AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದಲ್ಲಿಲ್ಲ ಸ್ಥಾನ; ಆಂಗ್ಲರ ನಾಡಲ್ಲಿ ದ್ವಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್..!

Karun Nair: ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ವಿದೇಶಿ ಕೌಂಟಿಯತ್ತ ಮುಖ ಮಾಡಿರುವ ಕನ್ನಡಿಗೆ ಕರುಣ್ ನಾಯರ್ ಇದೀಗ ಆಂಗ್ಲರ ನಾಡಲ್ಲಿ ಅಜೇಯ ಶತಕ ಸಿಡಿಸಿ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಇರಾದೆಯಲ್ಲಿದ್ದಾರೆ. ಪ್ರಸ್ತುತ ಕರುಣ್ ನಾಯರ್ ಇಂಗ್ಲೆಂಡ್​ನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಆಡುತ್ತಿದ್ದಾರೆ.

ಪೃಥ್ವಿಶಂಕರ
|

Updated on: Apr 22, 2024 | 9:53 PM

Share
ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಅದರಲ್ಲೂ ಬಲಿಷ್ಠ ಇಂಗ್ಲೆಂಡ್‌ ಎದುರು ತ್ರಿಶತಕ ಸಿಡಿಸಿದ್ದ ಕನ್ನಡಿಗ ಕರುಣ್ ನಾಯರ್ ಭಾರತ ಟೆಸ್ಟ್ ತಂಡದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಎಲ್ಲಾ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಕರುಣ್​ಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶ ಸಿಗಲೇ ಇಲ್ಲ.

1 / 7
ಇದಾದ ನಂತರ ದೇಶೀ ಟೂರ್ನಿಗಳಲ್ಲಿ ಅಮೋಘ ಪ್ರದರ್ಶ ನೀಡಿದ ಹೊರತಾಗಿಯೂ ನಾಯರ್​ಗೆ ಟೀಂ ಇಂಡಿಯಾ ಕದ ತೆರೆಯಲಿಲ್ಲ. ಇದಲ್ಲದೆ ಐಪಿಎಲ್​ನಲ್ಲೂ ಕರುಣ್​ರನ್ನು ಖರೀದಿಸಲು ಯಾವ ತಂಡವೂ ಮುಂದೆ ಬರಲಿಲ್ಲ.

2 / 7
ಹೀಗಾಗಿ ವಿದೇಶಿ ಕೌಂಟಿಯತ್ತ ಮುಖ ಮಾಡಿರುವ ಕರುಣ್ ನಾಯರ್ ಇದೀಗ ಆಂಗ್ಲರ ನಾಡಲ್ಲಿ ಅಜೇಯ ಶತಕ ಸಿಡಿಸಿ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಇರಾದೆಯಲ್ಲಿದ್ದಾರೆ. ಪ್ರಸ್ತುತ ಕರುಣ್ ನಾಯರ್ ಇಂಗ್ಲೆಂಡ್​ನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಆಡುತ್ತಿದ್ದಾರೆ.

3 / 7
ಈ ಚಾಂಪಿಯನ್‌ಶಿಪ್​ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಕರುಣ್, ವಿಟಾಲಿಟಿ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರಲ್ಲಿ ಗ್ಲಾಮೋರ್ಗನ್ ತಂಡದ ವಿರುದ್ಧ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

4 / 7
ಕರುಣ್ ನಾಯರ್ ತಮ್ಮ ಇನ್ನಿಂಗ್ಸ್​ನಲ್ಲಿ 253 ಎಸೆತಗಳನ್ನು ಎದುರಿಸಿ ಅಜೇಯ 202 ರನ್ ಗಳಿಸಿದರು. ನಾಯರ್ ಅವರ ಈ ಅಮೋಘ ಆಟದಿಂದಾಗಿ ನಾರ್ಥಾಂಪ್ಟನ್‌ಶೈರ್ ತಂಡ 334 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 6 ವಿಕೆಟ್‌ಗೆ 605 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

5 / 7
ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಇದುವರೆಗೆ 100 ಪಂದ್ಯಗಳನ್ನಾಡಿರುವ ಕರುಣ್ ನಾಯರ್ 48.34ರ ಸರಾಸರಿಯಲ್ಲಿ 6962 ರನ್ ಗಳಿಸಿದ್ದಾರೆ. ಇದರಲ್ಲಿ18 ಶತಕ ಮತ್ತು 32 ಅರ್ಧ ಶತಕಗಳು ಸೇರಿವೆ.

6 / 7
ಏತನ್ಮಧ್ಯೆ ಭಾರತದ ಪರ 6 ಟೆಸ್ಟ್ ಪಂದ್ಯಗಳನ್ನಾಡಿರುವ ಕರುಣ್ 62.33 ರ ಸರಾಸರಿಯಲ್ಲಿ 374 ರನ್ ಬಾರಿಸಿದ್ದಾರೆ. ಇದಲ್ಲದೆ ಟೀಂ ಇಂಡಿಯಾ ಪರ ಎರಡು ಏಕದಿನ ಪಂದ್ಯಗಳನ್ನು ಆಡಿರುವ ಅವರು 23 ರ ಸರಾಸರಿಯಲ್ಲಿ 46 ರನ್ ಬಾರಿಸಿದ್ದಾರೆ.

7 / 7
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?