Riyan Parag: ಸಖತ್ ಹಾಟ್ ಮಗ: ರಿಯಾನ್ ಪರಾಗ್ ಯೂಟ್ಯೂಬ್ ಸರ್ಚ್​ ಲೀಕ್..!

Edited By:

Updated on: May 28, 2024 | 12:07 PM

Riyan Parag: ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. ಸ್ಪೋಟಕ ಇನಿಂಗ್ಸ್​ಗಳೊಂದಿಗೆ ಅಬ್ಬರಿಸಿದ್ದ 22 ವರ್ಷದ ಯುವ ದಾಂಡಿಗ, 15 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದರು. ಅಲ್ಲದೆ ಒಟ್ಟು 573 ರನ್ ಕಲೆಹಾಕುವ ಮೂಲಕ ಮಿಂಚಿದ್ದರು.

1 / 6
ರಾಜಸ್ಥಾನ್ ರಾಯಲ್ಸ್ ತಂಡದ ಯುವ ಸ್ಪೋಟಕ ದಾಂಡಿಗ ರಿಯಾನ್ ಪರಾಗ್ (Riyan Parag) ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಅದು ಈ ಬಾರಿಯ ಐಪಿಎಲ್​ನಲ್ಲಿನ ಪ್ರದರ್ಶನದಿಂದಾಗಿ ಅಲ್ಲ. ಬದಲಾಗಿ ಹಾಟ್ ಹುಡುಕಾಟದಿಂದ ಎಂಬುದು ವಿಶೇಷ.

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಸ್ಪೋಟಕ ದಾಂಡಿಗ ರಿಯಾನ್ ಪರಾಗ್ (Riyan Parag) ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಅದು ಈ ಬಾರಿಯ ಐಪಿಎಲ್​ನಲ್ಲಿನ ಪ್ರದರ್ಶನದಿಂದಾಗಿ ಅಲ್ಲ. ಬದಲಾಗಿ ಹಾಟ್ ಹುಡುಕಾಟದಿಂದ ಎಂಬುದು ವಿಶೇಷ.

2 / 6

ರಿಯಾನ್ ಪರಾಗ್ ತನ್ನ ಯೂಟ್ಯೂಬ್ ಖಾತೆಯಲ್ಲಿ ಬಾಲಿವುಡ್ ನಟಿಯರ ಹಾಟ್ ವಿಡಿಯೋಗಳನ್ನು ಹುಡುಕಾಡಿರುವುದು ಬಹಿರಂಗವಾಗಿದೆ. ನಟಿಯರಾದ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋಗಳನ್ನು ಪರಾಗ್ ಸರ್ಚ್ ಮಾಡಿದ್ದಾರೆ.

3 / 6

ರಿಯಾನ್ ಪರಾಗ್ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮಾಡಿದ್ದರು. ಇದಕ್ಕೂ ಮೊದಲು ಅವರು ನಟಿ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋಗಳನ್ನು ಹುಡುಕಾಡಿದ್ದರು. ಆದರೆ ಈ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡದೇ ಪರಾಗ್ ಲೈವ್ ಸ್ಟ್ರೀಮಿಂಗ್​ನಲ್ಲಿ ಕಾಣಿಸಿಕೊಂಡಿದ್ದರು.

4 / 6

ಈ ವೇಳೆ ಅವರ ಸರ್ಚ್ ಹಿಸ್ಟರಿಯಲ್ಲಿ ನಟಿಮಣಿಯರ ಹೆಸರುಗಳೊಂದಿಗೆ ಹಾಟ್ ವಿಡಿಯೋಗಳನ್ನು ಹುಡುಕಾಡಿರುವುದು ಕಂಡು ಬಂದಿದೆ. ಇದೀಗ ರಿಯಾನ್ ಪರಾಗ್ ಅವರ ಸರ್ಚ್ ಹಿಸ್ಟರಿ ಸ್ಕ್ರೀನ್ ಶಾಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾನಾ ಪ್ರತಿಕ್ರಿಯೆಗಳ ಮೂಲಕ ಯುವ ಆಟಗಾರನನ್ನು ಟ್ರೋಲ್ ಮಾಡಲಾಗುತ್ತಿದೆ.

5 / 6

ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. 15 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ಪರಾಗ್ 4 ಅರ್ಧಶತಕಗಳೊಂದಿಗೆ ಒಟ್ಟು 573 ರನ್ ಕಲೆಹಾಕಿದ್ದರು.

6 / 6

ಈ ಅದ್ಭುತ ಪ್ರದರ್ಶನದಿಂದಾಗಿ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಿತ್ತು. ಅಲ್ಲದೆ ಪರಾಗ್ ಅವರ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ಕೂಡ ವ್ಯಕ್ತವಾಗಿದ್ದವು. ಆದರೀಗ ಯುವ ದಾಂಡಿಗ ಹಾಟ್ ಟಾಪಿಕ್​ನಿಂದ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.

Loading...
Unable to load recommendations.
Follow Us