India vs New Zealand: ಮಯಾಂಕ್ ಮೇಲೆ ಹೆಚ್ಚಿದ ನಿರೀಕ್ಷೆ: ಕುತೂಹಲ ಕೆರಳಿಸಿದ ಎರಡನೇ ದಿನದಾಟ

Mayank Agarwal: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರು ಸಾಲುಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಇದ್ದರೆ ಅತ್ತ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ಅಮೋಘ ಶತಕ ಸಿಡಿಸಿ ಮಿಂಚಿದರು.

1/9
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುರುವಾಗಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಮಯಾಂಕ್ ಅಗರ್ವಾಲ್ ಅವರ ಹೋರಾಟದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿದೆ.

2/9
246 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 120 ರನ್ ಸಿಡಿಸಿರುವ ಮಯಾಂಕ್ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದ್ದು, ಇಂದಿನ ಎರಡನೇ ದಿನದಾಟ ಕುತೂಹಲ ಕೆರಳಿಸಿದೆ. ಇವರ ಜೊತೆ ವೃದ್ದಿಮಾನ್ ಸಾಹ ಕೂಡ ಇದ್ದು ತಂಡಕ್ಕೆ ಆಸರೆಯಾಗಬೇಕಿದೆ.

3/9
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಶುಭ್ಮನ್ ಗಿಲ್(44) ಹಾಗೂ ಮಯಾಂಕ್ ಅಗರ್ವಾಲ್ ಜೋಡಿ 81 ರನ್ ಗಳಿಸುವ ಮೂಲಕ ಉತ್ತಮ ಆರಂಭ ತಂದುಕೊಟ್ಟಿದ್ದರು.

4/9
ಅತ್ಯುತ್ತಮ ಬ್ಯಾಟ್ ಮಾಡುತ್ತಿದ್ದ ಗಿಲ್ (44) ಅವರು ಔಟ್ ಆದ ಬೆನ್ನಲ್ಲೆ ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಅಜಾಝ್ ಪಟೇಲ್ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೇವಲ ಶೂನ್ಯ ರನ್ ಅಂತರದಲ್ಲಿಯೇ ಗಿಲ್, ಪೂಜಾರ ಹಾಗೂ ಕೊಹ್ಲಿ ಅವರ ವಿಕೆಟ್ಗಳನ್ನು ಕಳೆದುಕೊಂಡಿರುವ ಭಾರತ ಸಂಕಷ್ಟಕ್ಕೆ ಸಿಲುಕಿದೆ.

5/9
ನಂತರ ಕಣಕ್ಕಿಳಿದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ಅಜಾಜ್ ಪಟೇಲ್ ಅವರಿಗೇ ವಿಕೆಟ್ ನೀಡಿದರು. ಆದರೆ, ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು.

6/9
ಹೀಗೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರು ಸಾಲುಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಇದ್ದರೆ ಅತ್ತ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ಅಮೋಘ ಶತಕ ಸಿಡಿಸಿ ಮಿಂಚಿದರು.

7/9
ಮಯಾಂಕ್ ಜೊತೆ ವೃದ್ಧಿಮಾನ್ ಸಾಹ ಮುರಿಯದ ಐದನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ಕಟ್ಟಿ ತಂಡವು ಉತ್ತಮ ಮೊತ್ತ ಪೇರಿಸಲು ನೆರವಾದರು.

8/9
ಮಯಾಂಕ್ 120 ರನ್ ಗಳಿಸಿ ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಸಾಹ 25 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹೀಗೆ ಮೊದಲನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು.

9/9
ನ್ಯೂಜಿಲೆಂಡ್ ತಂಡದ ಪರ ಬೌಲಿಂಗ್ ಮಾಡಿದ 6 ಬೌಲರ್ಗಳ ಪೈಕಿ ಅಜಾಝ್ ಪಟೇಲ್ ಮಾತ್ರ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. 29 ಓವರ್ ಬೌಲಿಂಗ್ ಮಾಡಿದ ಅಜಾಜ್ ಪಟೇಲ್ 10 ಮೇಡನ್ ಓವರ್ ಸಹಿತ 73 ರನ್ ನೀಡಿ ಟೀಮ್ ಇಂಡಿಯಾದ 4 ವಿಕೆಟ್ ಪಡೆದರು.

Click on your DTH Provider to Add TV9 Kannada