- Kannada News Photo gallery Cricket photos Pakistan Prime Minister Trolls Indias T20 World Cup Exit With Cheeky Tweet
‘ಅಯ್ಯಯ್ಯೋ ಇದು ನನ್ನ ಟ್ವೀಟ್’; ಭಾರತವನ್ನು ತೆಗಳುವ ಬರದಲ್ಲಿ ಮತ್ತೊಬ್ಬರ ಟ್ವೀಟ್ ಕದ್ದ ಪಾಕ್ ಪ್ರಧಾನಿ
ಪಾಕ್ ಪ್ರಧಾನಿ ಮಾಡಿರುವ ಟ್ವೀಟ್, ಬರೋಬ್ಬ ನೆಟ್ಟಿಗ ಮಾಡಿದ್ದ ಟ್ವೀಟ್ ಆಗಿದ್ದು, ಅದನ್ನು ಪ್ರಧಾನಿ ಕದ್ದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
Updated on: Nov 11, 2022 | 11:31 AM

ಟಿ20 ವಿಶ್ವಕಪ್‌ನಿಂದ ಭಾರತವನ್ನು ಇಂಗ್ಲೆಂಡ್ ಹೊರಹಾಕಿದೆ. ಅಡಿಲೇಡ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಸೋಲುಂಡಿತು. ಇದರೊಂದಿಗೆ ಆಂಗ್ಲರ ತಂಡ ಫೈನಲ್ ತಲುಪಿದ್ದು, ನವೆಂಬರ್ 13ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಈ ವೇಳೆ ಭಾರತದ ಸೋಲಿನ ನಂತರ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ಆ ಟ್ವೀಟ್ ಬಗ್ಗೆ ಈಗ ಎಲ್ಲೆಡೆ ಚರ್ಚೆ ಆರಂಭವಾಗಿದೆ.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಇಂಗ್ಲೆಂಡ್‌ಗೆ 169 ರನ್‌ಗಳ ಗುರಿ ನೀಡಿತು. ಉತ್ತರವಾಗಿ ಆಂಗ್ಲರ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ಗಳಲ್ಲಿಯೇ ಈ ಗುರಿಯನ್ನು ಸಾಧಿಸಿತು. ಟೀಂ ಇಂಡಿಯಾದ ಹೀನಾಯ ಸೋಲಿನ ಬಳಿಕ ಟ್ವೀಟ್ ಮಾಡಿರುವ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ‘ಈ ಭಾನುವಾರ 152/0 ವಿರುದ್ಧ 170/0’ ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ನ ಒಳಾರ್ಥ ಈ ಭಾನುವಾರ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಫೈನಲ್ನಲ್ಲಿ ಕಾದಾಡಲಿವೆ ಎಂದು ಹೇಳುವುದು ಪಾಕ್ ಪ್ರಧಾನಿಯ ಉದ್ದೇಶವಾಗಿದೆ. 170 ಎಂದರೆ ಇಂಗ್ಲೆಂಡ್, ವಾಸ್ತವವಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಭಾರತವನ್ನು ಸೋಲಿಸಿತ್ತು. 152 ಎಂದರೆ ಪಾಕಿಸ್ತಾನ, ಅಂದರೆ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಟೀಂ ಇಂಡಿಯಾ ನೀಡಿದ್ದ 152 ರನ್‌ಗಳ ಗುರಿಯನ್ನು ತಲುಪಿತ್ತು.

ಆದರೆ ಪಾಕಿಸ್ತಾನದ ಪ್ರಧಾನಿಯ ಈ ಟ್ವೀಟ್ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಏಕೆಂದರೆ ಪಾಕ್ ಪ್ರಧಾನಿ ಮಾಡಿರುವ ಟ್ವೀಟ್, ಬರೋಬ್ಬ ನೆಟ್ಟಿಗ ಮಾಡಿದ್ದ ಟ್ವೀಟ್ ಆಗಿದ್ದು, ಅದನ್ನು ಪ್ರಧಾನಿ ಕದ್ದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಪ್ರಧಾನಿ ತಮ್ಮ ಟ್ವೀಟ್ ಕೃತಿಚೌರ್ಯ ಮಾಡಿದ್ದಾರೆ ಎಂದು ಸಿನಾನ್ ಎಂಬ ಟ್ವಿಟರ್ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ದಾಖಲೆ ಮೂಲಕ ಆರೋಪ ಹೋರಿಸಿದ್ದಾರೆ. ವಾಸ್ತವವಾಗಿ ಈ ಬಳಕೆದಾರ ಸಂಜೆ 4:49 ಕ್ಕೆ ಈ ಟ್ವೀಟ್ ಮಾಡಿದ್ದಾರೆ. ಆದರೆ ಪಾಕ್ ಪಿಎಂ ಇದೇ ಟ್ವೀಟ್ ಅನ್ನು ಕದ್ದು ಸಂಜೆ 4:57 ಕ್ಕೆ ಮತ್ತೊಂದು ಟ್ವೀಟ್ ಮಾಡಿದ್ದಾರೆ.




