- Kannada News Photo gallery Cricket photos LLC 2024: Sri Lanka's Isuru Udana Gets More Money Than IPL
ಐಪಿಎಲ್ಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾದ ಇಸುರು ಉಡಾನ
Isuru Udana: ಇಸುರು ಉಡಾನ ಶ್ರೀಲಂಕಾ ಪರ 35 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕೇವಕ 27 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 2020 ರಲ್ಲಿ ಆರ್ಸಿಬಿ ಪರ 10 ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದ ಶ್ರೀಲಂಕಾ ವೇಗಿ 8 ವಿಕೆಟ್ ಪಡೆದಿದ್ದರು. ಇನ್ನು 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದ ಉಡಾನ ಇದೀಗ ಫ್ರಾಂಚೈಸಿ ಲೀಗ್ನತ್ತ ಮುಖ ಮಾಡಿದ್ದಾರೆ.
Updated on: Aug 31, 2024 | 10:00 AM

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನಲ್ಲಿ ಆಟಗಾರರಿಗೆ ಹಣ ಸುರಿಮಳೆಯಾಗುವುದು ಗೊತ್ತೇ ಇದೆ. ಆದರೆ ಶ್ರೀಲಂಕಾ ಕ್ರಿಕೆಟಿಗ ಇಸುರು ಉಡಾನ ವಿಷಯದಲ್ಲಿ ಇದು ತದ್ವಿರುದ್ಧ. ಏಕೆಂದರೆ ಐಪಿಎಲ್ನಲ್ಲಿ ಕೇವಲ 50 ಲಕ್ಷ ರೂ.ಗೆ ಆಡಿದ್ದ ಇಸುರು ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಬೃಹತ್ ಮೊತ್ತಕ್ಕೆ ಬಿಕರಿಯಾಗಿದ್ದಾರೆ.

ನಿವೃತ್ತ ಆಟಗಾರರನ್ನು ಒಳಗೊಂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಇಸುರು ಉಡಾನ ಅವರನ್ನು ಅರ್ಬನ್‌ರೈಸರ್ಸ್ ಹೈದರಾಬಾದ್ 61.97 ಲಕ್ಷ ರೂ.ಗೆ ಖರೀದಿಸಿದೆ. ಇದು ಈ ಬಾರಿಯ ಲೆಜೆಂಡ್ಸ್ ಲೀಗ್ ಹರಾಜಿನಲ್ಲಿ ಆಟಗಾರರೊಬ್ಬರು ಪಡೆದ ಅತ್ಯಧಿಕ ಮೊತ್ತ ಎಂಬುದು ವಿಶೇಷ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಇದೇ ಇಸುರು ಉಡಾನಗೆ ಐಪಿಎಲ್ನಿಂದ ಸಿಕ್ಕಿದ್ದು ಕೇವಲ 50 ಲಕ್ಷ ರೂ. ಮಾತ್ರ. 2020 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಉಡಾನ ಅವರನ್ನು 50 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಇಸುರು 61.97 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ.

ಈ ಮೂಲಕ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024ರ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದರಂತೆ ಈ ಬಾರಿಯ ಎಲ್ಎಲ್ಸಿ ಟೂರ್ನಿಯಲ್ಲಿ ಲಂಕಾ ಕ್ರಿಕೆಟಿಗ ಸುರೇಶ್ ರೈನಾ ನಾಯಕತ್ವದ ಅರ್ಬನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ.

ಅಂದಹಾಗೆ 2020 ರ ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ 10 ಪಂದ್ಯಗಳನ್ನಾಡಿದ್ದರು. ಈ ವೇಳೆ ಒಟ್ಟು 174 ಎಸೆತಗಳನ್ನು ಎಸೆದಿದ್ದ ಅವರು 282 ರನ್ ನೀಡಿ ಕೇವಲ 8 ವಿಕೆಟ್ ಮಾತ್ರ ಕಬಳಿಸಿದ್ದರು. ಹೀಗಾಗಿ ಮರುವರ್ಷವೇ ಆರ್ಸಿಬಿ ಇಸುರು ಉದಾನ ಅವರನ್ನು ಕೈ ಬಿಟ್ಟಿತ್ತು. ಇದಾದ ಬಳಿಕ ಅವರಿಗೆ ಐಪಿಎಲ್ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಮುಂದುವರೆದಿದ್ದಾರೆ.




