- Kannada News Photo gallery Cricket photos Rishabh Pant Accident men present at the spot looted money from his bag after car accident
ನೋವಿನಲ್ಲಿ ನರಳುತ್ತಿದ್ದ ರಿಷಬ್ ಪಂತ್ ನೆರವಿಗೆ ಬಾರದೆ ಬ್ಯಾಗ್ನಲ್ಲಿದ ಹಣ ಕದ್ದು ಪರಾರಿಯಾದ ಕ್ರೂರಿಗಳು..!
Rishabh Pant Accident: ಆದರೆ ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಕಾರು ಅಪಘಾತದಲ್ಲಿ ಇಂಜುರಿಗೊಂಡು, ರಸ್ತೆ ಬದಿಯಲಿ ಪಂತ್ ಬಿದ್ದು ನರಳಾಡುತ್ತಿದ್ದರೆ, ಅಲ್ಲಿಗೆ ಬಂದ ಕೆಲವು ಯುವಕರು ಪಂತ್ ಅವರಿಗೆ ಸಹಾಯ ಮಾಡುವ ಬದಲು ಅವರ ಬಳಿ ಇದ್ದ ಬ್ಯಾಗ್‌ನಿಂದ ಹಣ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
Updated on: Dec 30, 2022 | 1:46 PM

ರಸ್ತೆ ಅಪಘಾತದಲ್ಲಿ ರಿಷಬ್ ಪಂತ್ ತೀವ್ರವಾಗಿ ಗಾಯಗೊಂಡಿದ್ದಾರೆ. ರೂರ್ಕಿಯಲ್ಲಿರುವ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಗಂಭೀರ ಅಪಘಾತದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್ ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂಬುದೇ ಸಮಾಧಾನ ನೀಡುವ ಸುದ್ದಿ.

ಆದರೆ ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಕಾರು ಅಪಘಾತದಲ್ಲಿ ಇಂಜುರಿಗೊಂಡು, ರಸ್ತೆ ಬದಿಯಲಿ ಪಂತ್ ಬಿದ್ದು ನರಳಾಡುತ್ತಿದ್ದರೆ, ಅಲ್ಲಿಗೆ ಬಂದ ಕೆಲವು ಯುವಕರು ಪಂತ್ ಅವರಿಗೆ ಸಹಾಯ ಮಾಡುವ ಬದಲು ಅವರ ಬಳಿ ಇದ್ದ ಬ್ಯಾಗ್‌ನಿಂದ ಹಣ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಬಳಿಕ ಹರಿಯಾಣ ರೋಡ್‌ವೇಸ್‌ನ ಚಾಲಕ ಮತ್ತು ಕಂಡಕ್ಟರ್, ರಿಷಬ್ ಪಂತ್ ಅವರ ಕಾರು ಅಪಘಾತವಾದ ಬಗ್ಗೆ ಉತ್ತರಾಖಂಡ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ನಾರ್ಸಲ್ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾದ ಉತ್ತರಾಖಂಡ ಪೊಲೀಸ್ ಸಿಬ್ಬಂದಿ ಅಪಘಾತ ಸ್ಥಳಕ್ಕೆ ಧಾವಿಸಿ ಕೂಡಲೇ ಪಂತ್ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಿಷಬ್ ಪಂತ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಪಂತ್ ಅಪಾಯದಿಂದ ಪಾರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ರಿಷಬ್ ಪಂತ್ ಅವರ ಕಾಲಿನಲ್ಲಿ ಮೂಳೆ ಮುರಿತವಾಗಿದೆ. ಅವರ ತಲೆಗೆ ಗಾಯವಾಗಿದೆ. ಅಲ್ಲದೆ, ಬೆನ್ನು ಮತ್ತು ಕೈಗಳಿಗೆ ಗಾಯಗಳಾಗಿವೆ. ಆದರೆ, ಒಳ್ಳೆಯ ಸಂಗತಿ ಎಂದರೆ ಅಪಘಾತದ ನಂತರ ಅವರ ಕಾರಿಗೆ ಬೆಂಕಿ ಬಿದ್ದರೂ ಪಂತ್ ಕಾರಿನಿಂದ ಹೊರಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ.




