Rohit Sharma: ಕಿಂಗ್ ಕೊಹ್ಲಿ, ಧೋನಿಯ ದಾಖಲೆ ಸರಿಗಟ್ಟಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ..!

| Updated By: ಝಾಹಿರ್ ಯೂಸುಫ್

Updated on: Aug 29, 2022 | 5:05 PM

Rohit Sharma: ಈ ಮೂಲಕ ಟಿ20 ಕ್ರಿಕೆಟ್​ನ ಭಾರತದ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 2ನೇ ಸ್ಥಾನಕ್ಕೇರಿದ್ದಾರೆ.

1 / 6
ಏಷ್ಯಾಕಪ್​ನಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 6
ಪಾಕಿಸ್ತಾನ್ ವಿರುದ್ದ ಟೀಮ್ ಇಂಡಿಯಾ ಗೆಲವು ದಾಖಲಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ ಭಾರತಕ್ಕೆ ಅತ್ಯಧಿಕ ಜಯ ತಂದುಕೊಟ್ಟ ನಾಯಕರುಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ 2ನೇ ಸ್ಥಾನಕ್ಕೇರಿದ್ದಾರೆ.

3 / 6
ಈ ಹಿಂದೆ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರು. 50 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕಿಂಗ್ ಕೊಹ್ಲಿ 30 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಇದೀಗ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ 30 ಪಂದ್ಯಗಳನ್ನು ಗೆಲ್ಲುವ ಮೂಲಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನ ಭಾರತದ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

4 / 6
ಇನ್ನು ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ವಿರುದ್ದ ಗೆಲುವು ದಾಖಲಿಸಿದ ನಾಯಕರುಗಳ ಪಟ್ಟಿಯಲ್ಲೂ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಪಾಕ್ ವಿರುದ್ದ ಟಿ20 ಕ್ರಿಕೆಟ್​ ಜಯ ತಂದುಕೊಟ್ಟ ನಾಯಕರುಗಳ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಮಾತ್ರ ಕಾಣಿಸಿಕೊಂಡಿದ್ದರು. ಇದೀಗ ಭಾನುವಾರ ನಡೆದ ಪಂದ್ಯದಲ್ಲಿ ಗೆಲುವು ದಾಖಲಿಸುವ ರೋಹಿತ್ ಶರ್ಮಾ ಹೆಸರು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ.

5 / 6
36 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಕೇವಲ 6 ಪಂದ್ಯಗಳಲ್ಲಿ ಮಾತ್ರ ಸೋಲಿನ ರುಚಿ ನೋಡಿದ್ದಾರೆ. ಅಂದರೆ ಹಿಟ್​ಮ್ಯಾನ್ 30 ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಜಯ ತಂದುಕೊಟ್ಟಿದ್ದರು.

6 / 6
ಇನ್ನು ಟೀಮ್ ಇಂಡಿಯಾದ ಯಶಸ್ವಿ ಟಿ20 ನಾಯಕರುಗಳ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದು, ಧೋನಿ 72 ಪಂದ್ಯಗಳಲ್ಲಿ 41 ಜಯ ತಂದುಕೊಟ್ಟಿದ್ದರು. ಹಾಗೆಯೇ ಕೊಹ್ಲಿ 50 ಪಂದ್ಯಗಳಲ್ಲಿ 30 ಜಯ ಗೆಲುವು ದಾಖಲಿಸಿದರೆ, ರೋಹಿತ್ ಶರ್ಮಾ ಕೇವಲ 36 ಪಂದ್ಯಗಳಲ್ಲಿ 30 ಜಯ ತಂದುಕೊಡುವ ಮೂಲಕ ಟಿ20 ನಾಯಕತ್ವದಲ್ಲಿ ಮಿಂಚಿದ್ದಾರೆ.