ದೇಶಕ್ಕಾಗಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆ ಕನಸನ್ನು ನನಸಾಗಿಸುವ ಮೊದಲು ಆಟಗಾರರು ಅನೇಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಕೆಲವರು ಯಶಸ್ವಿಯಾದರೆ, ಮತ್ತು ಕೆಲವರು ವಿಫಲರಾಗುತ್ತಾರೆ. ಪಾಕಿಸ್ತಾನಿ ಕ್ರಿಕೆಟಿಗರೊಬ್ಬರು ಇದೇ ರೀತಿಯ ವೈಫಲ್ಯವನ್ನು ಅನುಭವಿಸಿ, ಆಘಾತಕ್ಕೊಳಗಾಗಿ ಆತ್ಮಹತ್ಯೆಗೆ ಮುಂದಾಗಿದ್ದಾನೆ.
1 / 5
ತಂಡದಲ್ಲಿ ಆಯ್ಕೆಯಾಗದ ಕಾರಣ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ವೇಗದ ಬೌಲರ್ ಶೋಯೆಬ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
2 / 5
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್ ಸಿಟಿ ಚಾಂಪಿಯನ್ಶಿಪ್ಗೆ ಈ ಆಟಗಾರನನ್ನು ಆಯ್ಕೆಮಾಡಿಲ್ಲ. ಆದ್ದರಿಂದ ಖಿನ್ನತೆಗೆ ಒಳಗಾದ ಈ ಆಟಗಾರ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
3 / 5
ಬಳಿಕ ಶೋಯೆಬ್ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂಡದ ಕೋಚ್, ಇಂಟರ್ಸಿಟಿ ಟ್ರಯಲ್ಸ್ಗೆ ಶೋಯೆಬ್ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದರು ಎಂದು ಬೌಲರ್ನ ಕುಟುಂಬ ತಿಳಿಸಿದೆ. ಖಿನ್ನತೆಗೊಳಗಾಗಿದ್ದ ಶೋಯೆಬ್ ರೂಂ ಒಳಗೆ ಸೇರಿಕೊಂಡಿದ್ದ. ಎಷ್ಟೇ ಕರೆದರು ಬಾಗಿಲು ತೆರೆಯಲಿಲ್ಲ. ಹಾಗಾಗಿ ನಾವು ಬಾಗಿಲು ಮುರಿದು ನೋಡಿದಾಗ ಆತ ಸ್ನಾನಗೃಹದಲ್ಲಿ ಬಿದ್ದಿದ್ದ. ಅವನ ಕೈಯಿಂದ ರಕ್ತ ದಾರಕಾರವಾಗಿ ಹರಿದಿತ್ತು. ಇದರಿಂದ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.
4 / 5
ಫೆಬ್ರವರಿ 2018 ರಲ್ಲಿ, ಸಿಟಿ ಅಂಡರ್-19 ತಂಡದಿಂದ ಕೈಬಿಟ್ಟ ನಂತರ ಕರಾಚಿಯಲ್ಲಿ ಕ್ರಿಕೆಟಿಗರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೊಹಮ್ಮದ್ ಜರಾಯಬ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕ್ರಿಕೆಟಿಗನಾಗಿದ್ದಾನೆ.