AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂತ್ರಿ ಬುದ್ಧಿ… ವಿರಾಟ್ ಕೊಹ್ಲಿಯ ಶತಕ ತಪ್ಪಿಸಲು ಯತ್ನಿಸಿದ ಪಾಕ್ ವೇಗಿ..!

Virat Kohli Century: ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 241 ರನ್​ ಕಲೆಹಾಕಿದರೆ, ಈ ಗುರಿಯನ್ನು ಟೀಮ್ ಇಂಡಿಯಾ 42.3 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಝಾಹಿರ್ ಯೂಸುಫ್
|

Updated on: Feb 24, 2025 | 7:11 AM

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಅದು ಸಹ ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಬಗ್ಗು ಬಡಿಯುವ ಮೂಲಕ. ಈ ಭರ್ಜರಿ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಏಕೆಂದರೆ ಬ್ಯಾಟಿಂಗ್ ಕಷ್ಟಕರವಾಗಿದ್ದ ಪಿಚ್​ನಲ್ಲಿ ಕಿಂಗ್ ಕೊಹ್ಲಿ ಆಕರ್ಷಕ ಸೆಂಚುರಿ ಬಾರಿಸಿ ಮಿಂಚಿದ್ದರು.

1 / 6
ಆದರೆ ಈ ಶತಕ ಮೂಡಿಬಂದಿದ್ದು ಭಾರತ ತಂಡದ ಇನಿಂಗ್ಸ್​ನ ಕೊನೆಯ ಎಸೆತದಲ್ಲಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾಗೆ ಗೆಲ್ಲಲು 2 ರನ್​ಗಳ ಅವಶ್ಯಕತೆಯಿದ್ದಾಗ ಬೌಂಡರಿ ಬಾರಿಸಿ ವಿರಾಟ್ ಕೊಹ್ಲಿ ತಮ್ಮ 51ನೇ ಶತಕ ಪೂರೈಸಿದ್ದರು. ಆದರೆ ಇದಕ್ಕೂ ಮುನ್ನವೇ ಕೊಹ್ಲಿಯ ಶತಕ ತಪ್ಪಿಸಲು ಪಾಕಿಸ್ತಾನ್ ಬೌಲರ್​ಗಳು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.

2 / 6
ಅದರಲ್ಲೂ ಪ್ರಮುಖ ವೇಗಿ ಶಾಹೀನ್ ಅಫ್ರಿದಿ 42ನೇ ಓವರ್​ನಲ್ಲಿ ಸತತ ವೈಡ್​ಗಳನ್ನು ಎಸೆಯುವ ಮೂಲಕ ಅಚ್ಚರಿ ಮೂಡಿಸಿದರು. 41 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 225 ರನ್ ಕಲೆಹಾಕಿತ್ತು. ಅಲ್ಲದೆ ಭಾರತ ತಂಡಕ್ಕೆ ಗೆಲ್ಲಲು ಇನ್ನೂ 17 ರನ್​ಗಳ ಅವಶ್ಯಕತೆಯಿತ್ತು. ಇತ್ತ ವಿರಾಟ್ ಕೊಹ್ಲಿಗೆ ಶತಕ ಪೂರೈಸಲು 13 ರನ್ ಬೇಕಿತ್ತು.

3 / 6
ಈ ಹಂತದಲ್ಲಿ ದಾಳಿಗಿಳಿದ ಶಾಹೀನ್ ಅಫ್ರಿದಿ ಲಾಂಗ್ ವೈಡ್​ಗಳನ್ನು ಎಸೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಅದರಂತೆ 42ನೇ ಓವರ್​ನ 3ನೇ ಎಸೆತದಲ್ಲಿ ಅಚ್ಚರಿ ಎಂಬಂತೆ ವೈಡ್ ಎಸೆದರು. ಇದಾದ ಬಳಿಕ ಮತ್ತೊಂದು ವೈಡ್ ಎಸೆದರು. ಆ ಬಳಿಕ 4ನೇ ಎಸೆತದಲ್ಲಿ ಇನ್ನೊಂದು ವೈಡ್ ಎಸೆಯುವ ಮೂಲಕ ಅಚ್ಚರಿ ಮೂಡಿಸಿದರು.

4 / 6
ಹೀಗೆ ನಾಲ್ಕು ವೈಡ್​ಗಳೊಂದಿಗೆ ಶಾಹೀನ್ ಅಫ್ರಿದಿ ಈ ಓವರ್​ನಲ್ಲಿ ಒಟ್ಟು 13 ರನ್​ಗಳನ್ನು ನೀಡಿದ್ದರು. ಪಾಕಿಸ್ತಾನ್ ವೇಗಿಯ ಕುತಂತ್ರದ ಹೊರತಾಗಿಯೂ ಕೊನೆಯ ಓವರ್​ನಲ್ಲಿ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಲಭಿಸಿತು. ಖುಶ್ದಿಲ್ ಶಾ ಎಸೆದ 42ನೇ ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ ಒಂದು ರನ್ ಕಲೆಹಾಕಿದರು. ಮರು ಎಸೆತದಲ್ಲಿ ಅಕ್ಷರ್ ಪಟೇಲ್ ಒಂದು ರನ್​ಗಳಿಸಿ ಮತ್ತೆ ಸ್ಟ್ರೈಕ್ ನೀಡಿದರು.

5 / 6
42ನೇ ಓವರ್​ನ ಮೂರನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಫೋರ್ ಬಾರಿಸಿ ವಿರಾಟ್ ಕೊಹ್ಲಿ ಶತಕ ಪೂರೈಸಿದರು. ಅತ್ತ ಕಿಂಗ್ ಕೊಹ್ಲಿಯ ಶತಕ ತಪ್ಪಿಸಲು ಯತ್ನಿಸಿದ್ದ ಶಾಹೀನ್ ಅಫ್ರಿದಿ ಪೆಚ್ಚು ಮೊರೆಯೊಂದಿಗೆ ಬಂದು ವಿರಾಟ್ ಕೊಹ್ಲಿಯ ಕೈ ಕುಲುಕಿದರು.

6 / 6
Follow us
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ

ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್

ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​

ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್

ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು

ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು

ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ

ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ