ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಾಣಿಸಿಕೊಳ್ಳುವುದು ತುಂಬಾ ವಿರಳ. ಇದಕ್ಕೆ ಸಾಕ್ಷಿ 2023ರ ಏಕದಿನ ವಿಶ್ವಕಪ್. ಕಳೆದ ಏಕದಿನ ವಿಶ್ವಕಪ್ ಅನ್ನು ಫಿಟ್ನೆಸ್ ಸಮಸ್ಯೆಯ ಕಾರಣ ಪಾಂಡ್ಯ ಅರ್ಧದಲ್ಲೇ ತೊರೆದಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿದದ್ದು, ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಎಂಬುದು ವಿಶೇಷ.