- Kannada News Photo gallery Cricket photos Rohit Sharma’s childhood coach confirms His retirement date
ರೋಹಿತ್ ಶರ್ಮಾ ನಿವೃತ್ತಿಗೆ ಡೇಟ್ ಫಿಕ್ಸ್..!
Rohit Sharma retirement: 2027ರ ಏಕದಿನ ವಿಶ್ವಕಪ್ಗೆ ಆಫ್ರಿಕ್ ದೇಶಗಳು ಜಂಟಿಯಾಗಿ ಆತಿಥ್ಯವಹಿಸಲಿದೆ. ಅದರಂತೆ ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆಯಲ್ಲಿ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿದೆ. ಈ ಟೂರ್ನಿಯ ಮೂಲಕ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಲಿದ್ದಾರೆ.
Updated on: Oct 27, 2025 | 9:54 AM

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ನಿವೃತ್ತಿ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅದು ಕೂಡ ಹಿಟ್ಮ್ಯಾನ್ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಕಡೆಯಿಂದ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಚರ್ಚೆಗಳೆದ್ದಿದ್ದವು.

ಈ ಚರ್ಚೆಗಳ ನಡುವೆಯೇ ಆಸೀಸ್ ಪಿಚ್ನಲ್ಲಿ ರೋಹಿತ್ ಶರ್ಮಾ ಶತಕ ಹಾಗೂ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಅಡಿಲೇಡ್ನಲ್ಲಿ 73 ರನ್ ಬಾರಿಸಿದ್ದ ಹಿಟ್ಮ್ಯಾನ್ ಸಿಡ್ನಿಯಲ್ಲಿ ಅಜೇಯ 121 ರನ್ ಬಾರಿಸಿ ನಿವೃತ್ತಿ ಸುದ್ದಿಗಳಿಗೆ ಪೂರ್ಣ ವಿರಾಮ ಹಾಕಿದ್ದರು.

ಇದಾಗ್ಯೂ ಹಿಟ್ಮ್ಯಾನ್ ಇನ್ನು ಎಷ್ಟು ವರ್ಷ ಆಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಈ ಪ್ರಶ್ನೆಗೆ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ಸದ್ಯಕ್ಕಂತು ನಿವೃತ್ತಿ ನೀಡುವುದಿಲ್ಲ. ಇನ್ನೂ 2 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ರೋಹಿತ್ ಶರ್ಮಾ ಅವರ ಕನಸು ಏಕದಿನ ವಿಶ್ವಕಪ್ ಗೆಲ್ಲುವುದು. ಹೀಗಾಗಿ 2027ರ ಏಕದಿನ ವಿಶ್ವಕಪ್ ಆಡಲಿದ್ದಾರೆ. 2027ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಆಡುವ ಕೊನೆಯ ಪಂದ್ಯದ ಮೂಲಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ ಎಂದು ದಿನೇಶ್ ಲಾಡ್ ತಿಳಿಸಿದ್ದಾರೆ.

ಇದರೊಂದಿಗೆ ಹಿಟ್ಮ್ಯಾನ್ 2027 ರವರೆಗೆ ಭಾರತ ತಂಡದಲ್ಲಿ ಮುಂದುವರೆಯುವುದು ಖಚಿತವಾಗಿದೆ. ಈ ಮೂಲಕ ನಿವೃತ್ತಿ ಸುದ್ದಿಗೆ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ಪೂರ್ಣ ವಿರಾಮ ಹಾಕಿದ್ದಾರೆ. ಅದರಂತೆ 40ನೇ ವಯಸ್ಸಿನಲ್ಲಿ ಏಕದಿನ ವಿಶ್ವಕಪ್ ಎತ್ತಿ ಹಿಡಿದು ರೋಹಿತ್ ಶರ್ಮಾ ಸ್ಮರಣೀಯವಾಗಿ ತಮ್ಮ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಲಿದ್ದಾರಾ ಕಾದು ನೋಡಬೇಕಿದೆ.




