AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ

Manoj Bhandage: ಈ ಬಾರಿಯ ಮಹಾರಾಜ ಟಿ20 ಟೂರ್ನಿಯಲ್ಲಿ ಮನೋಜ್ ಭಾಂಡಗೆ 12 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಶಿವಮೊಗ್ಗ ಲಯನ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿದ್ದರು. ಇನ್ನು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 33 ಎಸೆತಗಳಲ್ಲಿ ಅಜೇಯ 58 ರನ್ ಬಾರಿಸಿದರೆ, ಮಂಗಳೂರು ಡ್ರಾಗನ್ಸ್ ವಿರುದ್ದ 14 ಎಸೆತಗಳಲ್ಲಿ 31 ರನ್ ಚಚ್ಚಿದ್ದರು. ಹಾಗೆಯೇ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 14 ಬಾಲ್​ಗಳಲ್ಲಿ 38 ರನ್ ಕಲೆಹಾಕಿದ ಮನೋಜ್, ಸೆಮಿಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 11 ಎಸೆತಗಳಲ್ಲಿ 26 ರನ್ ಚಚ್ಚಿದ್ದರು.

ಝಾಹಿರ್ ಯೂಸುಫ್
|

Updated on:Sep 02, 2024 | 3:01 PM

Share
ಮನೋಜ್ ಭಾಂಡಗೆ... RCB ಅಭಿಮಾನಿಗಳಿಗೆ ಈ ಹೆಸರು ಚಿರಪರಿಚಿತ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಕನ್ನಡಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ಈ ವೇಳೆ ಆರ್​ಸಿಬಿ 29 ಪಂದ್ಯಗಳನ್ನಾಡಿದರೂ, ಮನೋಜ್ ಭಾಂಡಗೆಗೆ ಒಂದೇ ಒಂದು ಚಾನ್ಸ್ ನೀಡಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್ 2023 ರಲ್ಲಿ ಹಾಗೂ ಐಪಿಎಲ್ 2024 ರಲ್ಲಿ ಮನೋಜ್ ಆರ್​ಸಿಬಿ ಪರ ಬೆಂಚ್ ಕಾದಿದ್ದಾರೆ.

1 / 8
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೆಂಚ್ ಕಾದಿದ್ದ ಅದೇ ಮನೋಜ್ ಭಾಂಡಗೆ ಇದೀಗ ಆರ್​ಸಿಬಿ ತಂಡದ ತವರು ಮೈದಾನದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಬ್ಬರಿಸಿ ತೋರಿಸಿದ್ದಾರೆ. ಅದು ಅಂತಿಂಥ ಅಬ್ಬರವಲ್ಲ. ಬದಲಾಗಿ ಸಿಡಿಲಬ್ಬರ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

2 / 8
ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಚಾಂಪಿಯನ್ಸ್​ ಪಟ್ಟ ಅಲಂಕರಿಸುವಲ್ಲಿ ಮನೋಜ್ ಭಾಂಡಗೆ ಅವರ ಕೊಡುಗೆ ಅಮೂಲ್ಯ. ಏಕೆಂದರೆ ವಾರಿಯರ್ಸ್ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಯುವ ಎಡಗೈ ದಾಂಡಿಗ ಮ್ಯಾಚ್ ಫಿನಿಶರ್ ಪಾತ್ರ ನಿರ್ವಹಿಸಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಅಂತಿಮ ಓವರ್​ಗಳ ವೇಳೆ ಕಣಕ್ಕಿಳಿದ ಮನೋಜ್ ಕೇವಲ 13 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 44 ರನ್ ಬಾರಿಸಿದ್ದರು. ಈ ಒಂದು ಇನಿಂಗ್ಸ್​ ಫೈನಲ್ ಪಂದ್ಯದ ಚಿತ್ರಣವನ್ನೇ ಬದಲಿಸಿತ್ತು ಎಂದರೆ ತಪ್ಪಾಗಲಾರದು.

3 / 8
ಏಕೆಂದರೆ 170ರ ಅಸುಪಾಸಿನಲ್ಲಿದ್ದ ಮೈಸೂರು ವಾರಿಯರ್ಸ್ ತಂಡದ ಸ್ಕೋರ್ ಅನ್ನು ಮನೋಜ್ ಭಾಂಡೆಗೆ ಕೊನೆಯ ಎರಡು ಓವರ್​ಗಳ ಮೂಲಕ 200ರ ಗಡಿದಾಟಿಸಿದ್ದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡವು 45 ರನ್​ಗಳ ಅಂತರದ ಗೆಲುವು ದಾಖಲಿಸಿತ್ತು. ಅಂದರೆ ಇಲ್ಲಿ ಭಾಂಡೆಗೆ ಬಾರಿಸಿದ 44 ರನ್​ಗಳು ಮೈಸೂರು ವಾರಿಯರ್ಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು ಎಂದರೆ ತಪ್ಪಾಗಲಾರದು.

4 / 8
ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಮನೋಜ್ ಭಾಂಡಗೆ 12 ಪಂದ್ಯಗಳಿಂದ ಒಟ್ಟು 292 ರನ್ ಕಲೆಹಾಕಿದ್ದಾರೆ. ಅದು ಕೂಡ ಕೇವಲ 137 ಎಸೆತಗಳಲ್ಲಿ ಎಂಬುದು ವಿಶೇಷ. ಇದೇ ವೇಳೆ 25 ಸಿಕ್ಸ್​ಗಳನ್ನು ಸಹ ಸಿಡಿಸಿದ್ದಾರೆ. ಹಾಗೆಯೇ ಮಹಾರಾಜ ಟ್ರೋಫಿ 2024 ರಲ್ಲಿ 200ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 250 ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಮನೋಜ್ ಭಾಂಡಗೆ ಎಂಬುದು ಇಲ್ಲಿ ಉಲ್ಲೇಖಾರ್ಹ.

5 / 8
ಇನ್ನು 10 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಮನೋಜ್ 8 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ. ಈ ಮೂಲಕ ಮೈಸೂರು ವಾರಿಯರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೊಡುಗೆ ನೀಡಿದ್ದಾರೆ. ಆದರೆ ಇದೇ ಮನೋಜ್ ಭಾಂಡಗೆಯನ್ನು ಆರ್​ಸಿಬಿ ಪರ 2 ಐಪಿಎಲ್​ ಸೀಸನ್​ಗಳಲ್ಲಿ ಬೆಂಚ್​ನಲ್ಲೇ ಕೂರಿಸಿದ್ದರು ಎಂಬುದೇ ಅಚ್ಚರಿ.

6 / 8
2023 ರಲ್ಲಿ ಮನೋಜ್ ಭಾಂಡಗೆಯನ್ನು 20 ಲಕ್ಷ ರೂ.ಗೆ ಖರೀದಿಸಿದ ಆರ್​ಸಿಬಿ ಒಂದೇ ಒಂದು ಚಾನ್ಸ್ ನೀಡಿರಲಿಲ್ಲ. ಇದಾಗ್ಯೂ 2024 ರ ಹರಾಜಿಗೂ ಮುನ್ನ ಯುವ ಆಲ್​ರೌಂಡರ್​ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿದ್ದರು.

7 / 8
ಆದರೆ ಕಳೆದ ಸೀಸನ್​ನಲ್ಲೂ ಬೆಂಚ್ ಕಾದಿದ್ದೇ ಬಂತು. ಇದೀಗ ಮಹಾರಾಜ ಟ್ರೋಫಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಮನೋಜ್ ಭಾಂಡಗೆ 2 ವರ್ಷ ಬೆಂಚ್ ಕಾಯಿಸಿದ ಆರ್​ಸಿಬಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಅದು ಸಹ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ.

8 / 8

Published On - 3:00 pm, Mon, 2 September 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ