AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊತೆಯಾಗಿ ಕಣಕ್ಕಿಳಿದು ಹೊಸ ವಿಶ್ವ ದಾಖಲೆ ಬರೆದ ತಂದೆ-ಮಗ

Mohammad Nabi - Hassan Eisakhil: ಒಂದೇ ಪಂದ್ಯದಲ್ಲಿ ತಂದೆ-ಮಗ ಜೊತೆಯಾಗಿ ಕಣಕ್ಕಿಳಿದರೆ ಹೇಗಿರುತ್ತೆ. ಅದು ಸಹ ಒಂದೇ ತಂಡದ ಪರ. ಇಂತಹದೊಂದು ಅಪರೂಪದದ ಸನ್ನಿವೇಶಕ್ಕೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ 41 ವರ್ಷದ ಮೊಹಮ್ಮದ್ ನಬಿ ತನ್ನ 19 ವರ್ಷದ ಮಗ ಹಸನ್ ಐಸಾಖಿಲ್​ನೊಂದಿಗೆ ಕಣಕ್ಕಿಳಿದಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 12, 2026 | 9:54 AM

Share
ಟಿ20 ಕ್ರಿಕೆಟ್​ನಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ (Mohammad nabi) ಹಾಗೂ ಅವರ ಪುತ್ರ ಹಸನ್ ಐಸಾಖಿಲ್ (Hassan-Eisakhil) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಒಂದೇ ಪಂದ್ಯದಲ್ಲಿ ಜೊತೆಯಾಗಿ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

1 / 5
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ 22ನೇ ಪಂದ್ಯದಲ್ಲಿ ಢಾಕಾ ಕ್ಯಾಪಿಟಲ್ಸ್  ಮತ್ತು ನೋಖಾಲಿ ಎಕ್ಸ್‌ಪ್ರೆಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನೋಖಾಲಿ ಎಕ್ಸ್‌ಪ್ರೆಸ್ ಪರ ಮೊಹಮ್ಮದ್ ನಬಿ ಹಾಗೂ ಹಸನ್ ಐಸಾಖಿಲ್ ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಪ್ರಮುಖ ಟಿ20 ಲೀಗ್​ನಲ್ಲಿ ಜೊತೆಯಾಗಿ ಆಡಿದ ತಂದೆ-ಮಗ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

2 / 5
ಈ ಪಂದ್ಯದಲ್ಲಿ ಹಸನ್ ಐಸಾಖಿಲ್ ಆರಂಭಿಕನಾಗಿ ಕಣಕ್ಕಿಳಿದರೆ, ಮೊಹಮ್ಮದ್ ನಬಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಅಲ್ಲದೆ ಈ ಜೋಡಿಯು 53 ರನ್​ಗಳ ಜೊತೆಯಾಟವಾಡುವ ಮೂಲಕ ಟಿ20 ಇತಿಹಾಸದಲ್ಲೇ ಅರ್ಧಶತಕದ ಪಾಲುದಾರಿಕೆ ನಿಭಾಯಿಸಿದ ವಿಶ್ವದ ಮೊದಲ ತಂದೆ-ಮಗ ಜೋಡಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

3 / 5
ಹಾಗೆಯೇ ತಂದೆಯೊಂದಿಗೆ ಕಣಕ್ಕಿಳಿದು ಟಿ20 ಕ್ರಿಕೆಟ್​ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಹಸನ್ ಐಸಾಖಿಲ್ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿದ ಐಸಾಖಿಲ್ 5 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 92 ರನ್ ಬಾರಿಸಿದ್ದಾರೆ.

4 / 5
ಇನ್ನು ಟಿ20 ಲೀಗ್​ ಕ್ರಿಕೆಟ್​ನಲ್ಲಿ ಜೊತೆಯಾಗಿ ಕಣಕ್ಕಿಳಿದು ಪಂದ್ಯ ಗೆದ್ದ ತಂದೆ-ಮಗ ಜೋಡಿ ಎಂಬ ವಿಶೇಷ ದಾಖಲೆಯೊಂದು ಕೂಡ ಮೊಹಮ್ಮದ್ ನಬಿ ಹಾಗೂ ಹಸನ್ ಐಸಾಖಿಲ್ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೋಖಾಲಿ ಎಕ್ಸ್‌ಪ್ರೆಸ್ 20 ಓವರ್​ಗಳಲ್ಲಿ 184 ರನ್​ಗಳಿಸಿದರೆ, ಢಾಕಾ ಕ್ಯಾಪಿಟಲ್ಸ್ 18.2 ಓವರ್​ಗಳಲ್ಲಿ 143 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನೋಖಾಲಿ ಎಕ್ಸ್​ಪ್ರೆಸ್ ತಂಡವು 41 ರನ್​ಗಳ ಜಯ ಸಾಧಿಸಿದೆ.

5 / 5