ಮತ್ತೆ ಬಂದ ಕ್ವಿಂಟನ್ ಡಿಕಾಕ್: ಪಾಕ್ ವಿರುದ್ಧ ಕಣಕ್ಕೆ

Updated on: Sep 23, 2025 | 10:31 AM

Quinton De Kock: ಕ್ವಿಂಟನ್ ಡಿಕಾಕ್ ಸೌತ್ ಆಫ್ರಿಕಾ ಪರ ಈವರೆಗೆ 155 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 21 ಶತಕ ಹಾಗೂ 30 ಅರ್ಧಶತಕಗಳೊಂದಿಗೆ ಒಟ್ಟು 6770 ರನ್ ಕಲೆಹಾಕಿದ್ದಾರೆ. ಇದೀಗ 2 ವರ್ಷಗಳ ಬಳಿಕ ಮತ್ತೆ ಏಕದಿನ ಕ್ರಿಕೆಟ್​ನಲ್ಲಿ ಕಣಕ್ಕಿಳಿಯಲು 32 ವರ್ಷದ ಎಡಗೈ ದಾಂಡಿಗ ಸಜ್ಜಾಗಿದ್ದಾರೆ.

1 / 6
ಸೌತ್ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ (Quinton De Kock) ಏಕದಿನ ಕ್ರಿಕೆಟ್ ನಿವೃತ್ತಿಯನ್ನು ಹಿಂತೆಗೆದುಕೊಂಡಿದ್ದಾರೆ. 2023 ರ ಏಕದಿನ ವಿಶ್ವಕಪ್​ನೊಂದಿಗೆ ಒಡಿಐ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಡಿಕಾಕ್ ಇದೀಗ 2 ವರ್ಷಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

2 / 6
ಇತ್ತ ಏಕದಿನ ಕ್ರಿಕೆಟ್​​ ನಿವೃತ್ತಿಯಿಂದ ಹಿಂದೆ ಸರಿಯುತ್ತಿದ್ದಂತೆ ಕ್ವಿಂಟನ್ ಡಿಕಾಕ್​ಗೆ ಸೌತ್ ಆಫ್ರಿಕಾ ಒಡಿಐ ತಂಡದಲ್ಲಿ ಸ್ಥಾನ ಲಭಿಸಿದೆ. ಅಕ್ಟೋಬರ್ 12 ರಿಂದ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ ಸರಣಿಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕ್ವಿಂಟನ್ ಡಿಕಾಕ್ ಕಾಣಿಸಿಕೊಂಡಿದ್ದಾರೆ.

3 / 6
ಇದರೊಂದಿಗೆ ಏಕದಿನ ಕ್ರಿಕೆಟ್​ಗೆ ಕ್ವಿಂಟನ್ ಡಿಕಾಕ್ ಕಂಬ್ಯಾಕ್ ಕೂಡ ಖಚಿತವಾಗಿದೆ. ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ್ ನಡುವೆ 2 ಟೆಸ್ಟ್, 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯು ಅಕ್ಟೋಬರ್ 12 ರಿಂದ ಪ್ರಾರಂಭವಾಗಲಿದ್ದು, ಮೊದಲಿಗೆ ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಸೌತ್ ಆಫ್ರಿಕಾ ತಂಡ ಈ ಕೆಳಗಿನಂತಿದೆ...

4 / 6
ಸೌತ್ ಆಫ್ರಿಕಾ ಟೆಸ್ಟ್ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಝೋರ್ಝಿ, ಜುಬೇರ್ ಹಮ್ಝ, ಸೈಮನ್ ಹಾರ್ಮರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್ (ಎರಡನೇ ಟೆಸ್ಟ್​ಗೆ ಮಾತ್ರ), ವಿಯಾನ್ ಮುಲ್ಡರ್, ಸೆನುರಾನ್ ಮುತ್ತುಸಾಮಿ, ಕಗಿಸೊ ರಬಾಡ, ರಿಯಾನ್ ರಿಕೆಲ್ಬ್ರೆನ್, ಟ್ರಿಸ್ಟಾನ್ ಸ್ಟಬ್ಸ್, ಪ್ರೆನೆಲನ್ ಸುಬ್ರಾಯನ್, ಕೈಲ್ ವೆರೆನ್ನೆ.

5 / 6
ಸೌತ್ ಆಫ್ರಿಕಾ ಟಿ20 ತಂಡ: ಡೇವಿಡ್ ಮಿಲ್ಲರ್ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ಡೊನೊವನ್ ಫೆರೀರಾ, ರೀಝ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ನ್ಕಾಬಾ ಪೀಟರ್, ಲುವಾನ್-ಡ್ರೆ ಪ್ರಿಟೋರಿಯಸ್, ಆಂಡಿಲೇಡ್ ಸಿಮ್ಲೇನಿಯಸ್, ಲಿಝಾಡ್ ವಿಲಿಯಮ್ಸ್.

6 / 6
ಸೌತ್ ಆಫ್ರಿಕಾ ಏಕದಿನ ತಂಡ: ಮ್ಯಾಥ್ಯೂ ಬ್ರೀಟ್​ಝ್ಕೆ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಝಿ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ಡೊನೊವನ್ ಫೆರೆರಾ, ಜಾರ್ನ್ ಫೋರ್ಚುಯಿನ್, ಜಾರ್ಜ್ ಲಿಂಡೆ, ಕ್ವೆನಾ ಮಫಕಾ, ಲುಂಗಿ ಎನ್​ಗಿಡಿ, ನ್ಕಾಬಾ ಪೀಟರ್, ಲುವಾನ್-ಡ್ರೆ ಪ್ರಿಟೋರಿಯಸ್, ಸಿನೆಥೆಂಬಾ ಕೆಶಿಲೆ.