IPL 2025: ಅನ್‌ಕ್ಯಾಪ್ಡ್ ಕ್ಯಾಪ್ಟನ್; ಐಪಿಎಲ್‌ನಲ್ಲಿ ಹೀಗೊಂದು ದಾಖಲೆ ಬರೆದ ಧೋನಿ

Updated on: Apr 11, 2025 | 5:14 PM

MS Dhoni Uncapped IPL Captain: ಐಪಿಎಲ್ 2025ರಲ್ಲಿ ಎಂಎಸ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅನ್‌ಕ್ಯಾಪ್ಡ್ ಆಟಗಾರನಾಗಿ ನಾಯಕತ್ವ ವಹಿಸಿಕೊಂಡ ಮೊದಲ ಆಟಗಾರ ಎಂಬ ದಾಖಲೆ ಧೋನಿ ಪಾಲಾಗಿದೆ. 43 ವರ್ಷ ವಯಸ್ಸಿನ ಧೋನಿ, ಐಪಿಎಲ್‌ನ ಅತ್ಯಂತ ಹಿರಿಯ ನಾಯಕರಾಗಿಯೂ ಹೊಸ ದಾಖಲೆ ನಿರ್ಮಿಸಿದ್ದಾರೆ.

1 / 5
ಐಪಿಎಲ್ 2025 ರಲ್ಲಿ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಥಿತಿ ಇಷ್ಟೊಂದು ಕೆಟ್ಟದಾಗಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯಾರಾದರೂ ಇದನ್ನು ಊಹಿಸಿದ್ದರೂ ಸಹ, ಸೀಸನ್​ನ ಮಧ್ಯದಲ್ಲಿ ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈಗ ಅದು ಸಂಭವಿಸಿದೆ.

ಐಪಿಎಲ್ 2025 ರಲ್ಲಿ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಥಿತಿ ಇಷ್ಟೊಂದು ಕೆಟ್ಟದಾಗಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯಾರಾದರೂ ಇದನ್ನು ಊಹಿಸಿದ್ದರೂ ಸಹ, ಸೀಸನ್​ನ ಮಧ್ಯದಲ್ಲಿ ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈಗ ಅದು ಸಂಭವಿಸಿದೆ.

2 / 5

ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಚೆನ್ನೈ ತಂಡದ ನಾಯಕರಾಗಿದ್ದಾರೆ. ಇದರೊಂದಿಗೆ, ಧೋನಿ ಐಪಿಎಲ್‌ನಲ್ಲಿ ಇದುವರೆಗೆ ಸಂಭವಿಸದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಧೋನಿ ಐಪಿಎಲ್ ಇತಿಹಾಸದಲ್ಲಿ ನಾಯಕತ್ವ ಪಡೆದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

3 / 5

ಹೌದು... ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ನಾಯಕತ್ವ ವಹಿಸಿಕೊಂಡ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಎಸ್ ಧೋನಿ. ವಾಸ್ತವವಾಗಿ 5 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅಥವಾ 5 ವರ್ಷಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಪಂದ್ಯದ ಆಡುವ ಹನ್ನೊಂದರ ಬಳಗದ ಭಾಗವಾಗಿರದ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರರೆಂದು ಪರಿಗಣಿಸಲಾಗುತ್ತದೆ.

4 / 5

ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುಮಾರು 500 ಪಂದ್ಯಗಳನ್ನು ಆಡಿರುವ ಧೋನಿ, ಆಗಸ್ಟ್ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರು. ಆದರೆ ಜುಲೈ 2019 ರಿಂದ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಿಎಸ್‌ಕೆ ಅವರನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ತಂಡದಲ್ಲಿ ಉಳಿಸಿಕೊಂಡಿತ್ತು.

5 / 5

ಇದರೊಂದಿಗೆ, ಧೋನಿಗೆ ಐಪಿಎಲ್‌ನ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಧೋನಿ ಪ್ರಸ್ತುತ 43 ವರ್ಷ 278 ದಿನಗಳ ವಯಸ್ಸಿನವರಾಗಿದ್ದು, ತಮ್ಮದೇ ಆದ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, 2023 ರ ಐಪಿಎಲ್ ಫೈನಲ್‌ನಲ್ಲಿ ಅವರು ತಂಡದ ನಾಯಕತ್ವ ವಹಿಸಿದಾಗ, ಅವರ ವಯಸ್ಸು 41 ವರ್ಷ ಮತ್ತು 325 ದಿನಗಳಾಗಿದ್ದವು.

Loading...
Unable to load recommendations.
Follow Us