- Kannada News Photo gallery Cricket photos Pakistani mystery fan girl goes VIRAL after PAK vs NZ clash
ಪಾಕ್ ತಂಡಕ್ಕೆ ಫ್ಲೈಯಿಂಗ್ ಕಿಸ್ ನೀಡಿ ನೆಟ್ಟಿಗರ ಹೊಟ್ಟೆಗೆ ಚಿಟ್ಟೆ ಬಿಟ್ಟ ಸುಂದರಿಯ ಫೋಟೋ ಸಖತ್ ವೈರಲ್
PAK vs NZ: ಪಾಕಿಸ್ತಾನದ ಈ ಮಿಸ್ಟರಿ ಗರ್ಲ್ ಬಾಬರ್ ಅಜಮ್ ತಂಡದ ಕ್ರಿಕೆಟಿಗರಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವ ಫೋಟೋ ಈಗಾಗಲೇ ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Updated on:Nov 10, 2022 | 12:53 PM

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನ ಫೈನಲ್‌ಗೆ ತಲುಪಿದ್ದು, ಇಂದು ನಡೆಯುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಸೆಮಿಫೈನಲ್‌ನಲ್ಲಿ ಗೆದ್ದ ತಂಡವನ್ನು ಫೈನಲ್ನಲ್ಲಿ ಎದುರಿಸಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಹಾಗೆಯೇ ಈ ಪಂದ್ಯದ ವೇಳೆ ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡಲು ಬಂದಿದ್ದ ಚೆಲುವೆಯೊಬ್ಬಳು ತನ್ನ ಸೌಂದರ್ಯದಿಂದ ನೆಟ್ಟಿಗರ ಹೊಟ್ಟಿಗೆ ಚಿಟ್ಟೆ ಬಿಟ್ಟಿದ್ದಾಳೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ, ಪಾಕಿಸ್ತಾನದ ಈ ಮಿಸ್ಟರಿ ಗರ್ಲ್ ಬಾಬರ್ ಅಜಮ್ ತಂಡದ ಕ್ರಿಕೆಟಿಗರಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವ ಫೋಟೋ ಈಗಾಗಲೇ ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೀಗಾಗಿ ಈ ಮಿಸ್ಟರಿ ಹುಡುಗಿಯ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಸೋಷಿಯಲ್ ಮೀಡಿಯಾದ ಹಿಂದೆ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಪಾಕಿಸ್ತಾನಿ ಮೂಲದ ನಟಿಯ ಹೆಸರು ನತಾಶಾ.

ನತಾಶಾ ಬೆಳೆದದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ. ನತಾಶಾ ತನ್ನನ್ನು ತಾನು ಆಸ್ಟ್ರೇಲಿಯನ್ ಪಂಜಾಬಿ ಎಂದು ಬಣ್ಣಿಸಿಕೊಳ್ಳುತ್ತಾರೆ. ಸೆಮಿಫೈನಲ್ ಪಂದ್ಯದ ನಂತರ ಸೋಶಿಯಲ್ ಮೀಡಿಯಾದಲ್ಲಿ ಅವರ ಜನಪ್ರಿಯತೆ ಹೆಚ್ಚಾಗಿದೆ.

ಪಾಕಿಸ್ತಾನಿ ತಂಡದ ಈ ಜಬ್ರಾ ಅಭಿಮಾನಿಗೆ ಪ್ರವಾಸ ಮಾಡುವುದೆಂದರೆ ಬಹಳ ಅಚ್ಚುಮೆಚ್ಚು. ಹೀಗಾಗಿಯೇ ಈ ಸುಂದರಿ ತನ್ನ ಪ್ರವಾಸದಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ನೂರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
Published On - 12:53 pm, Thu, 10 November 22




