AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPL 2022: ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರೀಮಿಯರ್ ಲೀಗ್ ಘೋಷಣೆ: ಜುಲೈ 31 ರಿಂದ ಆರಂಭ

ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಇದರ ನಡುವೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನದೇ ಆದ T20 ಲೀಗ್ ಅನ್ನು ಆಯೋಜಿಸುತ್ತಿದೆ. ಅದುವೆ ಲಂಕಾ ಪ್ರೀಮಿಯರ್ ಲೀಗ್. 2020 ರಿಂದ ಪ್ರಾರಂಭವಾದ ಈ ಲೀಗ್ ಇದೀಗ ಮೂರನೇ ಸೀಸನ್ ಗೆ ಕಾಲಿಡುತ್ತಿದೆ.

Vinay Bhat
|

Updated on:Jun 11, 2022 | 8:35 AM

Share
ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹ ದಾಖಲೆ ಮಟ್ಟದಲ್ಲಿ ಕುಸಿದಿದೆ. ಇದರ ನಡುವೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನದೇ ಆದ T20 ಲೀಗ್ ಅನ್ನು ಆಯೋಜಿಸುತ್ತಿದೆ. ಅದುವೆ ಲಂಕಾ ಪ್ರೀಮಿಯರ್ ಲೀಗ್. 2020 ರಿಂದ ಪ್ರಾರಂಭವಾದ ಈ ಲೀಗ್ ಇದೀಗ ಮೂರನೇ ಸೀಸನ್ ಗೆ ಕಾಲಿಡುತ್ತಿದೆ.

1 / 5
ಈ ಬಗ್ಗೆ ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ, “ಲಂಕಾ ಪ್ರೀಮಿಯರ್ ಲೀಗ್ ನ ಮೂರನೇ ಸೀಸನ್ ಅನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಜಾಗತಿಕ ಟಿ20 ಲೀಗ್ ಸ್ಪರ್ಧೆಗಳಲ್ಲಿ ಸ್ಥಾನ ಪಡೆಯುವಲ್ಲಿ ಈ ಲೀಗ್ ಪ್ರಮುಖ ಪಾತ್ರ ವಹಿಸಿದೆ. ಅಂತರರಾಷ್ಟ್ರೀಯ ಆಟಗಾರರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

2 / 5
ಕ್ಯಾಂಡಿ ವಾರಿಯರ್ಸ್, ಡಂಬುಲ್ಲಾ ಜೈಂಟ್ಸ್, ಕೊಲಂಬೊ ಸ್ಟಾರ್ಸ್, ಗಾಲೆ ಗ್ಲಾಡಿಯೇಟರ್ಸ್ ಮತ್ತು ಜಾಫ್ನಾ ಕಿಂಗ್ಸ್ ಐದು ತಂಡಗಳನ್ನು ಒಳಗೊಂಡಿರುವ ಲಂಕಾ ಪ್ರೀಮಿಯರ್ ಲೀಗ್ 2022 ಜುಲೈ 31 ರಂದು ಶುರುವಾಗಲಿದೆ. ಆಗಸ್ಟ್ 21ರಂದು ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ.

3 / 5
LPL ಪಂದ್ಯಾವಳಿಯು ಕೊಲಂಬೊ ಮತ್ತು ಹಂಬಂಟೋಟಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 24 ಪಂದ್ಯಗಳು ನಡೆಯಲಿವೆ. ಕಳೆದ ಎರಡು ಸೀಸನ್ ಗಳಂತೆ ಈ ಬಾರಿಯೂ ವಿದೇಶಿ ಆಟಗಾರರು ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಲೀಗ್ ಗೆ ಹೆಸರು ನೋಂದಾಯಿಸಿಕೊಂಡಿರುವ ವಿದೇಶಿ ಆಟಗಾರರ ಪಟ್ಟಿಯೂ ಬಿಡುಗಡೆಯಾಗಲಿದೆ.

4 / 5
ಲಂಕಾ ಪ್ರೀಮಿಯರ್ ಲೀಗ್ ಅನ್ನು 2018ರಲ್ಲಿ ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಸ್ಥಾಪಿಸಿತು. ಆದರೆ, ಮೊದಲ ಆವೃತ್ತಿಯನ್ನೇ ಹಲವಾರು ಬಾರಿ ಮುಂದೂಡಲ್ಪಟ್ಟು 2020ರಲ್ಲಿ ಆಡಿಸಲಾಯಿತು. ಜಾಫ್ನಾ ಕಿಂಗ್ಸ್ (2020ರಲ್ಲಿ ಜಾಫ್ನಾ ಸ್ಟಾಲಿಯನ್ಸ್) ಲೀಗ್ ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಈ ತಂಡ ಮೊದಲ ಎರಡು ಆವೃತ್ತಿಗಳನ್ನು ಫೈನಲ್ ನಲ್ಲಿ ಗಾಲೆ ಗ್ಲಾಡಿಯೇಟರ್ ಗಳನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದಿದ್ದಾರೆ.

5 / 5

Published On - 8:10 am, Sat, 11 June 22