AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ: ದಾಖಲೆಯೊಂದಿಗೆ ರಾಜಧಾನಿ ಎಕ್ಸ್​ಪ್ರೆಸ್ ಆಗಮನ

Mayank Yadav: ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ರಾಜಧಾನಿ ಎಕ್ಸ್​ಪ್ರೆಸ್ ಎಂಬ ಬಿರುದು ಪಡೆದಿರುವ ಮಯಾಂಕ್ ಯಾದವ್ ಇದೀಗ ಟೀಮ್ ಇಂಡಿಯಾ ಪರ ವೇಗದ ಅಸ್ತ್ರದ ಪ್ರಯೋಗಕ್ಕೆ ಇಳಿದಿದ್ದಾರೆ. ಅಲ್ಲದೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದ ಮೊದಲ ಓವರ್ ಅನ್ನು ಮೇಡನ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 07, 2024 | 7:53 AM

Share
ಗ್ವಾಲಿಯರ್​ನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಯುವ ವೇಗಿ ಮಯಾಂಕ್ ಯಾದವ್ (Mayank Yadav) ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಅದು ಸಹ ದಾಖಲೆಯೊಂದಿಗೆ ಎಂಬುದು ವಿಶೇಷ.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 14 ರನ್​ಗಳಿಗೆ ಬಾಂಗ್ಲಾದೇಶ್ ತಂಡವು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

2 / 7
ಇನ್ನು ಪವರ್​ಪ್ಲೇನಲ್ಲಿ ಉತ್ತಮ ಸ್ಕೋರ್​ಗಳಿಸುವ ಇರಾದೆಯಲ್ಲಿದ್ದ ಬಾಂಗ್ಲಾ ತಂಡಕ್ಕೆ ಸೂರ್ಯಕುಮಾರ್ ಕೌಂಟರ್ ಅಟ್ಯಾಕ್ ನೀಡಿದ್ದರು. ಅದು ಸಹ ಯುವ ವೇಗಿಯನ್ನು 6ನೇ ಓವರ್​ನಲ್ಲಿ ಕರೆ ತರುವ ಮೂಲಕ. ಈ ಓವರ್​ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ ಮಯಾಂಕ್ ಮಾದವ್ ನೀಡಿದ್ದು 0 ರನ್​.

3 / 7
ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೊದಲ ಓವರ್​ ಅನ್ನು ಮೇಡನ್ ಮಾಡುವ ಮೂಲಕ ಶುಭಾರಂಭ ಮಾಡಿದ ಮಯಾಂಕ್ ಯಾದವ್ 2ನೇ ಓವರ್​ನಲ್ಲಿ ನೀಡಿದ್ದು ಕೇವಲ 3 ರನ್​ ಮಾತ್ರ. ಅಲ್ಲದೆ ಮಹಮ್ಮದುಲ್ಲಾ (1) ರನ್ನು ಔಟ್ ಮಾಡಿ ಚೊಚ್ಚಲ ವಿಕೆಟ್​ನ್ನು ಸಹ ತಮ್ಮದಾಗಿಸಿಕೊಂಡರು.

4 / 7
ಅಲ್ಲದೆ ಈ ಪಂದ್ಯದಲ್ಲಿ 147 kph ವೇಗದದಲ್ಲಿ ಚೆಂಡೆಸೆದ ಮಯಾಂಕ್ ಯಾದವ್ 4 ಓವರ್​ಗಳಲ್ಲಿ ಕೇವಲ 21 ರನ್ ನೀಡಿ 1 ವಿಕೆಟ್​ನೊಂದಿಗೆ ತಮ್ಮ ಚೊಚ್ಚಲ ಪಂದ್ಯವನ್ನು ಕೊನೆಗೊಳಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲೇ ಯುವ ವೇಗಿ ತನ್ನ ವೇಗದ ಅಸ್ತ್ರದೊಂದಿಗೆ ಗಮನ ಸೆಳೆದಿದ್ದಾರೆ.

5 / 7
ಅದರಲ್ಲೂ ಟಿ20 ಕ್ರಿಕೆಟ್​ನ ಚೊಚ್ಚಲ ಪಂದ್ಯದಲ್ಲೇ ಮೇಡನ್ ಓವರ್ ಎಸೆದ ಭಾರತದ ಮೂರನೇ ವೇಗಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಅಜಿತ್ ಅಗರ್ಕರ್ (2006) ಹಾಗೂ ಅರ್ಷದೀಪ್ ಸಿಂಗ್ (2022) ಮಾತ್ರ ನಿರ್ಮಿಸಿದ್ದರು. ಇದೀಗ ಮೊದಲ ಟಿ20 ಪಂದ್ಯದ ಮೊದಲ ಓವರ್​ನಲ್ಲಿ ಯಾವುದೇ ರನ್ ನೀಡದ ಟೀಮ್ ಇಂಡಿಯಾದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಮಯಾಂಕ್​​ ಪಾತ್ರರಾಗಿದ್ದಾರೆ.

6 / 7
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 19.5 ಓವರ್​ಗಳಲ್ಲಿ 127 ರನ್​ಗಳಿಸಿ ಆಲೌಟ್ ಆಯಿತು. 128 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 11.5 ಓವರ್​ಗಳಲ್ಲಿ 132 ರನ್​ ಚಚ್ಚಿ, 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ