AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬದಲಾದ ಪಾಕಿಸ್ತಾನ್ ತಂಡದ ನಾಯಕ..!

Pakistan Team Captain: 2023 ರಲ್ಲಿ ಪಾಕಿಸ್ತಾನ್ ತಂಡವನ್ನು ಬಾಬರ್ ಆಝಂ ಮುನ್ನಡೆಸುತ್ತಿದ್ದರು. ಆದರೆ 2024ರ ಬಳಿಕ ಪಾಕ್ ತಂಡದ ಕ್ಯಾಪ್ಟನ್ ಪಟ್ಟದಿಂದ ಬಾಬರ್ ಅವರನ್ನು ಕೆಳಗಿಳಿಸಲಾಗಿದೆ. ಅವರ ಬದಲಿಗೆ ಟಿ20 ತಂಡಕ್ಕೆ ಸಲ್ಮಾನ್ ಅಲಿ ಅಘಾ, ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ಹಾಗೂ ಏಕದಿನ ತಂಡಕ್ಕೆ ಮೊಹಮ್ಮದ್ ರಿಝ್ವಾನ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು.

ಝಾಹಿರ್ ಯೂಸುಫ್
|

Updated on: Oct 21, 2025 | 8:18 AM

Share
ಒಂದೇ ವರ್ಷದಲ್ಲಿ ಮೂರನೇ ಬಾರಿ ಪಾಕಿಸ್ತಾನ್ ತಂಡದ ನಾಯಕ ಬದಲಾಗಿದ್ದಾರೆ. ಈ ಬದಲಾವಣೆಯೊಂದಿಗೆ ಈ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿರುವುದು ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ. ಹೌದು, ಪಾಕಿಸ್ತಾನ್ ಏಕದಿನ ತಂಡದ ನೂತನ ನಾಯಕನಾಗಿ ಶಾಹೀನ್ ಅಫ್ರಿದಿ ಆಯ್ಕೆಯಾಗಿದ್ದಾರೆ.

1 / 5
ಈ ಹಿಂದೆ ನಾಯಕರಾಗಿದ್ದ ಮೊಹಮ್ಮದ್ ರಿಝ್ವಾನ್ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಇದೀಗ ಶಾಹೀನ್ ಅಫ್ರಿದಿ ಪಟ್ಟ ಕಟ್ಟಲಾಗಿದೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶಾಹೀನ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

2 / 5
ಇದಕ್ಕೂ ಮುನ್ನ ಶಾಹೀನ್ ಶಾ ಅಫ್ರಿದಿ ಪಾಕ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. 2023ರ ಏಕದಿನ ವಿಶ್ವಕಪ್​ನಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಬಾಬರ್ ಆಝಂ ಅವರನ್ನು ಪಾಕ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಶಾಹೀನ್ ಅಫ್ರಿದಿಯನ್ನು ನಾಯಕನಾಗಿ ನೇಮಿಸಲಾಗಿತ್ತು.

3 / 5
ಅದರಂತೆ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಿd್ದ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಶಾಹೀನ್ ಅಫ್ರಿದಿಯನ್ನು ನಾಯಕನ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ಅಲ್ಲದೆ ಬಾಬರ್ ಆಝಂಗೆ ಮತ್ತೆ ನಾಯಕತ್ವ ನೀಡಲಾಗಿತ್ತು.

4 / 5
ಇದಾದ ಬಳಿಕ 2024ರ ಟಿ20 ವಿಶ್ವಕಪ್​ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಪಾಕ್ ಪಡೆ ಹೀನಾಯ ಪ್ರದರ್ಶನ ನೀಡಿತ್ತು. ಹೀಗಾಗಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮೊಹಮ್ಮದ್ ರಿಝ್ವಾನ್​ಗೆ ಕ್ಯಾಪ್ಟನ್ ಪಟ್ಟ ನೀಡಲಾಯಿತು. ಇದೀಗ ಮೊಹಮ್ಮದ್ ರಿಝ್ವಾನ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಲಾಗಿದೆ. ಅವರ ಬದಲಿಗೆ ಶಾಹೀನ್ ಅಫ್ರಿದಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.

5 / 5
ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ​

ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?

ದೆಹಲಿ ಬ್ಲಾಸ್ಟ್​ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ

ಜೀ ಕನ್ನಡ: ರಾಧಿಕಾ ಪಂಡಿತ್ ಸಿನಿಮಾ ಟೈಟಲ್​ನಲ್ಲೇ ಬರ್ತಿದೆ ಹೊಸ ಧಾರಾವಾಹಿ

ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ1

ವಿದ್ಯಾವಂತರೇ ಟೆರರಿಸ್ಟ್​: ಮಾಜಿ ಸಂಸದ ಪ್ರತಾಪ್​ ಸಿಂಹ ಏನಂದ್ರು?

ಟನ್​ ಕಬ್ಬಿಗೆ 3500ಗೆ ರೈತರ ಪಟ್ಟು: ವಿಜಯಪುರ - ಬೆಳಗಾವಿ ಹೆದ್ದಾರಿ ಬಂದ್

ದೆಹಲಿ ನಿಗೂಢ ಸ್ಫೋಟ, ಘಟನೆ ವೇಳೆಯ ವಿಡಿಯೋ ಇಲ್ಲಿದೆ

ಬೆಂಗಳೂರು ಏರ್ಪೋರ್ಟ್ - ದಾವಣಗರೆ ಮಧ್ಯೆ KSRTC ಫ್ಲೈಬಸ್​ ಸೇವೆ ಶುರು

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಹೋಯ್ತು ವ್ಯಕ್ತಿಯ ಪ್ರಾಣ