- Kannada News Photo gallery Cricket photos RCB Become Most Popular Asian Team On Instagram In November
IPL 2024: ಚೆನ್ನೈ, ಮುಂಬೈ ಅಲ್ಲ..; ಏಷ್ಯಾದ ಅತ್ಯಂತ ಜನಪ್ರಿಯ ತಂಡ ನಮ್ಮ ಆರ್ಸಿಬಿ..!
RCB: ಇಲ್ಲಿಯವರೆಗೆ ಯಾವುದೇ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಇದೀಗ ಈ ತಂಡ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಚಾಂಪಿಯನ್ ತಂಡಗಳನ್ನು ಹಿಂದಿಕ್ಕಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
Updated on: Dec 21, 2023 | 6:46 PM

ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ರಾಯಲ್ ಚಾಲೆಂಜರ್ಸ್ ಅಪಾರ ಅಭಿಮಾನಿಗಳನ್ನು ಹೊಂದಿದೆ. ಇದುವರೆಗೆ ಈ ತಂಡ ಒಂದೇ ಒಂದು ಟ್ರೋಫಿಯನ್ನು ಗೆಲ್ಲದಿದ್ದರು ಈ ತಂಡಕ್ಕಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅದರಲ್ಲಿ ಆಡುತ್ತಿರುವ ದೊಡ್ಡ ಆಟಗಾರರು.

ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಕೂಡ ಈ ತಂಡದಲ್ಲಿ ಆಡಿದ್ದಾರೆ. ಈ ತಾರಾ ಬಳಗಕ್ಕೆ ಇಲ್ಲಿಯವರೆಗೆ ಯಾವುದೇ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಇದೀಗ ಈ ತಂಡ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಚಾಂಪಿಯನ್ ತಂಡಗಳನ್ನು ಹಿಂದಿಕ್ಕಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ನವೆಂಬರ್ ತಿಂಗಳಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ಜನಪ್ರಿಯ ಏಷ್ಯನ್ ಕ್ರೀಡಾ ತಂಡ ಎನಿಸಿಕೊಂಡಿದೆ. ಡಿಪೋರ್ಟೆಸ್ ಮತ್ತು ಫೈನಾನ್ಜಾಸ್ ವರದಿಯ ಪ್ರಕಾರ, ಆರ್ಸಿಬಿ ಇನ್‌ಸ್ಟಾಗ್ರಾಮ್‌ನಲ್ಲಿ 164 ಮಿಲಿಯನ್ ಸಂವಾದಗಳನ್ನು ನಡೆಸಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಲ್ಲಿರುವ ಸಿಎಸ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ 104 ಮಿಲಿಯನ್ ಸಂವಾದಗಳನ್ನು ನಡೆಸಿದೆ.

ಇದಲ್ಲದೇ ಮುಂಬೈ ಇಂಡಿಯನ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ 88.1 ಮಿಲಿಯನ್ ಸಂವಾದಗಳನ್ನು ನಡೆಸಿದೆ.

ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಅಲನ್ಸರ್ ಎಫ್‌ಸಿ ಇನ್‌ಸ್ಟಾಗ್ರಾಮ್‌ನಲ್ಲಿ 60.8 ಮಿಲಿಯನ್ ಸಂವಾದಗಳನ್ನು ಪಡೆದುಕೊಂಡಿದೆ. ಗುಜರಾತ್ ಟೈಟಾನ್ಸ್ 46.1 ಮಿಲಿಯನ್ ಸಂವಾದಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್‌ಸ್ಟಾಗ್ರಾಮ್‌ನಲ್ಲಿ 11.9 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 6.9 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ. ಈ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫ್ಯಾನ್ ಫಾಲೋಯಿಂಗ್ ಇದೆ.




