IND vs AFG: ಆರಂಭಿಕನಾಗಿ 16 ಸಾವಿರ ರನ್; ರೋಹಿತ್ ಶರ್ಮಾಗೆ ಬೇಕು ಕೇವಲ 6 ರನ್

Updated on: Jun 12, 2026 | 7:51 PM

Rohit Sharma: ರೋಹಿತ್ ಶರ್ಮಾ ಭಾರತ-ಅಫ್ಘಾನಿಸ್ತಾನ ಏಕದಿನ ಸರಣಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಿದ್ಧರಾಗಿದ್ದಾರೆ. ಜೂನ್ 13, 2026 ರಂದು ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ, ಹಿಟ್‌ಮ್ಯಾನ್ ಆರಂಭಿಕನಾಗಿ 16,000 ಅಂತರಾಷ್ಟ್ರೀಯ ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 6 ರನ್ ದೂರದಲ್ಲಿದ್ದಾರೆ. ಈ ಸಾಧನೆಯ ಮೂಲಕ ಸೆಹ್ವಾಗ್ ನಂತರ ಎರಡನೇ ಭಾರತೀಯ ಆರಂಭಿಕ ಆಟಗಾರನಾಗಲಿದ್ದಾರೆ. ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಇದು.

1 / 5
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಜೂನ್ 13, 2026 ರಿಂದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಆಡುವುದು ಖಚಿತವಾಗಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 6 ರನ್ ಬಾರಿಸಿದರೆ, ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ (PC-PTI).

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಜೂನ್ 13, 2026 ರಿಂದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಆಡುವುದು ಖಚಿತವಾಗಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 6 ರನ್ ಬಾರಿಸಿದರೆ, ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ (PC-PTI).

2 / 5

ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 16,000 ರನ್‌ಗಳನ್ನು ಪೂರ್ಣಗೊಳಿಸಲು ಈಗ ಕೇವಲ ಆರು ರನ್‌ಗಳ ಅಗತ್ಯವಿದೆ. ಹೀಗಾಗಿ ಧರ್ಮಶಾಲಾ ಮೈದಾನದಲ್ಲಿ ರೋಹಿತ್ ಶರ್ಮಾ ಆರು ರನ್‌ ಬಾರಿಸಿದರೆ, ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಕ್ಲಬ್‌ಗೆ ಸೇರಲಿದ್ದಾರೆ (PC-PTI).

3 / 5

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 16,000 ರನ್‌ಗಳನ್ನು ಪೂರ್ಣಗೊಳಿಸುವುದು ಯಾವುದೇ ಬ್ಯಾಟ್ಸ್‌ಮನ್‌ನ ಕನಸಾಗಿರುತ್ತದೆ. ಅದರಂತೆ ರೋಹಿತ್ ಈ ಕನಸನ್ನು ನನಸಾಗಿಸಿಕೊಳ್ಳುವ ಹೊಸ್ತಿಲಿನಲ್ಲಿದ್ದು, ಈ ಸಾಧನೆ ಮಾಡಿದ ಎರಡನೇ ಭಾರತೀಯ ಆರಂಭಿಕ ಆಟಗಾರನೆಂಬ ದಾಖಲೆ ಬರೆಯಲಿದ್ದಾರೆ (PC-PTI).

4 / 5

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಪ್ರಸ್ತುತ ಮುಲ್ತಾನ್ ಸುಲ್ತಾನ್ ವೀರೇಂದ್ರ ಸೆಹ್ವಾಗ್ ಹೊಂದಿದ್ದಾರೆ. ಸೆಹ್ವಾಗ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಆರಂಭಿಕ ಆಟಗಾರನಾಗಿ ಒಟ್ಟು 16,119 ರನ್ ಗಳಿಸಿದ್ದಾರೆ (PC-PTI).

5 / 5

ರೋಹಿತ್ ಶರ್ಮಾ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಪ್ರಾರಂಭಿಸಿದರು. ಆದರೆ ಅಲ್ಲಿ ರೋಹಿತ್ ಅವರ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಆದರೆ 2013 ರಲ್ಲಿ ಆರಂಭಿಕ ಜವಾಬ್ದಾರಿಯನ್ನು ಪಡೆದ ರೋಹಿತ್ ತಂಡವನ್ನು ಕೆಲವು ಐತಿಹಾಸಿಕ ಗೆಲುವುಗಳಿಗೆ ಮುನ್ನಡೆಸಿದ್ದಾರೆ. ಹಾಗೆಯೇ ತಂಡವನ್ನು ಟಿ20 ವಿಶ್ವಕಪ್ ಚಾಂಪಿಯನ್‌ ಕೂಡ ಮಾಡಿದ್ದಾರೆ. ಇದೀಗ ರೋಹಿತ್ ಅವರ ಮುಂದಿನ ಗುರಿ 2027 ರ ಏಕದಿನ ವಿಶ್ವಕಪ್ ಗೆಲ್ಲುವುದಾಗಿದೆ (PC-PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us