ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಹರಾಜಿಗೂ ಮುನ್ನ ಪ್ರತಿ ತಂಡವು ಗರಿಷ್ಠ 5 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಇಲ್ಲಿ ಪ್ರತಿ ತಂಡವು 10 ದಕ್ಷಿಣ ಆಫ್ರಿಕಾ ಮತ್ತು 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗೆಯೇ ಪ್ಲೇಯಿಂಗ್ 11 ನಲ್ಲಿ 7 ಸೌತ್ ಆಫ್ರಿಕಾದ ಆಟಗಾರರಿಗೆ ಮತ್ತು 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ.