- Kannada News Photo gallery Cricket photos Ravichandran Ashwin Breaks Wasim Akram’s Longstanding Record
Ravichandran Ashwin: ಪಾಕ್ ವೇಗಿಯ ಶ್ರೇಷ್ಠ ದಾಖಲೆ ಮುರಿದ ಅಶ್ವಿನ್..!
Ravichandran Ashwin: ನ್ಯೂಜಿಲೆಂಡ್ ವಿರುದ್ದ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಪಡೆದಿದ್ದ ಅಶ್ವಿನ್ ಇದೀಗ 2ನೇ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಒಟ್ಟು ವಿಕೆಟ್ಗಳ ಸಂಖ್ಯೆಯನ್ನು 417 ಕ್ಕೇರಿಸಿದ್ದಾರೆ. ಈ ಮೂಲಕ ಪಾಕ್ ವೇಗಿ ವಾಸಿಂ ಅಕ್ರಂ ಅವರ 414 ವಿಕೆಟ್ಗಳ ಶ್ರೇಷ್ಠ ದಾಖಲೆಯನ್ನು ಹಿಂದಿಕ್ಕಿದ್ದಾರೆ.
Updated on: Nov 28, 2021 | 10:31 PM

ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಪಾಕಿಸ್ತಾನದ ದಿಗ್ಗಜ ವಾಸಿಂ ಅಕ್ರಮ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 417 ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ನಾಗಾಲೋಟ ಮುಂದುವರೆಸಿದ್ದಾರೆ.

ನ್ಯೂಜಿಲೆಂಡ್ ವಿರುದ್ದ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಪಡೆದಿದ್ದ ಅಶ್ವಿನ್ ಇದೀಗ 2ನೇ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಒಟ್ಟು ವಿಕೆಟ್ಗಳ ಸಂಖ್ಯೆಯನ್ನು 417 ಕ್ಕೇರಿಸಿದ್ದಾರೆ. ಈ ಮೂಲಕ ಪಾಕ್ ವೇಗಿ ವಾಸಿಂ ಅಕ್ರಂ ಅವರ 414 ವಿಕೆಟ್ಗಳ ಶ್ರೇಷ್ಠ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅಷ್ಟೇ ಅಲ್ಲದೆ ಟೆಸ್ಟ್ನಲ್ಲಿ 417 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದು, ಇನ್ನೊಂದು ವಿಕೆಟ್ ಪಡೆದರೆ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ.

ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದು, ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 434 ವಿಕೆಟ್ ಪಡೆದಿರುವ ಕಪಿಲ್ ದೇವ್ 2ನೇ ಸ್ಥಾನದಲ್ಲಿದ್ದಾರೆ. ಇದೀಗ 417 ವಿಕೆಟ್ಗಳೊಂದಿಗೆ ಹರ್ಭಜನ್ ಸಿಂಗ್ ಹಾಗೂ ಅಶ್ವಿನ್ ಜಂಟಿಯಾಗಿ 3ನೇ ಸ್ಥಾನ ಹಂಚಿಕೊಂಡಿದ್ದು, ಒಂದು ವಿಕೆಟ್ ಪಡೆದರೆ ಅಶ್ವಿನ್ ಭಜ್ಜಿಯನ್ನು ಹಿಂದಿಕ್ಕಿ 3ನೇ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಸದ್ಯ ಅಶ್ವಿನ್ 13ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ 708 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ 2ನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ 632 ವಿಕೆಟ್ ಉರುಳಿಸಿರುವ ಇಂಗ್ಲೆಂಡ್ನ ಜೇಮ್ಸ್ ಅಂಡರ್ಸನ್ 3ನೇ ಸ್ಥಾನವನ್ನು ಅಲಂಕರಿಸಿದ್ದಾರೆ.




