- Kannada News Photo gallery Cricket photos Rishabh pant net worth salary girl friend assets house cars indian cricket team player
Rishabh Pant: ದುಬಾರಿ ಕಾರು, ಐಷರಾಮಿ ಮನೆ, ಮನ ಮೆಚ್ಚಿದ ಹುಡುಗಿ; ಮಿಲೆನಿಯರ್ ಪಂತ್ ವೈಯಕ್ತಿಕ ಬದುಕಿದು
Rishabh Pant: ಪಂತ್ ವಯಸ್ಸು ಕೇವಲ 24 ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಪಂತ್ ಆಸ್ತಿ ಮೌಲ್ಯವು ಸುಮಾರು 66.42 ಕೋಟಿ ರೂ. ಆಗಿದೆ.
Updated on:Jun 12, 2022 | 4:24 PM



ಪಂತ್ ತನ್ನ ಆರಾಧ್ಯ ದೈವ ಮಹೇಂದ್ರ ಸಿಂಗ್ ಧೋನಿಯಂತೆ, ಪಂತ್ ಕೂಡ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಟೀಮ್ ಇಂಡಿಯಾದ ಈ ಬ್ಯಾಟ್ಸ್‌ಮನ್ ಬಳಿ ಮರ್ಸಿಡಿಸ್, ಆಡಿ 8, ಫೋರ್ಡ್ ಕಾರುಗಳಿವೆ. ಈ ಕಾರುಗಳ ಬೆಲೆ ನೋಡಿದರೆ ಬಹುತೇಕ ಕಾರುಗಳ ಬೆಲೆ ಕೋಟಿಗಟ್ಟಲೆ ಇದೆ.

ಪಂತ್‌ಗೆ ಹರಿದ್ವಾರದಲ್ಲಿ ಐಷಾರಾಮಿ ಮನೆ ಇದೆ ಮತ್ತು ದೆಹಲಿಯಲ್ಲೂ ಅವರಿಗೆ ಮನೆ ಇದೆ. ಪಂತ್ ಆದಾಯದ ಮೂಲಗಳು ಬಿಸಿಸಿಐನಿಂದ ವಾರ್ಷಿಕ ಒಪ್ಪಂದದ ಮೊತ್ತ, ಐಪಿಎಲ್ ತಂಡದಿಂದ ಸಂಬಳ ಮತ್ತು ಬ್ರ್ಯಾಂಡ್ ಅನುಮೋದನೆ. ಅವರು ಅನೇಕ ದೊಡ್ಡ ಕಂಪನಿಗಳಿಗೆ ಜಾಹೀರಾತುಗಳನ್ನು ಮಾಡುತ್ತಿದ್ದಾರೆ.

ಪಂತ್ ಅವರ ಪ್ರೇಮ ಜೀವನ ಯಾವಾಗಲೂ ಮುಖ್ಯಾಂಶಗಳಲ್ಲಿದೆ. ಪಂತ್ ಹಲವು ವರ್ಷಗಳಿಂದ ಇಶಾ ನೇಗಿ ಎಂಬ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. IPL-2022 ಸಮಯದಲ್ಲಿ, ದೆಹಲಿ ಕ್ಯಾಪಿಟಲ್ಸ್ ಪಂದ್ಯಗಳಲ್ಲಿ ಇಶಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಇಶಾ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದಾರೆ.

Published On - 4:11 pm, Sun, 12 June 22




