ಅಚ್ಚರಿ ಎನಿಸಿದರೂ ಸತ್ಯ… ಒಂದು ಸಿಕ್ಸ್​​ಗಾಗಿ 11.3 ಓವರ್​ ಆಡಿದ RCB

Updated on: Apr 11, 2026 | 7:41 AM

IPL 2026 RCB vs RR: ಐಪಿಎಲ್​ನ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ ಬರೋಬ್ಬರಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ರಾಜಸ್ಥಾನ್ ರಾಯಲ್ಸ್ 18 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

1 / 7
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಅದು ಸಹ ರಾಜಸ್ಥಾನ್ ರಾಯಲ್ಸ್​ ವಿರುದ್ಧ. ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಆರ್​ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು.

2 / 7
ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಜೋಫ್ರಾ ಆರ್ಚರ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು.

3 / 7
ಇದಾಗ್ಯೂ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಮೊದಲ ಓವರ್​ನಲ್ಲಿ ಆರ್​​ಸಿಬಿ ಬರೋಬ್ಬರಿ 45 ರನ್ ಕಲೆಹಾಕಿದ್ದರು. ಇದಾದ ಬಳಿಕ ಕೂಡ ಅಬ್ಬರಿಸಿದ ಆರ್​ಸಿಬಿ ಬ್ಯಾಟರ್​ಗಳು ಪವರ್​ಪ್ಲೇನಲ್ಲಿ 61 ರನ್​ ಚಚ್ಚಿದ್ದರು.

4 / 7
ಇನ್ನು 10 ಓವರ್​ಗಳ ಮುಕ್ತಾಯದ ವೇಳೆಗೆ ಆರ್​ಸಿಬಿ ತಂಡದ ಸ್ಕೋರ್​ 89 ಕ್ಕೆ ಬಂದು ನಿಂತಿತು. ಆದರೆ ಈ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್​ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ರೊಮಾರಿಯೋ ಶೆಫರ್ಡ್​ 12ನೇ ಓವರ್​ನ 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರು.

5 / 7
ವಿಶೇಷ ಎಂದರೆ ಇದು ಆರ್​ಸಿಬಿ ತಂಡದ ಇನಿಂಗ್ಸ್​ನ ಮೊದಲ ಸಿಕ್ಸ್ ಆಗಿತ್ತು. ಪಂದ್ಯದ ಮೊದಲ ಸಿಕ್ಸ್ ಬಾರಿಸಲು ಆರ್​ಸಿಬಿ ದಾಂಡಿಗರು ಬರೋಬ್ಬರಿ 69 ಎಸೆತಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಈ ಬಾರಿಯ ಐಪಿಎಲ್​​ನಲ್ಲಿ ಒಂದು ಸಿಕ್ಸ್ ಬಾರಿಸಲು ಅತ್ಯಧಿಕ ಓವರ್​ಗಳನ್ನಾಡಿದ ತಂಡವೆಂಬ ಅಪಖ್ಯಾತಿಯನ್ನು ಆರ್​ಸಿಬಿ ತಂಡ ತನ್ನದಾಗಿಸಿಕೊಂಡಿದೆ.

6 / 7
ಅಂದರೆ ಕಳೆದ 15 ಪಂದ್ಯಗಳಲ್ಲಿ ಯಾವುದೇ ತಂಡ ಮೊದಲ ಸಿಕ್ಸ್ ಬಾರಿಸಲು 10 ಕ್ಕಿಂತ ಹೆಚ್ಚಿನ ಓವರ್​ ತೆಗೆದುಕೊಂಡಿರಲಿಲ್ಲ. ಆದರೆ ಹೊಡಿಬಡಿ ದಾಂಡಿಗರ ದಂಡೇ ಇರುವ ಆರ್​ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಸಿಕ್ಸ್ ಬಾರಿಸಿದ್ದು 12ನೇ ಓವರ್​ನ 3ನೇ ಎಸೆತದಲ್ಲಿ.  ಅದು ಸಹ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮಾರಿಯೋ ಶೆರ್ಫಡ್​ ಬ್ಯಾಟ್​ನಿಂದ.  ಈ ಸಿಕ್ಸ್ ಬಳಿಕವಷ್ಟೇ, ರಜತ್ ಪಾಟಿದಾರ್ (4) ಹಾಗೂ ವೆಂಕಟೇಶ್ ಅಯ್ಯರ್ (2)  ಸಿಕ್ಸರ್​ಗಳನ್ನು ಬಾರಿಸಿದ್ದರು. 

7 / 7
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಸಿಕ್ಸ್​ ಸಿಡಿಸಲು ಬರೋಬ್ಬರಿ 69 ಎಸೆತಗಳನ್ನು ತೆದುಕೊಂಡು, ಐಪಿಎಲ್ 2026 ರಲ್ಲಿ ಒಂದು ಸಿಕ್ಸ್​ಗಾಗಿ ಅತ್ಯಧಿಕ ಎಸೆತಗಳನ್ನು ಆಡಿದ ತಂಡವೆಂಬ ಅಪಕೀರ್ತಿಯನ್ನು ತನ್ನದಾಗಿಸಿಕೊಂಡಿದೆ.

Published On - 7:41 am, Sat, 11 April 26

Follow Us