AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ ನಿವೃತ್ತಿಗೆ ಡೇಟ್ ಫಿಕ್ಸ್..!

Rohit Sharma retirement: 2027ರ ಏಕದಿನ ವಿಶ್ವಕಪ್​ಗೆ ಆಫ್ರಿಕ್ ದೇಶಗಳು ಜಂಟಿಯಾಗಿ ಆತಿಥ್ಯವಹಿಸಲಿದೆ. ಅದರಂತೆ ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆಯಲ್ಲಿ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿದೆ. ಈ ಟೂರ್ನಿಯ ಮೂಲಕ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಲಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 27, 2025 | 9:54 AM

Share
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ನಿವೃತ್ತಿ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅದು ಕೂಡ ಹಿಟ್​ಮ್ಯಾನ್ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಕಡೆಯಿಂದ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಚರ್ಚೆಗಳೆದ್ದಿದ್ದವು.

1 / 5
ಈ ಚರ್ಚೆಗಳ ನಡುವೆಯೇ ಆಸೀಸ್ ಪಿಚ್​ನಲ್ಲಿ ರೋಹಿತ್ ಶರ್ಮಾ ಶತಕ ಹಾಗೂ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಅಡಿಲೇಡ್​ನಲ್ಲಿ 73 ರನ್ ಬಾರಿಸಿದ್ದ ಹಿಟ್​ಮ್ಯಾನ್ ಸಿಡ್ನಿಯಲ್ಲಿ ಅಜೇಯ 121 ರನ್ ಬಾರಿಸಿ ನಿವೃತ್ತಿ ಸುದ್ದಿಗಳಿಗೆ ಪೂರ್ಣ ವಿರಾಮ ಹಾಕಿದ್ದರು.

2 / 5
ಇದಾಗ್ಯೂ ಹಿಟ್​ಮ್ಯಾನ್ ಇನ್ನು ಎಷ್ಟು ವರ್ಷ ಆಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಈ ಪ್ರಶ್ನೆಗೆ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ಸದ್ಯಕ್ಕಂತು ನಿವೃತ್ತಿ ನೀಡುವುದಿಲ್ಲ. ಇನ್ನೂ 2 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

3 / 5
ರೋಹಿತ್ ಶರ್ಮಾ ಅವರ ಕನಸು ಏಕದಿನ ವಿಶ್ವಕಪ್ ಗೆಲ್ಲುವುದು. ಹೀಗಾಗಿ 2027ರ ಏಕದಿನ ವಿಶ್ವಕಪ್​ ಆಡಲಿದ್ದಾರೆ. 2027ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಆಡುವ ಕೊನೆಯ ಪಂದ್ಯದ ಮೂಲಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ ಎಂದು ದಿನೇಶ್ ಲಾಡ್ ತಿಳಿಸಿದ್ದಾರೆ.

4 / 5
ಇದರೊಂದಿಗೆ ಹಿಟ್​ಮ್ಯಾನ್ 2027 ರವರೆಗೆ ಭಾರತ ತಂಡದಲ್ಲಿ ಮುಂದುವರೆಯುವುದು ಖಚಿತವಾಗಿದೆ. ಈ ಮೂಲಕ ನಿವೃತ್ತಿ ಸುದ್ದಿಗೆ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ಪೂರ್ಣ ವಿರಾಮ ಹಾಕಿದ್ದಾರೆ. ಅದರಂತೆ 40ನೇ ವಯಸ್ಸಿನಲ್ಲಿ ಏಕದಿನ ವಿಶ್ವಕಪ್​ ಎತ್ತಿ ಹಿಡಿದು ರೋಹಿತ್ ಶರ್ಮಾ ಸ್ಮರಣೀಯವಾಗಿ ತಮ್ಮ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಲಿದ್ದಾರಾ ಕಾದು ನೋಡಬೇಕಿದೆ.

5 / 5