AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್​​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಶ್ಫಿಕುರ್ ರಹೀಮ್

Mushfiqur Rahim Test Records: ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 108 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ 107 ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು ಮುಶ್ಫಿಕುರ್ ರಹೀಮ್ ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಬರೋಬ್ಬರಿ 20 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on:Nov 19, 2025 | 12:54 PM

Share
ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಮುಶ್ಫಿಕುರ್ ರಹೀಮ್ (Mushfiqur Rahim) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 100 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಮುಶ್ಫಿಕುರ್ ರಹೀಮ್ ಈ ವಿಶೇಷ ಸಾಧನೆ ಮಾಡಿದ್ದಾರೆ.

1 / 5
ಬಾಂಗ್ಲಾದೇಶ್ ಪರ ಈವರೆಗೆ 108 ಆಟಗಾರರು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇವರಲ್ಲಿ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಿರುವುದು ಮುಶ್ಫಿಕುರ್ ರಹೀಮ್ ಮಾತ್ರ ಎಂಬುದು ವಿಶೇಷ. ಅಂದರೆ 107 ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು 38 ವರ್ಷದ ಮುಶ್ಫಿಕುರ್ ಮಾಡಿ ತೋರಿಸಿದ್ದಾರೆ.

2 / 5
ಮುಶ್ಫಿಕುರ್ ರಹೀಮ್ 100 ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯೊಂದಿಗೆ ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ರೆಕಾರ್ಡ್ ಅನ್ನು ಕೂಡ ಹೊಂದಿದ್ದಾರೆ. ಈವರೆಗೆ 182 ಟೆಸ್ಟ್​ ಇನಿಂಗ್ಸ್ ಆಡಿರುವ ಅವರು ಒಟ್ಟು  6351* ರನ್ ಕಲೆಹಾಕಿದ್ದಾರೆ.

3 / 5
ಹಾಗೆಯೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬಾಂಗ್ಲಾದೇಶ್ ಪರ ಅತ್ಯಧಿಕ ಎಸೆತಗಳನ್ನು ಎದುರಿಸಿದ ದಾಖಲೆ ಮುಶ್ಫಿಕುರ್ ರಹೀಮ್ ಹೆಸರಿನಲ್ಲಿದೆ. ಮುಶ್ಫಿಕುರ್ ಈವರೆಗೆ 13121* ಎಸೆತಗಳನ್ನು ಎದುರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾ ಪರ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಕೂಡ ಮುಶ್ಫಿಕುರ್ ರಹೀಮ್.

4 / 5
ಬಾಂಗ್ಲಾದೇಶ್ ಪರ ಈವರೆಗೆ 100 ಟೆಸ್ಟ್ ಪಂದ್ಯಗಳನ್ನಾಡಿರುವ ಮುಶ್ಫಿಕುರ್ ರಹೀಮ್ ಒಟ್ಟು 3 ಡಬಲ್ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಬಾಂಗ್ಲಾ ಪರ ಅತ್ಯಧಿಕ ದ್ವಿಶತಕ ಸಿಡಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ. ಅಲ್ಲದೆ ಟೆಸ್ಟ್​ನಲ್ಲಿ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ (7 ಬಾರಿ) ಪಡೆದ ಬಾಂಗ್ಲಾ ಆಟಗಾರ ಎಂಬ ರೆಕಾರ್ಡ್​ ಕೂಡ ಮುಶ್ಫಿಕುರ್ ರಹೀಮ್ ಹೆಸರಿನಲ್ಲಿದೆ. 

5 / 5

Published On - 12:54 pm, Wed, 19 November 25