Sign In

By signing in or creating an account, you agree with Associated Broadcasting Company's Terms & Conditions and Privacy Policy.

Super Smash T20: 11 ಸಿಕ್ಸ್, 11 ಫೋರ್: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ನ್ಯೂಜಿಲೆಂಡ್ ಆಟಗಾರ

Michael Bracewell: ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೇಸ್​ವೆಲ್ 11 ಸಿಕ್ಸ್​ ಹಾಗೂ 11 ಫೋರ್​ಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಬ್ರೇಸ್​ವೆಲ್ ಅಂತಿಮವಾಗಿ ಅಜೇಯರಾಗಿ ಉಳಿದರು.

TV9 Web
| Updated By: ಝಾಹಿರ್ ಯೂಸುಫ್

Updated on: Jan 08, 2022 | 7:05 PM

ನ್ಯೂಜಿಲೆಂಡ್​ನಲ್ಲಿರುವ ಸೂಪರ್ ಸ್ಮ್ಯಾಶ್ ಟಿ20 ಲೀಗ್​ ರಣ ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿದೆ. ಶನಿವಾರ ನಡೆದ ಲೀಗ್​ ಪಂದ್ಯದಲ್ಲಿ ವೆಲ್ಲಿಂಗ್ಟನ್ ಫೈರ್ ಬರ್ಡ್ಸ್ ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡದ ಪರ ಜೋಶ್ ಕ್ಲಾರ್ಕಸನ್ 38 ಎಸೆತಗಳಲ್ಲಿ 76 ರನ್​ ಬಾರಿಸಿದ್ದರು. ಪರಿಣಾಮ ಸೆಂಟ್ರಲ್ ಡಿಸ್ಟ್ರಿಕ್ಸ್​ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 227 ರನ್​ಗಳಿಸಿತು.

1 / 5
ಈ 228 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ವೆಲ್ಲಿಂಗ್ಟನ್ ತಂಡವು ಕೇವಲ 43 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಸೋಲು ಕಟ್ಟಿಟ್ಟ ಬುತ್ತಿ ಎಂಬಂತಿದ್ದ ಪಂದ್ಯದ ಚಿತ್ರಣ ಬದಲಿಸಿದ್ದು ನಾಯಕ ಮೈಕೆಲ್ ಬ್ರೇಸ್‌ವೆಲ್. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಬ್ರೇಸ್​ವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

2 / 5
ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೇಸ್​ವೆಲ್ 11 ಸಿಕ್ಸ್​ ಹಾಗೂ 11 ಫೋರ್​ಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಬ್ರೇಸ್​ವೆಲ್ ಅಂತಿಮವಾಗಿ ಅಜೇಯರಾಗಿ ಉಳಿದು ಕೇವಲ 65 ಎಸೆತಗಳಲ್ಲಿ ಅಜೇಯ 141 ರನ್​ ಬಾರಿಸಿದರು. ಪರಿಣಾಮ ವೆಲ್ಲಿಂಗ್ಟನ್ ತಂಡವು  19.5 ಓವರ್​ನಲ್ಲಿ 8 ವಿಕೆಟ್​ 228 ರನ್​ಗಳಿಸಿ 2 ವಿಕೆಟ್​ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.

3 / 5
 ಇದರೊಂದಿಗೆ  ಸೂಪರ್ ಸ್ಮ್ಯಾಶ್​ ಲೀಗ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ದಾಖಲೆ ಕೂಡ ಮೈಕೆಲ್ ಬ್ರೇಸ್​ವೆಲ್ ಪಾಲಾಯಿತು. ಈ ಹಿಂದೆ ಮಾರ್ಟಿನ್ ಗಪ್ಟಿಲ್ 120 ರನ್​ ಬಾರಿಸಿರುವುದು ದಾಖಲೆಯಾಗಿತ್ತು. ಇದೀಗ 141 ರನ್​ ಚಚ್ಚುವ ಮೂಲಕ ಸೂಪರ್ ಸ್ಮ್ಯಾಶ್​ ಅತೀ ಹೆಚ್ಚು ರನ್​ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

4 / 5
ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್​ಗಳಿಸಿದ ದಾಖಲೆಯನ್ನೂ ಕೂಡ ಮೈಕೆಲ್ ಬ್ರೇಸ್​ವೆಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ 122 ರನ್​ ಬಾರಿಸಿದ್ದು ದಾಖಲೆಯಾಗಿತ್ತು. ಇದೀಗ ಅಜೇಯ 141 ರನ್ ಬಾರಿಸಿ ಮೈಕೆಲ್ ಬ್ರೇಸ್​ವೆಲ್ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

5 / 5
Follow us
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್

ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!

ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್

ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ

ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ

ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!

ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ

ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು

ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?

‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು