರಾಸರಿಯಲ್ಲಿ 359 ರನ್ ಗಳಿಸಿದ್ದರು. ಆದರೆ ಇದರ ಹೊರತಾಗಿಯೂ ತಂಡವು ಅವರನ್ನು ಉಳಿಸಿಕೊಳ್ಳಲಿಲ್ಲ.

ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ 107 ಪಂದ್ಯಗಳಲ್ಲಿ 147.52 ಸ್ಟ್ರೈಕ್ ರೇಟ್‌ನಲ್ಲಿ 3582 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಬಟ್ಲರ್, ಈ ಟೂರ್ನಿಯಲ್ಲಿ ಒಟ್ಟು 7 ಶತಕ ಹಾಗೂ 19 ಅರ್ಧ ಶತಕ ಕಲೆಹಾಕಿದ್ದಾರೆ.
