ವಾರ್ನರ್ ದಾಖಲೆ ಮುರಿದ ಬಾಬರ್: ಈಗಲೂ ಕೊಹ್ಲಿಯೇ ಕಿಂಗ್
TV9 Web | Updated By: ಝಾಹಿರ್ ಯೂಸುಫ್
Updated on:
Oct 09, 2022 | 11:54 AM
Virat Kohli vs Babar Azam: ಈ ಪಟ್ಟಿಯಲ್ಲಿ ಈಗಲೂ ವಿರಾಟ್ ಕೊಹ್ಲಿಯೇ ನಂಬರ್ ಸ್ಥಾನದಲ್ಲಿರುವುದು ವಿಶೇಷ. ಹಾಗಿದ್ರೆ ಟಿ20 ಕ್ರಿಕೆಟ್ನಲ್ಲಿ ಯಾವ ಬ್ಯಾಟ್ಸ್ಮನ್ ಎಷ್ಟು ಬಾರಿ ಅಜೇಯರಾಗಿ ಉಳಿದಿದ್ದಾರೆ ಎಂದು ನೋಡೋಣ...
1 / 9
ನ್ಯೂಜಿಲೆಂಡ್, ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವಣ ತ್ರಿಕೋನಾ ಸರಣಿಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ.
2 / 9
ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 53 ಎಸೆತಗಳಲ್ಲಿ 79 ರನ್ ಬಾರಿಸುವ ಮೂಲಕ ಬಾಬರ್ ಆಜಂ ಪಾಕ್ ತಂಡಕ್ಕೆ 6 ವಿಕೆಟ್ಗಳ ಜಯ ತಂದುಕೊಟ್ಟರು. ವಿಶೇಷ ಎಂದರೆ ಈ ಅಜೇಯ ಅರ್ಧಶತಕದೊಂದಿಗೆ ಟಿ20ಯಲ್ಲಿ ವಿಶೇಷ ದಾಖಲೆಯನ್ನು ಬಾಬರ್ ಬರೆದಿದ್ದಾರೆ.
3 / 9
ಈ ಹಿಂದೆ ಡೇವಿಡ್ ವಾರ್ನರ್ ಅರ್ಧಶತಕದೊಂದಿಗೆ 9 ಬಾರಿ ಟಿ20 ಕ್ರಿಕೆಟ್ನಲ್ಲಿ ಅಜೇಯರಾಗಿ ಉಳಿದಿದ್ದರು. ಇದೀಗ ಬಾಬರ್ 10ನೇ ಬಾರಿ ಅಜೇಯರಾಗಿ ಅರ್ಧಶತಕ ಬಾರಿಸುವ ಮೂಲಕ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
4 / 9
ಆದರೆ ಈ ಪಟ್ಟಿಯಲ್ಲಿ ಈಗಲೂ ವಿರಾಟ್ ಕೊಹ್ಲಿಯೇ ನಂಬರ್ ಸ್ಥಾನದಲ್ಲಿರುವುದು ವಿಶೇಷ. ಹಾಗಿದ್ರೆ ಟಿ20 ಕ್ರಿಕೆಟ್ನಲ್ಲಿ ಯಾವ ಬ್ಯಾಟ್ಸ್ಮನ್ ಎಷ್ಟು ಬಾರಿ ಅಜೇಯರಾಗಿ ಉಳಿದಿದ್ದಾರೆ ಎಂದು ನೋಡೋಣ...
5 / 9
1- ವಿರಾಟ್ ಕೊಹ್ಲಿ (ಭಾರತ) - 19 ಬಾರಿ
6 / 9
2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) - 11 ಬಾರಿ
7 / 9
3- ಬಾಬರ್ ಆಜಂ (ಪಾಕಿಸ್ತಾನ್) - 10 ಬಾರಿ
8 / 9
4- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 9 ಬಾರಿ
9 / 9
5- ಜೋಸ್ ಬಟ್ಲರ್ (ಇಂಗ್ಲೆಂಡ್) - 8 ಬಾರಿ