ICC ನನ್ನ ಪಾದಗಳನ್ನು ತೊಳೆದು ನೀರು ಕುಡಿಯಬೇಕು: ಶೊಯೆಬ್ ಅಖ್ತರ್ ಅತಿರೇಕ

Shoaib Akhtar: 2003ರ ಏಕದಿನ ವಿಶ್ವಕಪ್​ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಶೊಯೆಬ್ ಅಖ್ತರ್ ಗಂಟೆಗೆ 161.3 ಕಿಲೋಮೀಟರ್ ವೇಗದಲ್ಲಿ ಚೆಂಡೆಸದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ವೇಗದ ಎಸೆತವಾಗಿದೆ. ಕಳೆದ 21 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಯಾವುದೇ ಬೌಲರ್‌ಗೆ ಸಾಧ್ಯವಾಗಿಲ್ಲ. ಇದೀಗ ಈ ದಾಖಲೆಯನ್ನು ಮುರಿಯಬಲ್ಲ ಬೌಲರ್​​ನನ್ನು ನಾನು ಪರಿಚಯಿಸಬಲ್ಲೆ ಎಂದಿದ್ದಾರೆ ಶೊಯೆಬ್ ಅಖ್ತರ್.

ಝಾಹಿರ್ ಯೂಸುಫ್
|

Updated on: Dec 17, 2024 | 10:10 AM

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೆಸರಿನಲ್ಲಿದೆ. 2003 ರ ಏಕದಿನ ವಿಶ್ವಕಪ್​ನಲ್ಲಿ 161.3 ಕಿಲೋಮೀಟರ್ ವೇಗದಲ್ಲಿ ಚೆಂಡೆಸೆಯುವ ಮೂಲಕ ಅಖ್ತರ್ ಈ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ನಿರ್ಮಾಣವಾಗಿ 21 ವರ್ಷಗಳ ಕಳೆದರೂ ಯಾರಿಂದಲೂ ಸಹ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ದಾಖಲೆಯನ್ನು ಮುರಿಯಲು ಸಾಧ್ಯ ಎಂದಿದ್ದಾರೆ ಶೊಯೆಬ್ ಅಖ್ತರ್.

1 / 6
TNKS ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡ ಶೊಯೆಬ್ ಅಖ್ತರ್​ಗೆ ತಮ್ಮ ವಿಶ್ವ ದಾಖಲೆಯನ್ನು ಯಾರಾದರೂ ಮುರಿಯಬಹುದೇ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅಖ್ತರ್, ಖಂಡಿತವಾಗಿಯೂ ಸಾಧ್ಯ. ಈ ವಿಷಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ ಎಂದು ನಾನು ಈಗಲೂ ಭಾವಿಸುತ್ತೇನೆ ಎಂದಿದ್ದಾರೆ.

2 / 6
ಒಂದು ವೇಳೆ ನಾನು ಪ್ರಪಂಚದಾದ್ಯಂತದ ಯುವ ಪ್ರತಿಭಾ ಬೌಲರ್‌ಗಳನ್ನು ಒಟ್ಟುಗೂಡಿಸಿದರೆ, ಈ ದಾಖಲೆಯನ್ನು ಕೇವಲ 6 ತಿಂಗಳೊಳಗೆ ಮುರಿದು ತೋರಿಸುತ್ತೇನೆ. ಏಕೆಂದರೆ ಯುವ ಬೌಲರ್​​ಗಳಿಂದ 160-170 ವರೆಗೆ ಬೌಲ್ ಮಾಡಲು ಸಾಧ್ಯ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.

3 / 6
ನಾನು ಪ್ರಪಂಚದಾದ್ಯಂತದ ಎರಡು-ಮೂರು ಸಾವಿರ ಬೌಲರ್​​ಗಳನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರೆ, ನನ್ನ ದಾಖಲೆಯನ್ನು ನಾನೇ ಮುರಿಯುವಂತಹ ಬೌಲರ್​ನನ್ನು ಪರಿಚಯಿಸುತ್ತೇನೆ. ಏನೂ ಆಗದಿದ್ದರೆ ಗಂಟೆಗೆ 150, 140 ಮತ್ತು 145 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಹೆಚ್ಚಿನ ಸಂಖ್ಯೆಯ ವೇಗದ ಬೌಲರ್‌ಗಳನ್ನು ನಾನು ನಿಮಗೆ ನೀಡುತ್ತೇನೆ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.

4 / 6
ನಾನು ಕ್ರಿಕೆಟ್ ಜಗತ್ತಿಗೆ ಅತ್ಯುತ್ತಮ ಬೌಲರ್​​ಗಳನ್ನು ನೀಡಬಲ್ಲೆ. ಅವರನ್ನು ನೀವು ಆಡಿಸುತ್ತೀರೋ ಇಲ್ಲವೋ ನಿಮಗೆ ಬಿಟ್ಟದ್ದು, ಆದರೆ ನಾನು ಪರಿಚಯಿಸುವ ಬೌಲರ್​​ಗಳನ್ನು ಆಡಿಸುವಂತೆ ಪೋಲ್ ನಡೆಸುತ್ತೇನೆ. ಈ ಮೂಲಕ ಅತ್ಯುತ್ತಮ ಬೌಲರ್​ನ ಆಡಿಸುವಂತಹ ವ್ಯವಸ್ಥೆ ಸೃಷ್ಟಿಸುತ್ತೇನೆ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.

5 / 6
ಒಂದು ವೇಳೆ ನನ್ನ ಗರಡಿಯಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್​ಗಳು ದೊಡ್ಡ ಸಂಖ್ಯೆಯಲ್ಲಿ ಬಂದರೆ, ಐಸಿಸಿ ನನ್ನ ಪಾದಗಳನ್ನು ತೊಳೆದು ನೀರು ಕುಡಿಯಬೇಕು ಎಂದು ಇದೇ ವೇಳೆ ಶೊಯೆಬ್ ಅಖ್ತರ್ ಅತಿರೇಕದ ಮಾತುಗಳನ್ನಾಡಿದ್ದಾರೆ. ಇದೀಗ ಅಖ್ತರ್ ಅವರ ಹೇಳಿಕೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಏಕೆಂದರೆ ಇನ್ನೂ ಸಹ ಬೌಲಿಂಗ್ ಅಕಾಡೆಮಿ ಅಥವಾ ಯುವ ಪ್ರತಿಭಾ ಬೌಲರ್​​ಗಳಿಗಾಗಿ ವ್ಯವಸ್ಥೆ ಸೃಷ್ಟಿಸದೇ ಶೊಯೆಬ್ ಅಖ್ತರ್ ಅತಿರೇಕದ ಮಾತುಗಳನ್ನಾಡುತ್ತಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ