AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಶುಭ್​ಮನ್ ಗಿಲ್… ಅಹಮದಾಬಾದ್​ನ ಪ್ರಿನ್ಸ್​ ವಿದೇಶದಲ್ಲಿ ಠುಸ್

Shubman Gill: ಟೀಮ್ ಇಂಡಿಯಾದ ಭರವಸೆಯ ಯುವ ದಾಂಡಿಗ ಶುಭ್​​ಮನ್ ಗಿಲ್ ಕಳಪೆ ಫಾರ್ಮ್​​ನಿಂದ ಬಳಲುತ್ತಿದ್ದಾರೆ. ಅದರಲ್ಲೂ ವಿದೇಶಿ ಪಂದ್ಯಗಳಲ್ಲಿ ರನ್​ಗಳಿಸಲು ತಡಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೂರು ಇನಿಂಗ್ಸ್ ಆಡಿರುವ ಶುಭ್​​ಮನ್ ಗಿಲ್ ಕಲೆಹಾಕಿರುವುದು ಕೇವಲ 60 ರನ್​ಗಳು ಮಾತ್ರ.

ಝಾಹಿರ್ ಯೂಸುಫ್
|

Updated on: Dec 21, 2024 | 9:08 AM

Share
ಶುಭ್​ಮನ್ ಗಿಲ್... ಹದಿ ಹರೆಯದಲ್ಲೇ ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ ಗಿಲ್ ಇದೀಗ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಏಷ್ಯಾದ ಹೊರಗೆ ರನ್​ಗಳಿಸಲು ಟೀಮ್ ಇಂಡಿಯಾ ಬ್ಯಾಟರ್ ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

1 / 6
2021ರ ಬಳಿಕ ಏಷ್ಯಾದ ಹೊರಗೆ ಆಡಿದ 16 ಇನಿಂಗ್ಸ್​ಗಳಲ್ಲಿ ಶುಭ್​ಮನ್ ಗಿಲ್ ಕಲೆಹಾಕಿರುವುದು ಕೇವಲ 267 ರನ್​ಗಳು ಮಾತ್ರ. ಈ ವೇಳೆ ಒಂದೇ ಒಂದು ಅರ್ಧಶತಕವನ್ನು ಸಹ ಬಾರಿಸಲು ಸಾಧ್ಯವಾಗಿಲ್ಲ. ಅಂದರೆ ಕೇವಲ 17.80ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.

2 / 6
ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಗಿಲ್, ಕಳೆದ 3 ಇನಿಂಗ್ಸ್​ಗಳಲ್ಲಿ ಕಲೆಹಾಕಿರುವುದು ಕೇವಲ 60 ರನ್​ಗಳು ಮಾತ್ರ. ಅಂದರೆ ಎರಡು ಪಂದ್ಯಗಳಲ್ಲಿ ಕೇವಲ 20 ರ ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದಾರೆ.

3 / 6
ಹೀಗಾಗಿಯೇ ಇದೀಗ ವಿದೇಶಿ ಪಿಚ್​ನಲ್ಲೂ ಅದ್ಭುತವಾಗಿ ಬ್ಯಾಟ್ ಮಾಡಬಲ್ಲೆ ಎಂಬುದನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಶುಭ್​ಮನ್ ಗಿಲ್​ಗೆ ಎದುರಾಗಿದೆ. ಏಕೆಂದರೆ ಈ ಮೊದಲಿನಿಂದಲೂ ಗಿಲ್ ಅಹಮದಾಬಾದ್​ ಪಿಚ್​ನಲ್ಲಿ ಮಾತ್ರ ಅಬ್ಬರಿಸುತ್ತಾರೆಂಬ ಆರೋಪಗಳಿದ್ದವು.

4 / 6
ಇದನ್ನು ಪುಷ್ಠೀಕರಿಸುವಂತೆ ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗಿಲ್ ಅವರ ಬ್ಯಾಟಿಂಗ್ ಸರಾಸರಿ ಅದ್ಭುತವಾಗಿದೆ. ಅಂದರೆ 2021 ರಿಂದ 2024 ರವರೆಗೆ ಗಿಲ್ ಅಹಮದಾಬಾದ್​ನಲ್ಲಿ 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 1079 ರನ್​ಗಳು. ಅಲ್ಲದೆ 4 ಶತಕಗಳನ್ನು ಸಹ ಬಾರಿಸಿದ್ದಾರೆ.

5 / 6
ಅಂದರೆ ಅಹದಾಬಾದ್​ನಲ್ಲಿ ಆಡಿದ ಕಳೆದ 19 ಪಂದ್ಯಗಳಲ್ಲಿ 71.93 ಸರಾಸರಿಯಲ್ಲಿ ರನ್ ಕಲೆಹಾಕಿರುವ ಶುಭ್​ಮನ್ ಗಿಲ್, ಏಷ್ಯಾದ ಹೊರಗೆ 16 ಇನಿಂಗ್ಸ್​ಗಳಿಂದ ಗಳಿಸಿದ್ದು 267 ರನ್​ಗಳು ಮಾತ್ರ. ಅದು ಸಹ ಕೇವಲ 17.80 ರ ಸರಾಸರಿಯಲ್ಲಿ... ಹೀಗಾಗಿಯೇ ಅಹದಾಬಾದ್​ನ ಪ್ರಿನ್ಸ್ ವಿದೇಶದಲ್ಲಿ ಠುಸ್ ಎಂಬ ಟೀಕೆಗಳು ಕೇಳಿ ಬರಲಾರಂಭಿಸಿದೆ.

6 / 6
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ