ದಿಢೀರ್ ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್

Updated on: Nov 02, 2025 | 8:25 AM

Kane Williamson retirement: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್​​ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಫೆಬ್ರವರಿಯಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್​ನಲ್ಲಿ ಕಿವೀಸ್ ಪಡೆಯಲ್ಲಿ ಕೇನ್ ಕಾಣಿಸಿಕೊಳ್ಳುವುದಿಲ್ಲ.

1 / 5
ನ್ಯೂಝಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ (Kane Williamson) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ವಿಲಿಯಮ್ಸನ್ ತನ್ನ ನಿವೃತ್ತಿಯನ್ನು ಘೋಷಿಸಿಕೊಂಡಿದ್ದಾರೆ. 

2 / 5
ಹೀಗಾಗಿ ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​ನಲ್ಲಿ ನ್ಯೂಝಿಲೆಂಡ್ ಪರ ಕೇನ್ ವಿಲಿಯಮ್ಸನ್ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಅವರು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. 

3 / 5
ಕಳೆದ 15 ವರ್ಷಗಳಿಂದ ನ್ಯೂಝಿಲೆಂಡ್ ಪರ ಕಣಕ್ಕಿಳಿಯುತ್ತಿದ್ದೇನೆ. ಇನ್ನು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕಿದೆ. ಹೀಗಾಗಿ ಟಿ20 ಕ್ರಿಕೆಟ್​​ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ. ಅಲ್ಲದೆ ಟೆಸ್ಟ್​ ಕ್ರಿಕೆಟ್​ನಲ್ಲಿ ಒಂದಷ್ಟು ಕಾಲ ಮುಂದುವರೆಯುವ ಇರಾದೆಯಲ್ಲಿರುವುದಾಗಿ ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ.

4 / 5
ಕೇನ್ ವಿಲಿಯಮ್ಸನ್ ಕೊನೆಯ ಬಾರಿಗೆ ನ್ಯೂಝಿಲೆಂಡ್ ಪರ ಟಿ20 ಪಂದ್ಯವಾಡಿದ್ದು 2024ರ ಟಿ20 ವಿಶ್ವಕಪ್​​ನಲ್ಲಿ. ಆ ಬಳಿಕ ಗಾಯಗೊಂಡಿದ್ದ ಅವರು ಯಾವುದೇ ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂಪೂರ್ಣ ಫಿಟ್​​ನೆಸ್​ನೊಂದಿಗೆ ತಂಡಕ್ಕೆ ಮರಳಿರುವ ಅವರು ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

5 / 5
ಇನ್ನು ನ್ಯೂಝಿಲೆಂಡ್ ಪರ 93 ಟಿ20 ಪಂದ್ಯಗಳನ್ನಾಡಿರುವ ಕೇನ್ ವಿಲಿಯಮ್ಸನ್ 90 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 18 ಅರ್ಧಶತಕಗಳೊಂದಿಗೆ ಒಟ್ಟು 2575 ರನ್ ಕಲೆಹಾಕಿದ್ದಾರೆ. ಇದರ ನಡುವೆ ವಿಲಿಯಮ್ಸನ್ ಬ್ಯಾಟ್​ನಿಂದ 58 ಸಿಕ್ಸ್ ಹಾಗೂ 245 ಫೋರ್​ಗಳು ಮೂಡಿಬಂದಿದ್ದವು. ಇದೀಗ ತಮ್ಮ 35ನೇ ವಯಸ್ಸಿನಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

Published On - 8:23 am, Sun, 2 November 25