- TV9 Kannada Photo gallery Cricket photos Mohammad nabi and his son hassan eisakhil creates new history in T20 Cricket
ಜೊತೆಯಾಗಿ ಕಣಕ್ಕಿಳಿದು ಹೊಸ ವಿಶ್ವ ದಾಖಲೆ ಬರೆದ ತಂದೆ-ಮಗ
Mohammad Nabi - Hassan Eisakhil: ಒಂದೇ ಪಂದ್ಯದಲ್ಲಿ ತಂದೆ-ಮಗ ಜೊತೆಯಾಗಿ ಕಣಕ್ಕಿಳಿದರೆ ಹೇಗಿರುತ್ತೆ. ಅದು ಸಹ ಒಂದೇ ತಂಡದ ಪರ. ಇಂತಹದೊಂದು ಅಪರೂಪದದ ಸನ್ನಿವೇಶಕ್ಕೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ 41 ವರ್ಷದ ಮೊಹಮ್ಮದ್ ನಬಿ ತನ್ನ 19 ವರ್ಷದ ಮಗ ಹಸನ್ ಐಸಾಖಿಲ್ನೊಂದಿಗೆ ಕಣಕ್ಕಿಳಿದಿದ್ದಾರೆ.
Updated on: Jan 12, 2026 | 9:54 AM

ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ (Mohammad nabi) ಹಾಗೂ ಅವರ ಪುತ್ರ ಹಸನ್ ಐಸಾಖಿಲ್ (Hassan-Eisakhil) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಒಂದೇ ಪಂದ್ಯದಲ್ಲಿ ಜೊತೆಯಾಗಿ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ಢಾಕಾ ಕ್ಯಾಪಿಟಲ್ಸ್ ಮತ್ತು ನೋಖಾಲಿ ಎಕ್ಸ್‌ಪ್ರೆಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನೋಖಾಲಿ ಎಕ್ಸ್‌ಪ್ರೆಸ್ ಪರ ಮೊಹಮ್ಮದ್ ನಬಿ ಹಾಗೂ ಹಸನ್ ಐಸಾಖಿಲ್ ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಪ್ರಮುಖ ಟಿ20 ಲೀಗ್ನಲ್ಲಿ ಜೊತೆಯಾಗಿ ಆಡಿದ ತಂದೆ-ಮಗ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಹಸನ್ ಐಸಾಖಿಲ್ ಆರಂಭಿಕನಾಗಿ ಕಣಕ್ಕಿಳಿದರೆ, ಮೊಹಮ್ಮದ್ ನಬಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಅಲ್ಲದೆ ಈ ಜೋಡಿಯು 53 ರನ್ಗಳ ಜೊತೆಯಾಟವಾಡುವ ಮೂಲಕ ಟಿ20 ಇತಿಹಾಸದಲ್ಲೇ ಅರ್ಧಶತಕದ ಪಾಲುದಾರಿಕೆ ನಿಭಾಯಿಸಿದ ವಿಶ್ವದ ಮೊದಲ ತಂದೆ-ಮಗ ಜೋಡಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ತಂದೆಯೊಂದಿಗೆ ಕಣಕ್ಕಿಳಿದು ಟಿ20 ಕ್ರಿಕೆಟ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಹಸನ್ ಐಸಾಖಿಲ್ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿದ ಐಸಾಖಿಲ್ 5 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 92 ರನ್ ಬಾರಿಸಿದ್ದಾರೆ.

ಇನ್ನು ಟಿ20 ಲೀಗ್ ಕ್ರಿಕೆಟ್ನಲ್ಲಿ ಜೊತೆಯಾಗಿ ಕಣಕ್ಕಿಳಿದು ಪಂದ್ಯ ಗೆದ್ದ ತಂದೆ-ಮಗ ಜೋಡಿ ಎಂಬ ವಿಶೇಷ ದಾಖಲೆಯೊಂದು ಕೂಡ ಮೊಹಮ್ಮದ್ ನಬಿ ಹಾಗೂ ಹಸನ್ ಐಸಾಖಿಲ್ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೋಖಾಲಿ ಎಕ್ಸ್‌ಪ್ರೆಸ್ 20 ಓವರ್ಗಳಲ್ಲಿ 184 ರನ್ಗಳಿಸಿದರೆ, ಢಾಕಾ ಕ್ಯಾಪಿಟಲ್ಸ್ 18.2 ಓವರ್ಗಳಲ್ಲಿ 143 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನೋಖಾಲಿ ಎಕ್ಸ್‌ಪ್ರೆಸ್ ತಂಡವು 41 ರನ್ಗಳ ಜಯ ಸಾಧಿಸಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



