- Kannada News Photo gallery Cricket photos RCB Unbox Royal Challengers Bangalore inducted Chris Gayle and AB de Villiers into the Hall of Fame
RCB Unbox: ಇದುವರೆಗೆ ಯಾವ ಫ್ರಾಂಚೈಸಿ ಕೂಡ ಮಾಡಿಲ್ಲ: ಆರ್ಸಿಬಿಯಿಂದ ಎಬಿಡಿ, ಗೇಲ್ಗೆ ಹಾಲ್ ಆಫ್ ಫೇಮ್ ಗೌರವ
IPL 2023: ಆರ್‌ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆಗೆ ವಿರಾಟ್ ಕೊಹ್ಲಿ ಹೊಸ ಜೆರ್ಸಿ ಅನಾವರಣ ಮಾಡಿದರು. ಜೊತೆಗೆ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.
Updated on:Mar 27, 2023 | 9:26 AM

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳ ಸಿದ್ಧತೆ ಬಹುತೇಕ ಅಂತ್ಯಗೊಂಡಿದೆ. ಆಟಗಾರರು ತಮ್ಮ ತಮ್ಮ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭ್ಯಾಸ ಕೂಡ ಆರಂಭಿಸಿದೆ.

ಭಾನುವಾರ ಆರ್‌ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್ಬಾಕ್ಸ್ ಈವೆಂಟ್ ಹಂಚಿಕೊಂಡಿತ್ತು. ಇದರಲ್ಲಿ ನೂತನ ಜೆರ್ಸಿಯನ್ನು ಲಾಂಚ್ ಮಾಡಲಾಯಿತು. ಸ್ಟೇಡಿಯಂ ಅಂತು ಸಂಪೂರ್ಣ ಫುಲ್ ಆಗಿತ್ತು.

ಈವೆಂಟ್ನಲ್ಲಿ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಜೆರ್ಸಿ ಅನಾವರಣ ಮಾಡಿದರು. ಆರ್‌ಸಿಬಿ ಫ್ರಾಂಚೈಸಿಯು ಕತಾರ್ ಏರ್‌ವೇಸ್ ಅನ್ನು ಮುಂಬರುವ ಐಪಿಎಲ್ ಋತುವಿನ ಪ್ರಮುಖ ಪ್ರಾಯೋಜಕ ಎಂದು ಘೋಷಿಸಿದೆ.

ಆರ್‌ಸಿಬಿ ತಂಡದ ಹೊಸ ಜೆರ್ಸಿಯ ಮಾದರಿಯನ್ನು ಸ್ವಲ್ಪ ಬದಲಾಯಿಸಲಾಗಿದ್ದು, ಅದನ್ನು ಹೊರತುಪಡಿಸಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಆರ್‌ಸಿಬಿ ಲೋಗೋ ಗೋಲ್ಡನ್ ಬಣ್ಣದಲ್ಲಿದ್ದು, ಟ್ರ್ಯಾಕ್ ಪ್ಯಾಂಟ್ ಮತ್ತೊಮ್ಮೆ ಕೆಂಪು ಬಣ್ಣದಲ್ಲೇ ಉಳಿಸಿಕೊಳ್ಳಲಾಗಿದೆ.

ಹೊಸ ಜೆರ್ಸಿ ಬಿಡುಗಡೆಯ ಹೊರತಾಗಿ ಆರ್‌ಟಿಬಿ ಫ್ರಾಂಚೈಸಿಯು ತನ್ನ ತಂಡಕ್ಕೆ ಕೊಡುಗೆ ನೀಡಿದ ಇಬ್ಬರು ಶ್ರೇಷ್ಠ ಆಟಗಾರರನ್ನು ಸನ್ಮಾನಿಸಿತು.

ಲೆಜೆಂಡ್ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.

ಆರ್‌ಸಿಬಿ ಈವೆಂಟ್ನಲ್ಲಿ ಸಾಕಷ್ಟು ಮನೋರಂಜನೆ ಕಾರ್ಯಕ್ರಮಗಳು ಕೂಡ ನಡೆದವು. ಗಾಯಕ ಸೋನು ನಿಗಮ್ ಅವರ ಹಾಡಿಗೆ ಅಭಿಮಾನಿಗಳು ಮನಸೋತರು.

ಹರ್ಷಲ್ ಪಟೇಲ್ ಗಿಟರ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು.

ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿದ ಕ್ಷಣ.

ಕ್ರಿಸ್ ಗೇಲ್ ಮೈದಾನದಲ್ಲಿ ನೃತ್ಯ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದರು.

ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಮೈದಾನದಲ್ಲಿ ಭೇಟಿಯಾದ ಕ್ಷಣ.
Published On - 9:26 am, Mon, 27 March 23
