Prasidh Krishna: ಬಹುಕಾಲದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಸಿದ್ಧ್ ಕೃಷ್ಣ

| Updated By: ಝಾಹಿರ್ ಯೂಸುಫ್

Updated on: Jun 06, 2023 | 8:28 PM

Prasidh Krishna: 2021 ರಲ್ಲಿ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ್ದ ಪ್ರಸಿದ್ಧ್ ಕೃಷ್ಣ ಇದುವರೆಗೆ 14 ಏಕದಿನ ಪಂದ್ಯಗಳನ್ನಾಡಿದ್ದಾರೆ.

1 / 6
ಟೀಮ್ ಇಂಡಿಯಾ ಆಟಗಾರ, ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ತನ್ನ ಬಹುಕಾಲದ ಗೆಳತಿ ರಚನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

2 / 6
ಈ ವೇಳೆ ನಡೆದ ಹಳದಿ ಸಂಭ್ರಮದಲ್ಲಿ ಕರ್ನಾಟಕದ ಆಟಗಾರರಾದ ದೇವದತ್ ಪಡಿಕ್ಕಲ್, ಜಗದೀಶ್ ಸುಚಿತ್, ಶರತ್ ಬಿಆರ್​ ಸೇರಿದಂತೆ ಪ್ರಸಿದ್ಧ್ ಕೃಷ್ಣ ಅವರ ಆಪ್ತರು ಕಾಣಿಸಿಕೊಂಡಿದ್ದರು.

3 / 6
ಇದೀಗ ಪ್ರಸಿದ್ಧ್ ಕೃಷ್ಣ ಹಾಗೂ ರಚನಾ ಅವರ ಸಂಭ್ರಮ-ಸಡಗರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

4 / 6
ಇದರೊಂದಿಗೆ ಕರ್ನಾಟಕದ ಯುವ ವೇಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಖಚಿತವಾಗಿದೆ.

5 / 6
2021 ರಲ್ಲಿ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ್ದ ಪ್ರಸಿದ್ಧ್ ಕೃಷ್ಣ ಇದುವರೆಗೆ 14 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 5.32 ರ ಸರಾಸರಿಯಲ್ಲಿ ರನ್ ನೀಡಿ ಒಟ್ಟು 25 ವಿಕೆಟ್​ಗಳನ್ನು ಕಬಳಿಸಿದ್ದಾರೆ.

6 / 6
ಹಾಗೆಯೇ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಬೌಲರ್​ ಆಗಿರುವ ಪ್ರಸಿದ್ಧ್ ಕೃಷ್ಣ ಈ ಬಾರಿ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ. ಇನ್ನು ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 51 ಐಪಿಎಲ್ ಪಂದ್ಯಗಳನ್ನಾಡಿರುವ ಕರ್ನಾಟಕ ವೇಗಿ 49 ವಿಕೆಟ್​ಗಳನ್ನು ಪಡೆದಿದ್ದಾರೆ.