- Kannada News Photo gallery Cricket photos Least innings taken 10 score 30 test centuries Kannada News zp
Test Records: ಕಡಿಮೆ ಇನಿಂಗ್ಸ್ನಲ್ಲಿ 30 ಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿ ಇಲ್ಲಿದೆ
Steve Smith: ವಿಶೇಷ ಎಂದರೆ ಕಡಿಮೆ ಇನಿಂಗ್ಸ್ಗಳಲ್ಲಿ 30 ಟೆಸ್ಟ್ ಶತಕ ಪೂರೈಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ಸ್ಮಿತ್ ಕಾಣಿಸಿಕೊಂಡಿದ್ದಾರೆ. ಅದು ಕೂಡ ಆಸ್ಟ್ರೇಲಿಯಾದ ದಿಗ್ಗಜರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
Updated on: Jan 05, 2023 | 5:23 PM

ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 30 ಸೆಂಚುರಿ ಸಿಡಿಸಿದ ಸಾಧಕರ ಪಟ್ಟಿಗೆ ಸ್ಮಿತ್ ಸೇರ್ಪಡೆಯಾಗಿದ್ದಾರೆ.

ವಿಶೇಷ ಎಂದರೆ ಕಡಿಮೆ ಇನಿಂಗ್ಸ್ಗಳಲ್ಲಿ 30 ಟೆಸ್ಟ್ ಶತಕ ಪೂರೈಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ಸ್ಮಿತ್ ಕಾಣಿಸಿಕೊಂಡಿದ್ದಾರೆ. ಅದು ಕೂಡ ಆಸ್ಟ್ರೇಲಿಯಾದ ದಿಗ್ಗಜರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಹಾಗಿದ್ರೆ ಟೆಸ್ಟ್ ಕ್ರಿಕೆಟ್ನಲ್ಲಿ ಕಡಿಮೆ ಇನಿಂಗ್ಸ್ಗಳಲ್ಲಿ 30 ಶತಕ ಪೂರೈಸಿದ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡೋಣ...

1- ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 51 ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶೇಷ ಎಂದರೆ 159ನೇ ಇನಿಂಗ್ಸ್ನಲ್ಲಿ 30 ಶತಕ ಪೂರೈಸಿರುವ ಸಚಿನ್ ಈ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ.

2- ಸ್ಟೀವ್ ಸ್ಮಿತ್: ಸೌತ್ ಆಫ್ರಿಕಾ ವಿರುದ್ಧದ ಶತಕದೊಂದಿಗೆ 30 ಸ್ಟೀವ್ ಸ್ಮಿತ್ 30 ಸೆಂಚುರಿ ಪೂರೈಸಿದ್ದಾರೆ. ಈ ಸಾಧನೆ ಮಾಡಲು ಆಸೀಸ್ ಬ್ಯಾಟರ್ ತೆಗೆದುಕೊಂಡಿರುವುದು ಕೇವಲ 162 ಇನಿಂಗ್ಸ್ ಮಾತ್ರ. ಈ ಮೂಲಕ ಸಚಿನ್ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ.

3- ಮ್ಯಾಥ್ಯೂ ಹೇಡನ್: ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ 167 ಇನಿಂಗ್ಸ್ ಮೂಲಕ ಟೆಸ್ಟ್ನಲ್ಲಿ 30 ಶತಕ ಬಾರಿಸಿದ್ದರು.

4- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಟೆಸ್ಟ್ ಕ್ರಿಕೆಟ್ನಲ್ಲಿ 30 ಶತಕ ಪೂರೈಸಲು ತೆಗೆದುಕೊಂಡಿದ್ದು 170 ಇನಿಂಗ್ಸ್ಗಳನ್ನು. ಈ ಮೂಲಕ 4ನೇ ಸ್ಥಾನದಲ್ಲಿದ್ದಾರೆ.

5- ಸುನಿಲ್ ಗಾವಸ್ಕರ್: ಟೀಮ್ ಇಂಡಿಯಾ ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 34 ಶತಕ ಬಾರಿಸಿದ್ದಾರೆ. ಅದರಲ್ಲೂ 174 ಇನಿಂಗ್ಸ್ ಮೂಲಕ 30 ಸೆಂಚುರಿಗಳನ್ನು ಸಿಡಿಸಿದ್ದರು. ಈ ಮೂಲಕ ಕಡಿಮೆ ಟೆಸ್ಟ್ ಇನಿಂಗ್ಸ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಟಾಪ್-5 ನಲ್ಲಿ ಕಾಣಿಸಿಕೊಂಡಿದ್ದಾರೆ.
