- Kannada News Photo gallery Cricket photos Kannada Cricket News CSA T20 League: RPSG Durban Full Squad
CSA T20 League: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಪರ ಆಡಲಿದ್ದಾರೆ 5 ಸ್ಟಾರ್ ಆಟಗಾರರು
CSA T20 League: ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಹರಾಜಿಗೂ ಮುನ್ನ ಪ್ರತಿ ತಂಡವು ಗರಿಷ್ಠ 5 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ.
Updated on: Aug 13, 2022 | 12:23 PM

ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಸಿಎಸ್ಎ ಟಿ20 ಲೀಗ್ನಲ್ಲಿನ ಆರು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ಗೊತ್ತಿರುವ ವಿಷಯ. ಅದರಲ್ಲೂ ಡರ್ಬನ್ ತಂಡವನ್ನು ಖರೀದಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಇದೀಗ ಹರಾಜಿಗೂ ಮುನ್ನ ಐದು ಆಟಗಾರರನ್ನು ಫೈನಲ್ ಮಾಡಿದೆ.

ವಿಶೇಷ ಎಂದರೆ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ಸೌತ್ ಆಫ್ರಿಕಾ ಆಟಗಾರ ಕ್ವಿಂಟನ್ ಡಿಕಾಕ್ ಹಾಗೂ ವೆಸ್ಟ್ ಇಂಡೀಸ್ ಆಟಗಾರರಾದ ಜೇಸನ್ ಹೋಲ್ಡರ್ ಮತ್ತು ಕೈಲ್ ಮೇಯರ್ಸ್ ಅವರನ್ನು ಇಲ್ಲೂ ಕೂಡ ಆಯ್ಕೆ ಮಾಡಲಾಗಿದೆ.

ಅದರಂತೆ ಇಬ್ಬರು ಸೌತ್ ಆಫ್ರಿಕಾ, ಇಬ್ಬರು ವೆಸ್ಟ್ ಇಂಡೀಸ್ ಹಾಗೂ ಓರ್ವ ಇಂಗ್ಲೆಂಡ್ ಆಟಗಾರನನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಡರ್ಬನ್ ತಂಡ ಆಯ್ಕೆ ಮಾಡಿಕೊಂಡಿದೆ. ಅದರಂತೆ ಡರ್ಬನ್ ತಂಡ ಆಯ್ಕೆ ಮಾಡಿದ ಆಟಗಾರರು ಯಾರೆಂದರೆ...

ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)

ಪ್ರೆನಾಲೆನ್ ಸುಬ್ರಾಯೆನ್ (ಸೌತ್ ಆಫ್ರಿಕಾ)

ರೀಸ್ ಟೋಪ್ಲಿ (ಇಂಗ್ಲೆಂಡ್)

ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)

ಕೈಲ್ ಮೇಸರ್ಸ್ (ವೆಸ್ಟ್ ಇಂಡೀಸ್)

ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಹರಾಜಿಗೂ ಮುನ್ನ ಪ್ರತಿ ತಂಡವು ಗರಿಷ್ಠ 5 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಇಲ್ಲಿ ಪ್ರತಿ ತಂಡವು 10 ದಕ್ಷಿಣ ಆಫ್ರಿಕಾ ಮತ್ತು 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗೆಯೇ ಪ್ಲೇಯಿಂಗ್ 11 ನಲ್ಲಿ 7 ಸೌತ್ ಆಫ್ರಿಕಾದ ಆಟಗಾರರಿಗೆ ಮತ್ತು 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ.
