93 ವರ್ಷಗಳು, 589 ಪಂದ್ಯಗಳು… ಕನ್ನಡಿಗನ ಹೆಸರಿಗೆ ಅತ್ಯಂತ ಕಳಪೆ ವಿಶ್ವ ದಾಖಲೆ
Prasidh Krishna Record: ಭಾರತ ತಂಡವು ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ 93 ವರ್ಷಗಳಾಗಿವೆ. ಈ 93 ವರ್ಷಗಳಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 589 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಯಾವುದೇ ಬೌಲರ್ ಕನಿಷ್ಠ 20 ಓವರ್ಗಳನ್ನು ಎಸೆದು 6.28ರ ಸರಾಸರಿಯಲ್ಲಿ ರನ್ ನೀಡಿರಲಿಲ್ಲ. ಆದರೀಗ ಅಂತಹದೊಂದು ದುಬಾರಿ ಸ್ಪೆಲ್ ಎಸೆಯುವ ಮೂಲಕ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅತ್ಯಂತ ಕಳಪೆ ದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಅದು ಕೂಡ ಬರೋಬ್ಬರಿ 220 ರನ್ಗಳನ್ನು ನೀಡುವ ಮೂಲಕ. ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಲಿದ ಪ್ರಸಿದ್ಧ್ ಕೃಷ್ಣ ಅತ್ಯಂತ ದುಬಾರಿ ಓವರ್ಗಳನ್ನು ಎಸೆದಿದ್ದರು.
1 / 6
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 20 ಓವರ್ಗಳನ್ನು ಎಸೆದಿದ್ದ ಪ್ರಸಿದ್ಧ್ ಕೃಷ್ಣ ನೀಡಿದ್ದು ಬರೋಬ್ಬರಿ 128 ರನ್ಗಳು. ಅಂದರೆ ಪ್ರತಿ ಓವರ್ಗೆ 6.40 ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 15 ಓವರ್ ಎಸೆದಿದ್ದ ಪ್ರಸಿದ್ಧ್ 92 ರನ್ಗಳನನ್ನು ನೀಡಿದ್ದರು. ಅಂದರೆ ಎರಡು ಇನಿಂಗ್ಸ್ಗಳ ಮೂಲಕ ಟೀಮ್ ಇಂಡಿಯಾ ವೇಗಿ ನೀಡಿದ್ದು ಬರೋಬ್ಬರಿ 220 ರನ್ಗಳು.
2 / 6
ಇದು ಭಾರತ ಟೆಸ್ಟ್ ತಂಡದ ಪರ ಅತ್ಯಂತ ದುಬಾರಿ ಸ್ಪೆಲ್ ಎಂಬುದು ವಿಶೇಷ. ಅಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಕನಿಷ್ಠ 20 ಓವರ್ಗಳನ್ನು ಎಸೆದು ಅತ್ಯಧಿಕ ಎಕಾನಮಿ ರೇಟ್ ರನ್ ನೀಡಿದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಪ್ರಸಿದ್ಧ್ ಕೃಷ್ಣ ಅಗ್ರಸ್ಥಾನಕ್ಕೇರಿದ್ದಾರೆ. ಅದು ಕೂಡ 35 ಓವರ್ಗಳಲ್ಲಿ 6.28ರ ಸರಾಸರಿಯಲ್ಲಿ ರನ್ ಚಚ್ಚಿಸಿಕೊಳ್ಳುವ ಮೂಲಕ ಎಂಬುದೇ ಅಚ್ಚರಿ.
3 / 6
ಅಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಪ್ರತಿ ಓವರ್ನಲ್ಲಿ 6.28 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ 93 ವರ್ಷಗಳ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಎಕಾನಮಿ ರೇಟ್ನಲ್ಲಿ (ಕನಿಷ್ಠ 20 ಓವರ್) ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವ ಕ್ರಿಕೆಟ್ನಲ್ಲಿ ಟೆಸ್ಟ್ನಲ್ಲಿ ಅತೀ ದುಬಾರಿ ಸ್ಪೆಲ್ಗಳನ್ನು ಎಸೆದ ವಿಶ್ವದ ನಾಲ್ಕನೇ ಬೌಲರ್ ಎಂಬ ಹೀನಾಯ ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
4 / 6
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಪಾಕಿಸ್ರಾನ್ ಬೌಲರ್ ಝಾಹಿದ್ ಮಹಮೂದ್. 2022 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಝಾಹಿದ್ 33 ಓವರ್ಗಳಲ್ಲಿ 235 ರನ್ ಚಚ್ಚಿಸಿಕೊಂಡಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 11 ಓವರ್ಗಳಲ್ಲಿ 84 ರನ್ ನೀಡಿದ್ದರು. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಪ್ರತಿ ಓವರ್ಗೆ 7.25 ಸರಾಸರಿಯಲ್ಲಿ ರನ್ ನೀಡುವ ಮೂಲಕ ಅತ್ಯಂತ ಕಳಪೆ ವಿಶ್ವ ದಾಖಲೆ ಬರೆದಿದ್ದರು.
5 / 6
ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರತಿ ಓವರ್ಗೆ 6.28 ಸರಾಸರಿಯಲ್ಲಿ ರನ್ ಬಿಟ್ಟು ಕೊಡುವ ಮೂಲಕ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ದುಬಾರಿ ಸ್ಪೆಲ್ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನ ಅತ್ಯಂತ ಕಳಪೆ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.