- Kannada News Photo gallery Cricket photos MS Dhoni Knee Surgery MS Dhoni Looks Fit and Fine In First Appearance after his Knee Surgery
MS Dhoni Knee Surgery: ಮೊಣಕಾಲು ಶಸ್ತ್ರಚಿಕಿತ್ಸೆಯ ಬಳಿಕ ಧೋನಿ ಆರೋಗ್ಯ ಹೇಗಿದೆ? ಫೋಟೋ ನೋಡಿ
MS Dhoni Knee Surgery: ಐಪಿಎಲ್ ಫೈನಲ್ ಮುಗಿದ ಬೆನ್ನಲ್ಲೇ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಹೋಗಿ ಮೇ 31 ರಂದು ಮೊಣಕಾಲಿನ ಪರೀಕ್ಷೆ ಮಾಡಿಸಿಕೊಂಡಿದ್ದ ಧೋನಿ, ಜೂನ್ 1 ರ ಬೆಳಿಗ್ಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Updated on: Jun 04, 2023 | 3:42 PM

ಮೊಣಕಾಲು ನೋವಿನಲ್ಲೇ ಇಡೀ ಐಪಿಎಲ್ ಆಡಿ ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಧೋನಿ, ಒಂದು ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ ಶಸ್ತ್ರಚಿಕಿತ್ಸೆಯ ಬಳಿಕ ಧೋನಿ ಹೇಗಿದ್ದಾರೆ ಎಂಬ ಪ್ರಶ್ನೆಗೆ ಫೋಟೋವೊಂದು ಉತ್ತರ ನೀಡಿದೆ.

ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಲೀಗ್‌ನ ಮೊದಲ ಪಂದ್ಯದಲ್ಲಿ ಧೋನಿ ಈ ಗಾಯಕ್ಕೆ ಒಳಗಾಗಿದ್ದರು. ಆ ನಂತರ ಐಪಿಎಲ್ ಫೈನಲ್ ಮುಗಿದ ಬೆನ್ನಲ್ಲೇ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಹೋಗಿ ಮೇ 31 ರಂದು ಮೊಣಕಾಲಿನ ಪರೀಕ್ಷೆ ಮಾಡಿಸಿಕೊಂಡಿದ್ದ ಧೋನಿ ಜೂನ್ 1 ರ ಬೆಳಿಗ್ಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶಸ್ತ್ರಚಿಕಿತ್ಸೆಯ ಬಳಿಕ ಧೋನಿ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾಗಬಹುದು ಎಂದು ವರದಿಗಳು ಹೇಳಿದ್ದವು. ಆದರೆ ಗೆಳೆಯನೊಂದಿಗೆ ಧೋನಿ ತಿಂಡಿ ತಿನ್ನುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ ಆರೋಗ್ಯವಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದುನ್ನು ಈ ಫೋಟೋದಲ್ಲಿ ಗಮನಿಸಬಹುದಾಗಿದೆ.

ಧೋನಿಗೆ ಖ್ಯಾತ ಕ್ರೀಡಾ ಔಷಧ ತಜ್ಞ ಡಾ. ಡಾ.ದಿನ್ಶಾ ಪರ್ದಿವಾಲಾ ಯಶಸ್ವಿ ಸರ್ಜರಿ ಮಾಡಿದ್ದರು. ಡಾ.ಪರ್ದಿವಾಲಾ ಈ ಹಿಂದೆ ರಿಷಬ್ ಪಂತ್, ನೀರಜ್ ಚೋಪ್ರಾಗೂ ಚಿಕಿತ್ಸೆ ನೀಡಿದ್ದಾರೆ.

ಇನ್ನು ಚೆನ್ನೈ ತಂಡವನ್ನು ಯಶಸ್ವಿ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗಿತ್ತು. ಆದರೆ ಈ ಪ್ರಶ್ನೆಗೆ ಫೈನಲ್ ಪಂದ್ಯ ಮುಗಿದ ಬಳಿಕ ಉತ್ತರಿಸಿದ್ದ ಧೋನಿ, ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಲ್ಲು ಇನ್ನು ಸಾಕಷ್ಟು ಸಮಯವಿದೆ ಎಂದಿದ್ದರು. ಹೀಗಾಗಿ ಧೋನಿ ಮುಂದಿನ ಆವೃತ್ತಿಯಲ್ಲೂ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
























