ಪೊಲಾರ್ಡ್​ ಪವರ್​ಗೆ ಭರ್ಜರಿ ವಿಶ್ವ ದಾಖಲೆ ನಿರ್ಮಾಣ

Updated on: Aug 30, 2025 | 12:57 PM

Kieron Pollard Records: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಇದೀಗ ಗೇಲ್ ಅವರ ದಾಖಲೆ ಮುರಿಯಲು ಕೆರಿಬಿಯನ್ ದಾಂಡಿಗ ಕೀರನ್ ಪೊಲಾರ್ಡ್ ದಾಂಗುಡಿ ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಗೇಲ್ ದಾಖಲೆಯನ್ನು ಮುರಿಯುವುದು ಖಚಿತ ಎಂದೇ ಹೇಳಬಹುದು.

1 / 5
ಕೆರಿಬಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ವಿರುದ್ಧ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೀರನ್ ಪೊಲಾರ್ಡ್ 9 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 19 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

2 / 5
ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಕ್ರಿಸ್ ಗೇಲ್. ಟಿ20 ಕ್ರಿಕೆಟ್​ನಲ್ಲಿ 455 ಇನಿಂಗ್ಸ್​ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

3 / 5
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್. ಟಿ20 ಕ್ರಿಕೆಟ್​ನಲ್ಲಿ 455 ಇನಿಂಗ್ಸ್​ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

4 / 5
ಇದೀಗ ಈ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 633 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 9273 ಎಸೆತಗಳನ್ನು ಎದುರಿಸಿರುವ ಅವರು ಬರೋಬ್ಬರಿ 14000 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

5 / 5
ಇನ್ನು ಕೀರನ್ ಪೊಲಾರ್ಡ್ 563 ರನ್​ಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್​ಗಳಿಸಿದ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆ ಮುರಿಯಲು ಕೀರನ್ ಪೊಲಾರ್ಡ್​ಗೆ ಬೇಕಿರುವುದು 563 ರನ್​ಗಳು ಮಾತ್ರ. ಅತ್ತ ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಟರ್​ನ್ಯಾಷನಲ್ ಟಿ20 ಲೀಗ್, ಮೇಜರ್ ಲೀಗ್ ಟಿ20 ಟೂರ್ನಿಗಳಲ್ಲಿ ಕಣಕ್ಕಿಳಿಯುತ್ತಿರುವ ಪೊಲಾರ್ಡ್ ಗೇಲ್ ಅವರ ವಿಶ್ವ ದಾಖಲೆ ಮುರಿದರೂ ಅಚ್ಚರಿಪಡಬೇಕಿಲ್ಲ.