IPL 2023: ಪಂತ್ ಐಪಿಎಲ್ ಆಡುವುದು ಡೌಟ್; ಡೆಲ್ಲಿ ತಂಡಕ್ಕೆ ಯಾರು ನಾಯಕ? ರೇಸ್​ನಲ್ಲಿ ಈ ನಾಲ್ವರು

Edited By:

Updated on: Dec 31, 2022 | 3:12 PM

IPL 2023: ಐಪಿಎಲ್​ನಲ್ಲಿ ದೆಹಲಿ ತಂಡದ ನಾಯಕತ್ವವಹಿಸಿರುವ ಪಂತ್ ಈ ಸೀಸನ್​ನಲ್ಲಿ ಆಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದ ರೇಸ್​ನಲ್ಲಿ ಯಾರ್ಯಾರಿದ್ದಾರೆ ಎಂಬುದಕ್ಕೆ ಇಲ್ಲಿದೆ ವಿವರ.

1 / 5
ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್​ನಿಂದ ಕೆಲ ಸಮಯ ದೂರ ಉಳಿಯಬೇಕಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 ಆವೃತ್ತಿಯಿಂದಲೂ ಪಂತ್ ಹೊರಗುಳಿಯಲಿದ್ದಾರೆ. ಐಪಿಎಲ್​ನಲ್ಲಿ ದೆಹಲಿ ತಂಡದ ನಾಯಕತ್ವವಹಿಸಿರುವ ಪಂತ್ ಈ ಸೀಸನ್​ನಲ್ಲಿ ಆಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದ ರೇಸ್​ನಲ್ಲಿ ಯಾರ್ಯಾರಿದ್ದಾರೆ ಎಂಬುದಕ್ಕೆ ಇಲ್ಲಿದೆ ವಿವರ.

2 / 5

ಪಂತ್ ಬದಲಿಗೆ ಡೆಲ್ಲಿ ನಾಯಕತ್ವದ ರೇಸ್​ನಲ್ಲಿ ಡೇವಿಡ್ ವಾರ್ನರ್ ಹೆಸರು ಮುಂಚೂಣಿಯಲ್ಲಿದೆ. ಡೇವಿಡ್ ವಾರ್ನರ್ ದೀರ್ಘಕಾಲದವರೆಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ನಾಯಕತ್ವ ವಹಿಸಿದ್ದರು. ಅಲ್ಲದೆ ಅವರ ನಾಯಕತ್ವದಲ್ಲಿ ತಂಡಕ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ವಾರ್ನರ್ ಈ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು.

3 / 5

ಭಾರತೀಯ ಆಟಗಾರನನ್ನು ನಾಯಕನನ್ನಾಗಿ ಮಾಡಲು ತಂಡ ಬಯಸಿದರೆ ಅಥವಾ ಪಂತ್ ಅವರಂತಹ ಯುವ ಆಟಗಾರನಿಗೆ ನಾಯಕತ್ವವನ್ನು ನೀಡಲು ಯೋಚಿಸಿದರೆ, ಪೃಥ್ವಿ ಶಾ ಇದಕ್ಕೆ ಸೂಕ್ತ ಆಯ್ಕೆಯಾಗಲಿದ್ದಾರೆ. 2018 ರಿಂದ ಈ ಫ್ರಾಂಚೈಸಿಯಲ್ಲಿರುವ ಪೃಥ್ವಿ ಶಾ, ತಮ್ಮ ನಾಯಕತ್ವದಲ್ಲಿ ಭಾರತವನ್ನು ಅಂಡರ್-19 ವಿಶ್ವಕಪ್‌ನಲ್ಲಿ ಮುನ್ನಡೆಸಿದ್ದರು.

4 / 5

ಇವರಿಬ್ಬರನ್ನು ಬಿಟ್ಟರೆ ಮಿಚೆಲ್ ಮಾರ್ಷ್, ಡೆಲ್ಲಿಗೆ ನಾಯಕನಾಗಬಲ್ಲ ಮತ್ತೊಂದು ಆಯ್ಕೆ. ಮಾರ್ಷ್ ಆಸ್ಟ್ರೇಲಿಯಾದ ಉಪನಾಯಕನೂ ಆಗಿದ್ದಾರೆ. ಹೀಗಾಗಿ ಫ್ರಾಂಚೈಸಿ ಸಹ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

5 / 5

ಅಕ್ಷರ್ ಪಟೇಲ್ ಅವರು ತಂಡದ ನಾಯಕತ್ವಕ್ಕೆ ಸ್ಪರ್ಧಿಯಾಗಬಹುದಾದಂತಹ ಮತ್ತೊಬ್ಬ ಆಟಗಾರ. ಪಟೇಲ್ ದೆಹಲಿ ಪರ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಹೀಗಾಗಿ ಅವರಿಗೂ ಈ ಅವಕಾಶ ಸಿಗುವ ಸಾಧ್ಯತೆಗಳಿವೆ.

Loading...
Unable to load recommendations.
Follow Us