
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಆಡಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಚುಟುಕು ಮಾದರಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ನೂತನ ನಾಯಕನ ನಾಯಕತ್ವದಲ್ಲಿ ಭಾರತ ಟಿ20 ತಂಡ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಈ ಎರಡೂ ಪ್ರವಾಸದಲ್ಲೂ ತಂಡವನ್ನು ಮೊಟ್ಟ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ (PC-PTI).

ಮೊದಲಿಗೆ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯೊಂದಿಗೆ ಶ್ರೇಯಸ್ ಅವರ ನಾಯಕತ್ವದ ಪ್ರಯಾಣವೂ ಆರಂಭವಾಗಲಿದೆ. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಅಲ್ಲಿಯೂ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಆ ನಂತರ ಏಷ್ಯಾನ್ ಕ್ರೀಡಾಕೂಟದಲ್ಲೂ ಅಯ್ಯರ್ ನಾಯಕತ್ವದಲ್ಲಿ ಭಾರತ ಟಿ20 ತಂಡ ಕಣಕ್ಕಿಳಿಯಲಿದೆ (PC-PTI).

ಈ ಮೂರು ಸರಣಿಗಳಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಅಯ್ಯರ್ ಅವರೇ ನಾಯಕನೆಂಬುದು ಖಚಿತವಾಗಿದೆ. ಆದರೆ ಈ ಮೂರು ಸರಣಿಗಳ ನಂತರ ಶ್ರೇಯಸ್ ಅಯ್ಯರ್ ಟಿ20 ತಂಡದ ನಾಯಕನಾಗಿ ಮುಂದುವರೆಯುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಈ ಮೂರು ಸರಣಿಗಳ ನಂತರ ಅಯ್ಯರ್ ಅವರ ಬಳಿಯಿಂದ ನಾಯಕತ್ವವನ್ನು ಕಿತ್ತುಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಾಗುತ್ತಿವೆ (PC-PTI).

ರೆವ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಆಯ್ಕೆ ಸಮಿತಿಯು ಶುಭ್ಮನ್ ಗಿಲ್ ಅವರನ್ನು ಟಿ20 ತಂಡಕ್ಕೂ ಮರಳಿ ಕರೆತಂದು ಅವರಿಗೆ ನಾಯಕತ್ವ ವಹಿಸುವ ಬಗ್ಗೆ ಚಿಂತಿಸಲಾರಂಬಿಸಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದವರೆಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಆಯ್ಕೆದಾರರು ಅಂತಿಮವಾಗಿ ನಿರ್ಧರಿಸಿದ್ದು, ಈ ಕ್ರೀಡಾಕೂಟ ಮುಗಿದ ಬಳಿಕ ಇವರಿಬ್ಬರಲ್ಲಿ ಒಬ್ಬರನ್ನು ಟಿ20 ತಂಡದ ಖಾಯಂ ನಾಯಕನಾಗಿ ನೇಮಿಸುವ ಇರಾದೆಯಲ್ಲಿ ಆಯ್ಕೆ ಸಮಿತಿ ಇದೆ ಎಂದು ವರದಿಯಾಗಿದೆ (PC-PTI).

ಆದಾಗ್ಯೂ ಈ ಮೂರು ಸರಣಿಗಳಿಗೆ ಭಾರತ ಟಿ20 ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ್ದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಒಲಿಂಪಿಕ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಶ್ರೇಯಸ್ ಅಯ್ಯರ್, ಟಿ20 ತಂಡದ ನಾಯಕತ್ವಕ್ಕೆ ಉತ್ತಮ ಆಯ್ಕೆ ಎಂದು ಹೇಳಿದ್ದರು. ಇದನ್ನು ಗಮನಿಸಿದರೆ, ಮುಂದಿನ ಟಿ20 ವಿಶ್ವಕಪ್ವರೆಗೆ ನಾಯಕನಾಗಿ ಅಯ್ಯರ್ ಮುಂದುವರೆಯುವ ಸಾಧ್ಯತೆಗಳಿವೆ (PC-PTI).