Cricket Records: ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದು ಯಾರು ಗೊತ್ತಾ?
Most ducks in Cricket: ದಾಖಲೆಗಳ ಚರ್ಚೆಗಳ ನಡುವೆ ಸೊನ್ನೆ ಸುತ್ತಿ ದಾಖಲೆ ಬರೆದವರ ಪಟ್ಟಿ ಮುನ್ನಲೆಗೆ ಬರುವುದೇ ಇಲ್ಲ. ಹಾಗಿದ್ರೆ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರು ಯಾರೆಲ್ಲಾ ಎಂದು ತಿಳಿಯೋಣ.
Updated on: Jun 18, 2023 | 8:30 PM

Cricket Records: ಕ್ರಿಕೆಟ್ ಅಂಗಳದ ದಾಖಲೆಗಳ ಬಗ್ಗೆ ಮಾತನಾಡುವಾಗ ಬ್ಯಾಟರ್ ಹಾಗೂ ಬೌಲರ್ಗಳ ಭರ್ಜರಿ ದಾಖಲೆಗಳ ಬಗ್ಗೆ ಎಲ್ಲರೂ ಚರ್ಚಿಸುತ್ತಾರೆ. ಇದಾಗ್ಯೂ ಕಳಪೆ ಅಥವಾ ಹೀನಾಯ ದಾಖಲೆಗಳ ಬಗ್ಗೆ ಚರ್ಚೆಯಾಗುವುದು ತೀರಾ ವಿರಳ.

ಅದರಲ್ಲೂ ಶತಕಗಳ ಹಾಗೂ ವಿಕೆಟ್ಗಳ ದಾಖಲೆಗಳು ಸದಾ ಚರ್ಚೆಯಲ್ಲಿರುತ್ತವೆ. ಆದರೆ ಇದರ ನಡುವೆ ಸೊನ್ನೆ ಸುತ್ತಿ ದಾಖಲೆ ಬರೆದವರ ಪಟ್ಟಿ ಮುನ್ನಲೆಗೆ ಬರುವುದೇ ಇಲ್ಲ. ಹಾಗಿದ್ರೆ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರು ಯಾರೆಲ್ಲಾ ಎಂದು ತಿಳಿಯೋಣ...

1- ಮುತ್ತಯ್ಯ ಮುರಳೀಧರನ್: ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ ಒಟ್ಟು 328 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 59 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕಳಪೆ ದಾಖಲೆಯೊಂದನ್ನು ಮುರಳೀಧರನ್ ತಮ್ಮದಾಗಿಸಿಕೊಂಡಿದ್ದಾರೆ.

2- ಕಾರ್ಟ್ನಿ ವಾಲ್ಷ್: ವೆಸ್ಟ್ ಇಂಡೀಸ್ನ ಮಾಜಿ ವೇಗಿ ಕರ್ಟ್ನಿ ಆಂಡ್ರ್ಯೂ ವಾಲ್ಷ್ ಒಟ್ಟು 264 ಇನಿಂಗ್ಸ್ ಆಡಿದ್ದು, ಈ ವೇಳೆ 54 ಬಾರಿ ಶೂನ್ಯಕ್ಕೆ ಔಟಾಗಿದ್ದರು.

3- ಸನತ್ ಜಯಸೂರ್ಯ: ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ಸನತ್ ಜಯಸೂರ್ಯ ಒಟ್ಟು 651 ಇನಿಂಗ್ಸ್ಗಳಲ್ಲಿ 53 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದರು.

4- ಗ್ಲೆನ್ ಮೆಕ್ಗ್ರಾಥ್: ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾಥ್ 207 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 49 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

5- ಸ್ಟುವರ್ಟ್ ಬ್ರಾಡ್: ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಇದುವರೆಗೆ 330 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 49 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

6- ಮಹೇಲ ಜಯವರ್ಧನೆ: ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ ಒಟ್ಟು 725 ಇನಿಂಗ್ಸ್ಗಳಲ್ಲಿ 47 ಬಾರಿ ಸೊನ್ನೆ ಸುತ್ತಿ ವಿಕೆಟ್ ಒಪ್ಪಿಸಿದ್ದರು.

7- ಡೇನಿಯಲ್ ವೆಟ್ಟೋರಿ: ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಒಟ್ಟು 383 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 46 ಬಾರಿ ಶೂನ್ಯಕ್ಕೆ ಔಟಾಗಿದ್ದರು.

8- ವಾಸಿಂ ಅಕ್ರಮ್: ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ 427 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 45 ಬಾರಿ ಶೂನ್ಯಕ್ಕೆ ಔಟಾಗಿದ್ದರು.

9- ಝಹೀರ್ ಖಾನ್: ಭಾರತದ ಪರ ಅತೀ ಹೆಚ್ಚು ಬಾರಿ ಡಕ್ ಔಟ್ ಆದ ಹೀನಾಯ ದಾಖಲೆ ಝಹೀರ್ ಖಾನ್ ಹೆಸರಿನಲ್ಲಿದೆ. ಟೀಮ್ ಇಂಡಿಯಾದ ಮಾಜಿ ವೇಗಿ 232 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 44 ಬಾರಿ ಶೂನ್ಯಕ್ಕೆ ಔಟಾಗಿದ್ದರು.

ಇನ್ನು ಟೀಮ್ ಇಂಡಿಯಾ ಪರ ಅತೀ ಹೆಚ್ಚು ಶೂನ್ಯಕ್ಕೆ ಔಟಾದ ಬ್ಯಾಟರ್ ಯಾರೆಂದು ನೋಡಿದ್ರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರು ಅಗ್ರಸ್ಥಾನದಲ್ಲಿ ಕಾಣ ಸಿಗುತ್ತದೆ. ಸಚಿನ್ ತೆಂಡೂಲ್ಕರ್ ಒಟ್ಟು 782 ಇನಿಂಗ್ಸ್ಗಳಲ್ಲಿ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು.
