
ಶುಭ್ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಮೂರು ದಿನಗಳ ಆಟ ಮುಗಿದಿದ್ದು ಇದುವರೆಗೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ ತಂಡದ ಕಳಪೆ ಫಿಲ್ಡಿಂಗ್ ಹಾಗೂ ನಾಯಕನ ಡಿಆರ್ಎಸ್ ತೆಗೆದುಕೊಳ್ಳುವ ನಿರ್ಧಾರ ತಂಡಕ್ಕೆ ದೊಡ್ಡ ಹೊಡೆತ ನೀಡುತ್ತಿದೆ(PC-PTI).

ಜೂನ್ 20, 2025 ರಂದು ಲೀಡ್ಸ್‌ನ ಹೆಡ್ಲಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದೊಂದಗೆ ಭಾರತ ಟೆಸ್ಟ್ ತಂಡದ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ಗಿಲ್, ಇದುವರೆಗೆ ಆಟಗಾರನಾಗಿ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕನಾಗಿಯೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಲ್ಪಮಟ್ಟಿನ ಯಶಸ್ಸು ಕಂಡಿದ್ದಾರೆ(PC-PTI).

ಆದರೆ ಗಿಲ್ ಡಿಆರ್ಎಸ್ ತೆಗೆದುಕೊಳ್ಳುವುದರಲ್ಲಿ ಮಾತ್ರ ಪದೇ ಪದೇ ಎಡವುತ್ತಿದ್ದಾರೆ. ಗಿಲ್ ತಮ್ಮ ನಾಯಕತ್ವದ ವೃತ್ತಿಜೀವನದಲ್ಲಿ ಒಟ್ಟು 41 ಡಿಆರ್ಎಸ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಕೇವಲ ಐದು ಮಾತ್ರ ಯಶಸ್ವಿಯಾಗಿವೆ. ಉಳಿದ ಎಲ್ಲಾ ಡಿಆರ್ಎಸ್ ಎದುರಾಳಿ ತಂಡದ ಪರವಾಗಿ ಹೋಗಿವೆ(PC-PTI).

ಇದೀಗ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಗಾಲೆ ಟೆಸ್ಟ್ ಪಂದ್ಯದಲ್ಲೂ ಗಿಲ್ ಅದೇ ತಪ್ಪನ್ನು ಮಾಡಿದ್ದಾರೆ. ಶ್ರೀಲಂಕಾ ಇನ್ನಿಂಗ್ಸ್ನ 30 ಮತ್ತು 35 ನೇ ಓವರ್‌ಗಳಲ್ಲಿ ಗಿಲ್ ತೆಗೆದುಕೊಂಡ ಡಿಆರ್ಎಸ್ ಎದುರಾಳಿ ತಂಡದ ಪರವಾಗಿ ಹೋಯಿತು. ಇದರಿಂದ ಮೂರು ಡಿಆರ್ಎಸ್ಗಳಲ್ಲಿ ಎರಡು ಡಿಆರ್ಎಸ್ಗಳು ಸುಮ್ಮನೆ ವ್ಯರ್ಥವಾದವು(PC-PTI).

ಡಿಆರ್ಎಸ್ಗಳು ವ್ಯರ್ಥವಾಗುವುದರಲ್ಲಿ ಗಿಲ್ ಅವರ ಪಾತ್ರ ಮಾತ್ರ ಇರುವುದಿಲ್ಲ. ಬದಲಿಗೆ ಗಿಲ್ ಡಿಆರ್ಎಸ್ ತೆಗದುಕೊಳ್ಳುವ ಮೊದಲು ಬೌಲರ್ ಹಾಗೂ ವಿಕೆಟ್ ಕೀಪರ್ ಅನ್ನು ಸಾಕಷ್ಟು ಬಾರಿ ಕೇಳುತ್ತಾರೆ. ಇವರಿಬ್ಬರ ಜೊತೆಗೆ ಇತರ ಆಟಗಾರರು ನೀಡುವ ಸಲಹೆ ಮೇರೆಗೆ ಗಿಲ್ ಡಿಆರ್ಎಸ್ ತೆಗೆದುಕೊಳ್ಳುತ್ತಾರೆ. ಇನ್ನು ಮುಂದಾದರು ಗಿಲ್ ಡಿಆರ್ಎಸ್ ತೆಗೆದುಕೊಳ್ಳುವಾಗ ಎಚ್ಚರಿಕೆಯ ಹೆಜ್ಜೆಯನಿಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ(PC-PTI).