AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LLC 2024: ಲೆಜೆಂಡ್ಸ್ ಲೀಗ್​ನ​ ದುಬಾರಿ ಆಟಗಾರರಿವರು

Legends League Cricket 2024: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 20 ರಿಂದ ಶುರುವಾಗಲಿದೆ. ಅಕ್ಟೋಬರ್ 16 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ಆರು ತಂಡಗಳ ನಡುವೆ ಒಟ್ಟು 25 ಪಂದ್ಯಗಳು ಜರುಗಲಿದ್ದು, ಈ ಮ್ಯಾಚ್​ಗಳಿಗೆ ಜಮ್ಮು, ಶ್ರೀನಗರ, ಜೋಧಪುರ ಮತ್ತು ಸೂರತ್​ನಲ್ಲಿನ ಸ್ಟೇಡಿಯಂಗಳು ಆತಿಥ್ಯವಹಿಸಲಿದೆ.

ಝಾಹಿರ್ ಯೂಸುಫ್
|

Updated on: Sep 01, 2024 | 1:08 PM

Share
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಸೀಸನ್​ಗಾಗಿ ಹರಾಜು ನಡೆಸಲಾಗಿದೆ. 6 ಫ್ರಾಂಚೈಸಿಗಳ ನಡುವಣ ಈ ಹರಾಜು ಪೈಪೋಟಿಯಲ್ಲಿ ಐವರು ಆಟಗಾರರು 50 ಲಕ್ಷ ರೂ.ಗೂ ಅಧಿಕ ಮೊತ್ತ ಪಡೆದಿದ್ದಾರೆ. ಅದರಂತೆ ಈ ಬಾರಿಯ ಎಲ್​ಎಲ್​ಸಿ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಐವರು ಆಟಗಾರರ ಪಟ್ಟಿ ಇಲ್ಲಿದೆ...

1 / 6
5- ಧವಳ್ ಕುಲ್ಕರ್ಣಿ: ಟೀಮ್ ಇಂಡಿಯಾದ ಮಾಜಿ ವೇಗಿ ಧವಳ್ ಕುಲ್ಕರ್ಣಿ ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. 35 ವರ್ಷದ ಧವಳ್ ಅವರನ್ನು ಇಂಡಿಯಾ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 50 ಲಕ್ಷ ರೂ. ನೀಡಿ ಖರೀದಿಸಿದೆ.

2 / 6
4- ರಾಸ್ ಟೇಲರ್: ನ್ಯೂಝಿಲೆಂಡ್ ತಂಡದ ಮಾಜಿ ಹೊಡಿಬಡಿ ದಾಂಡಿಗ ರಾಸ್ ಟೇಲರ್ ಈ ಬಾರಿಯ ಲೆಜೆಂಡ್ಸ್ ಲೀಗ್ ಆಕ್ಷನ್​ನಲ್ಲಿ ಕಾಣಿಸಿಕೊಂಡಿದ್ದರು. ಟೇಲರ್​ ಖರೀದಿಗಾಗಿ ಆರಂಭದಲ್ಲಿ ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿಸಿದರು. ಅಂತಿಮವಾಗಿ ಕೋನಾರ್ಕ್ ಸೂರ್ಯಸ್ ಒಡಿಶಾ ತಂಡವು 50.34 ಲಕ್ಷ ರೂ. ನೀಡಿ ಟೇಲರ್ ಅವರನ್ನು ಖರೀದಿಸಿದೆ.

3 / 6
3- ಡೇನಿಯಲ್ ಕ್ರಿಶ್ಚಿಯನ್: ಆಸ್ಟ್ರೇಲಿಯಾ ಮಾಜಿ ಆಲ್​ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ವಿಶ್ವದ ಹಲವು ಲೀಗ್​ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇದೀಗ ಎಲ್​ಎಲ್​ಸಿಯತ್ತ ಮುಖ ಮಾಡಿರುವ ಕ್ರಿಶ್ಚಿಯನ್ ಅವರನ್ನು ಮಣಿಪಾಲ್ ಟೈಗರ್ಸ್ ತಂಡವು 55.95 ಲಕ್ಷ ರೂ. ನೀಡಿ ಖರೀದಿಸಿದೆ.

4 / 6
2- ಚಾಡ್ವಿಕ್ ವಾಲ್ಟನ್: ವೆಸ್ಟ್ ಇಂಡೀಸ್​ನ ಮಾಜಿ ಸ್ಪೋಟಕ ಆರಂಭಿಕ ಆಟಗಾರ ಚಾಡ್ವಿಕ್ ವಾಲ್ಟನ್ ಅವರನ್ನು ಈ ಬಾರಿ ಅರ್ಬನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಅದು ಸಹ 60.30 ಲಕ್ಷ ರೂ. ನೀಡುವ ಮೂಲಕ ಎಂಬುದು ವಿಶೇಷ.

5 / 6
1- ಇಸುರು ಉಡಾನ: ಈ ಬಾರಿಯ ಲೆಜೆಂಡ್ಸ್ ಲೀಗ್ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದು ಶ್ರೀಲಂಕಾದ ಎಡಗೈ ವೇಗಿ ಇಸುರು ಉಡಾನ. ಅರ್ಬನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಉಡಾನ ಅವರನ್ನು 61.97 ಲಕ್ಷ ರೂ. ನೀಡಿ ಖರೀದಿಸಿದೆ. ವಿಶೇಷ ಎಂದರೆ 2020 ರಲ್ಲಿ ಐಪಿಎಲ್ ಆಡಿದ್ದ ಉಡಾನ ಆರ್​ಸಿಬಿಯಿಂದ ಪಡೆದಿದ್ದು ಕೇವಲ 50 ಲಕ್ಷ ರೂ. ಇದೀಗ ನಿವೃತ್ತರಾಗಿರುವ ಉಡಾನ ಐಪಿಎಲ್​ಗಿಂತ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ.

6 / 6