AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಒಂದೇ ಒಂದು ಅರ್ಧಶತಕವಿಲ್ಲದೆ ವರ್ಷ ಮುಗಿಸಿದ ಸೂರ್ಯಕುಮಾರ್

Suryakumar Yadav's T20 Form: ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವು ತಂಡಕ್ಕೆ ಆತಂಕ ಮೂಡಿಸಿದೆ. ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದರೂ, ಬ್ಯಾಟಿಂಗ್‌ನಲ್ಲಿ ಈ ವರ್ಷ ಒಂದೂ ಅರ್ಧಶತಕ ಗಳಿಸಿಲ್ಲ. ಅವರ ಕಡಿಮೆ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಟಿ20 ವಿಶ್ವಕಪ್‌ಗೆ ಮುನ್ನ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಅನಿವಾರ್ಯತೆ ಇದೆ.

ಪೃಥ್ವಿಶಂಕರ
|

Updated on: Dec 19, 2025 | 10:47 PM

Share
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಇದು ಸರಣಿಯ ಕೊನೆಯ ಪಂದ್ಯ ಹಾಗೂ ಸರಣಿ ನಿರ್ಧಾರಕ ಪಂದ್ಯವಾಗಿದ್ದರಿಂದ ಉಭಯ ತಂಡಗಳ ಮೇಲೆ ಸಾಕಷ್ಟು ಒತ್ತಡವಿತ್ತು. ಅದರಲ್ಲೂ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್​ಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲೂ ಸೂರ್ಯ ಮಿಂಚಲಿಲ್ಲ.

1 / 6
ಎಲ್ಲರಿಗೂ ತಿಳಿದಿರುವಂತೆ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕನಾಗದೆ ಇದ್ದಿದ್ದರೆ ಅವರಿಗೆ ಯಾವತ್ತೋ ತಂಡದಿಂದ ಗೇಟ್​ಪಾಸ್ ಸಿಕ್ಕಿರುತ್ತಿತ್ತು. ಆದರೆ ಆಟಗಾರನಾಗಿ ಸೂರ್ಯ ಯಶಸ್ವಿಯಾಗದಿದ್ದರೂ, ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸೂರ್ಯ ತಂಡದಲ್ಲಿ ಉಳಿದುಕೊಂಡಿದ್ದಾರೆ.

2 / 6
ವಾಸ್ತವವಾಗಿ ಟೀಂ ಇಂಡಿಯಾ ಮುಂದಿನ ವರ್ಷ ಅಂದರೆ ಫೆಬ್ರವರಿ ತಿಂಗಳಲ್ಲಿ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ತಂಡದ ಎಲ್ಲಾ ವಿಭಾಗವೂ ಉತ್ತಮ ಪ್ರದರ್ಶನ ನೀಡುವುದು ಅತ್ಯವಶ್ಯಕವಾಗಿದೆ. ಆದರೆ ತಂಡದಲ್ಲಿ ಉಳಿದವರಿಗೆ ಹೋಲಿಸಿಕೊಂಡರೆ, ನಾಯಕ ಹಾಗೂ ಉಪನಾಯಕನ ಪ್ರದರ್ಶನವೇ ತೀರ ಕಳಪೆಯಾಗಿದೆ. ಅದರಲ್ಲೂ ನಾಯಕ ಸೂರ್ಯಕುಮಾರ್ ಯಾದವ್ ಈ ಇಡೀ ವರ್ಷ ಲೆಕ್ಕಕಷ್ಟೇ ತಂಡದಲ್ಲಿದ್ದಾರೆ.

3 / 6
ಸೂರ್ಯಕುಮಾರ್ ಕಳೆದ 14 ತಿಂಗಳುಗಳಿಂದ ಭಾರತ ಟಿ20 ತಂಡದ ನಾಯಕರಾಗಿದ್ದು, 24 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ 24 ಪಂದ್ಯಗಳಲ್ಲೂ ಸೂರ್ಯಕುಮಾರ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಅದರಲ್ಲೂ ಈ ವರ್ಷ ಸೂರ್ಯಕುಮಾರ್ ಬ್ಯಾಟ್​ನಿಂದ ಒಂದೇ ಒಂದು ಅರ್ಧಶತಕ ಇಲ್ಲದಿರುವುದು ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ.

4 / 6
ಈ ವರ್ಷ 21 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಕೇವಲ 218 ರನ್ ಮಾತ್ರ ಕಲೆಹಾಕಿದ್ದಾರೆ. ಇದರಲ್ಲಿ ಇನ್ನೊಂದು ಕಳವಳಕಾರಿಯಾದ ಸಂಗತಿಯೆಂದರೆ, ಈ 22 ಇನ್ನಿಂಗ್ಸ್​ಗಳಲ್ಲಿ ಅವರ ಸರಾಸರಿ ಕೇವಲ 13.62. ಸ್ಟ್ರೇಕ್ ರೇಟ್ ಕೂಡ ಕೇವಲ120 ರ ಆಸುಪಾಸಿನಲ್ಲಿದೆ. ಈ ವರ್ಷ ಅವರ ಅತ್ಯಧಿಕ ಸ್ಕೋರ್ 47.

5 / 6
2024 ರ ಅಕ್ಟೋಬರ್ 12 ರಂದು ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್​ಗೆ ಅಂದಿನಿಂದ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. 2025 ರಲ್ಲೂ ರನ್ ಬರ ಎದುರಿಸಿದ ಸೂರ್ಯ, ಒಂದೇ ಒಂದು ಅರ್ಧಶತಕವಿಲ್ಲದೆ ಈ ವರ್ಷವನ್ನು ಕೊನೆಗೊಳಿಸಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್​ಗೂ ಮುನ್ನ ನಡೆಯುವ ನ್ಯೂಜಿಲೆಂಡ್ ವಿರುದ್ಧವಾದರೂ ಸೂರ್ಯ ತಮ್ಮ ಫಾರ್ಮ್​ ಕಂಡುಕೊಳ್ಳುತ್ತಾರಾ ಕಾದುನೋಡಬೇಕಿದೆ.

6 / 6
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು

ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ

ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್

ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್